ಚಿಕ್ಕಲ್ಲೂರು ಜಾತ್ರೆ: ಪ್ರಾಣಿ ಬಲಿ ನಿಷೇಧ ಯಶಸ್ವಿ
ಚಾಮರಾಜನಗರ, ಜ.27: ಚಿಕ್ಕಲ್ಲೂರು ಜಾತ್ರೆಯಲ್ಲಿ ನಡೆಯುತ್ತಿದ್ದ ಪ್ರಾಣಿ ಬಲಿ ತಡೆಯುವಲ್ಲಿ ಚಾಮರಾಜನಗರ ಜಿಲ್ಲಾಡಳಿತ ಯಶಸ್ವಿಯಾಗಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆ ಜ.24 ರಿಂದ ಐದು ದಿನಗಳ ಕಾಲ ನಡೆಯುತ್ತಿದ್ದು, ಇಂದು ನಡೆಯಬೇಕಿದ್ದ ಸಹ ಪಂಕ್ತಿ ಭೋಜನಕ್ಕೆ ಪ್ರಾಣಿ ಬಲಿ ನಿಷೇಧ ಮಾಡಿದ್ದರಿಂದ ಜಾತ್ರೆಯ ಕಳೆ ಕುಂದಿತ್ತು.
ಹೈಕೋರ್ಟ್ ಸೂಚನೆಯಂತೆ ಜಿಲ್ಲಾಡಳಿತ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಯಲ್ಲಿ ನಡೆಯುತ್ತಿದ್ದ ಸಾಮೂಹಿಕ ಪ್ರಾಣಿ ಬಲಿ ತಡೆಯುವಲ್ಲಿ ಪೊಲೀಸ್ ಇಲಾಖೆ ನೆರವಿನಿಂದ ಯಶಸ್ವಿಯಾಗಿದೆ. ಜಾತ್ರೆಗೆ ಬರುವ ಪ್ರತಿಯೊಂದು ವಾಹನವನ್ನು ಪರಿಶೀಲನೆ ನಡೆಸುತ್ತಿದ್ದ ಪೊಲೀಸ್ ಸಿಬ್ಬಂದಿ, ವಾಹನದಲ್ಲಿ ಸಾಗಿಸುವ ಕುರಿ-ಮೇಕೆಗಳನ್ನು ವಶಪಡಿಸಿಕೊಂಡು ಪ್ರಾಣಿ ಸಾಗಿಸುವವರ ಮೇಲೆ ಮೊಕದ್ದಮೆ ಹೂಡುತ್ತಿದ್ದರು.್ಕಲ್ಲೂರು ಜಾತ್ರೆಯಲ್ಲಿ ಮದ್ಯಮಾರಾಟ ನಿಷೇಧ ಇದ್ದರೂ, ಅಲ್ಲಲ್ಲಿ ಮದ್ಯ ಸಿಗುತ್ತಿತ್ತು. ಒಟ್ಟಿನಲ್ಲಿ ಯಾವುದೇ ರೀತಿಯ ಗೊಂದಲವಿಲ್ಲದೆ ಜಾತ್ರೆಗೆ ಬಂದವರು ಸಿದ್ದಪ್ಪಾಜಿ ಮೂರ್ತಿಗೆ ಪೂಜೆ ಸಲ್ಲಿಸಿ, ತಮ್ಮ ಭಕ್ತಿ ಪರಿಕಾಷ್ಟೆ ಮೆರೆದರು.್ಕಲ್ಲೂರಿನಲ್ಲಿ ಇದೇ ಪ್ರಥಮ ಬಾರಿಗೆ ಪ್ರಾಣಿ ಬಲಿ ಸಂಪೂರ್ಣ ನಿಷೇಧ ಮಾಡಿ, ಪ್ರಾಣಿ ಬಲಿ ತಡೆಯುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.ಾಗಲೇ ಚಿಕ್ಕಲ್ಲೂರಿನಲ್ಲಿ ಪ್ರಾಣಿ ಬಲಿ ಕೊಡಲು ಸಾಗಿಸುತ್ತಿದ್ದ ನೂರಾರು ಕುರಿಗಳನ್ನು ಹಾಗೂ ಐದು ಸಾವಿರಕ್ಕೂ ಹೆಚ್ಚು ಕೋಳಿಗಳನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.