ಮುಹಮ್ಮದೀಯ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ
ಗಂಗಾವತಿ, ಜ.27: ಸ್ಥಳೀಯ ಮುಹಮ್ಮದೀಯ ಉರ್ದು ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ಕಾರ್ಯಕ್ರಮ ಮಂಗಳವಾರ ಜರಗಿತು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯರಾದ ಬಾಬು ಅತ್ತರ್, ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾಗಿರುವುದರಿಂದ ಎಲ್ಲ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ, ಐಕ್ಯತೆಯ ಶಿಕ್ಷಣ ಹಾಗೂ ನೈತಿಕತೆಯ ಶಿಕ್ಷಣ ನೀಡುವ ಜವಾಬ್ದಾರಿ ಶಿಕ್ಷಕರ ಮೇಲೆ ಎಷ್ಟಿದೆಯೋ, ಪಾಲಕರೂ ಸಹ ತಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಶಿಕ್ಷಣ ಕೊಡಿಸುವುದು ಅಷ್ಟೇ ಮುಖ್ಯವಾಗಿದೆ. ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲು ಶಿಕ್ಷಣವೇ ಅಸ್ತ್ರ ಪ್ರತಿಯೊಬ್ಬರೂ ವಿದ್ಯಾವಂತರಾದಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದರು.
ನಂತರ ಸಹಶಿಕ್ಷಕ ಶೇಖ್ ಫಾರೂಕ್ ಪಟೇಲ್ ಮಾತನಾಡಿ, ಭಾರತ ದೇಶ ಬೃಹತ್ ಸಂವಿಧಾನ ಹೊಂದಿದ್ದು, ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಇಂತಹ ದೇಶದಲ್ಲಿ ಇತ್ತೀಚಿಗೆ ಅಸಹಿಷ್ಣುತೆಯ ಮಾತುಗಳು ಕೇಳಿಬರುತ್ತಿದ್ದು, ಇದನ್ನು ಪ್ರತಿಯೊಬ್ಬರೂ ತಿರಸ್ಕರಿಸಬೇಕು. ನಾವು ವಾಸಿಸುವ ದೇಶದ ಬಗ್ಗೆ ಸಂವಿಧಾನದ ಬಗ್ಗೆ ಪ್ರತಿಯೊಬ್ಬರೂ ಗೌರವ ಹೊಂದಬೇಕು. ರಾಷ್ಟ್ರಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದರು.ವೇಳೆ ಪ್ರತಿಭಾ ಕಾರಂಜಿ, ಕ್ರೀಡಾಕೂಟ, ಮೀಲಾದುನ್ನಬಿ ಸೇರಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸ್ಪರ್ಧೆಗಳು ಜರಗಿದವು.ಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷ ಗೌಸ್‌ಪೀರ್, ಕಾರ್ಯದರ್ಶಿ ಅಕ್ಬರ್‌ಮುಲ್ಲಾ, ಬೇರೂನಿ ಮಸ್ಜಿದ್ ಕಾರ್ಯದರ್ಶಿ ಅಯ್ಯೂಬ್‌ಖಾನ್, ಮುಕ್ಕುಸಾಬ್ ಮನಿಯಾರ, ಮಾಬುಸಾಬ್ ಮನಿಯಾರ್ ಉಪಸ್ಥಿತರಿದ್ದರು.