ಮುಜರಾಯಿ ಹಣ ದುರುಪಯೋಗಕ್ರಮ ಕೈಗೊಳ್ಳದ ತಹಶೀಲ್ದಾರ್ ವಿರುದ್ಧ ಪ್ರತಿಭಟನೆ
ಹುಣಸೂರು,ಜ.27: ಮುಜ ರಾಯಿ ಇಲಾಖೆಗೆ ಸೇರಿದ ದೇವಸ್ಥಾನದ ಹುಂಡಿ ಹಣವನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ತಾಲೂಕು ತಹಶೀಲ್ದಾರ್ ವಿಫಲರಾಗಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತಾಲೂಕು ಕಚೆೇರಿ ಎದುರು ಪ್ರತಿಭಟನೆನಡೆಸಲಾಯಿತು.
ತಾಲೂಕಿನ ಹನಗೋಡು ಹೋಬಳಿ ಕಲ್ಲಹಳ್ಳಿ ಗ್ರಾಪಂ ಗೆ ಸೇರಿದ ಮುತ್ತುರಾಯನ ಹೊಸಳ್ಳಿ ಗ್ರಾಮದ ಮುತ್ತುರಾಯ ಸ್ವಾಮಿ ದೇವಸ್ಥಾನದ ಒಡವೆ ಮತ್ತು ದೇವಸ್ಥಾನದ ಲಕ್ಷಾಂತರ ರೂ. ಹಣವನ್ನು ದುರುಪಯೋಗ ಮಾಡಿರುವ ಬಗ್ಗೆ ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ಧ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.್ರಾಮದ ದೇವರ ಹೆಸರಿನಲ್ಲಿ ಅದೇ ಗ್ರಾಮದ ಹನುಮಂತೆಗೌಡ, ರಾಜೇಗೌಡ, ಜಗದೀಶ್ ಹಾಗೂ ದೇವಸ್ಥಾನದ ಅರ್ಚಕ ಪ್ರೇಮ್‌ಕುಮಾರ್ ಬೆಳ್ಳಿ ಕಿರೀಟ ಮಾಡಿಸಲೆಂದೇ ಗ್ರಾಮಸ್ಥರಿಂದ ಹಣ ಸಂಗ್ರಹ ಮಾಡಿದ್ದಲ್ಲದೆ, ಹುಂಡಿಯಲ್ಲಿದ್ದ ಹಣ ಮತ್ತು ದೇವಸ್ಥಾನಕ್ಕೆ ಸೇರಿದ ಬಸವಗಳನ್ನು ಮಾರಾಟ ಮಾಡಿ ಬಂದ ಸುಮಾರು 6 ಲಕ್ಷಕ್ಕೂ ಹೆಚ್ಚು ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಕ್ರಮ ಕೈಗೊಂಡು, ವಿಚಾರಣೆಗೆ ಒಳಪಡಿಸುವಂತೆ ಇದೇ ಸಂದರ್ಭದಲ್ಲಿ ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ತಾಲೂಕು ಉಪಾಧ್ಯಕ್ಷ ಬಲರಾಮು, ನಗರ ಅಧಕ್ಷ ಮುನಾವರ್ ಪಾಷ, ಕಸಾಪ ಅಧ್ಯಕ್ಷ ಪರಮೇಶ್, ಮಹಿಳಾ ಅಧ್ಯಕ್ಷೆ ಮಹಾದೇವಮ್ಮ, ಕಾರ್ಯಕರ್ತರಾದ ನಾಗರಾಜು, ಸಂಜೀವ, ಸುಬ್ಬಣ್ಣ, ಜಬೀವುಲ್ಲಾ, ವೆಂಕಟೇಶ್, ನಾಗಮ್ಮ, ಸಾಕಮ್ಮ ಸೇರಿದಂತೆ 100ಕ್ಕೂ ಹೆಚ್ಚು ಕಾರ್ಯಕರ್ತರು ಉಪಸ್ಥಿತರಿದ್ದರು.