ಆಯುಷ್ ಜಿಲ್ಲಾಸ್ಪತ್ರೆನಿರ್ಮಿಸಲು ಸರಕಾರಕ್ಕೆಪ್ರಸ್ತಾವನೆ: ಸಿಇಒ ಕಾವೇರಿ ಭರವಸೆ
ಆಯುಷ್ ವೈದ್ಯ ಪದ್ಧತಿ ಕುರಿತ ವಿಚಾರ ಸಂಕಿರಣ
ಚಿಕ್ಕಬಳ್ಳಾಪುರ, ಜ.27: ಆಯುಷ್ ವೈದ್ಯ ಪದ್ಧತಿಗೆ ಪ್ರಾತಿನಿಧ್ಯ ಕಲ್ಪಿಸಲು ಹಾಗೂ ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರದಲ್ಲಿ ಆಯುಷ್ ಜಿಲ್ಲಾಸ್ಪತ್ರೆ ನಿರ್ಮಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಜಿಪಂ ಸಿಇಒ ಬಿ.ಬಿ. ಕಾವೇರಿ ಭರವಸೆ ನೀಡಿದ್ದಾರೆ.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆಯಿಂದ ಆಶಾ ಕಾರ್ಯಕರ್ತೆಯರಿಗಾಗಿ ಹಮ್ಮಿಕೊಂಡಿದ್ದ ಆಯುಷ್ ವೈದ್ಯ ಪದ್ಧತಿ ಕುರಿತ ಜಿಲ್ಲಾಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸನಾತನ ಕಾಲದಿಂದ ಬಳುವಳಿಯಾಗಿ ಬಂದಿರುವ ಆಯುರ್ವೇದ ಪದ್ಧತಿ ಪ್ರಸ್ತುತ ದಿನಗಳಲ್ಲಿ ನೇಪತ್ಯಕ್ಕೆ ಸರಿಯುತ್ತಿರುವುದು ದುರಂತ ಸಂಗತಿ ಎಂದರು. ‘ಮನೆಮದ್ದನ್ನು ಬಳಸಿ’ ಸಣ್ಣಪುಟ್ಟ ಕಾಯಿಲೆಗಳನ್ನು ಗುಣಪಡಿಸಲು ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುವ ಬದಲು, ಸುತ್ತಮುತ್ತಲಿನಲ್ಲಿ ಸಿಗುವ ಗಿಡ ಮೂಲಿಕೆಗಳಿಂದ ಕಾಯಿಲೆಗಳನ್ನು ವಾಸಿ ಮಾಡಿಕೊಳ್ಳಬಹುದಾಗಿದೆ. ಕಡಿಮೆ ಖರ್ಚಿನಲ್ಲಿ ಹಾಗೂ ಪರಿಣಾಮಕಾರಿ ವೈದ್ಯ ಪದ್ಧತಿಯಾಗಿರುವ ಆಯುರ್ವೇದದ ನೂತನ ಪದ್ಧತಿಯ ಅಳವಡಿಕೆಯಿಂದ ಉತ್ತಮ ಆರೋಗ್ಯ ವನ್ನು ಕಂಡುಕೊಳ್ಳಬಹುದಾಗಿದೆ ಎಂದರು.ಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಮಾತನಾಡಿ, ಸಮಾಜದ ಸ್ವಾಸ್ಥ್ಯ ಕಾಪಾಡಲು ಉದ್ಭವಗೊಂಡಿರುವ ಆಯುರ್ವೇದ ಪದ್ಧತಿಯನ್ನು ವೈಜ್ಞಾನಿಕ ದೃಷ್ಟಿಕೋನದ ಸಮರ್ಪಕವಾಗಿ ಬಳಕೆ ಮಾಡಿದಲ್ಲಿ ಪರಿಣಾಮಕಾರಿಯಾದ ಫಲಿತಾಂಶ ಲಭಿಸಲಿದೆ ಎಂದು ತಿಳಿಸಿದರು.ಶಾ ಕಾರ್ಯಕರ್ತರು ಆಯುರ್ವೇದದ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳುವ ಮೂಲಕ ಗ್ರಾಮೀಣಭಾಗದ ಕಟ್ಟಕಡೆಯ ವ್ಯಕ್ತಿಗೂ ಸಹ ವೈದ್ಯ ಪದ್ಧತಿಯನ್ನು ತಲುಪಿಸಿ, ಆಯುರ್ವೇ ದದ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಅರಿವು ಮೂಡಿಸಬೇಕೆಂದು ಸಲಹೆ ನೀಡಿದರು.ಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ.ಎಚ್.ವಿ. ರಂಗಸ್ವಾಮಿ ಮಾತನಾಡಿ, ಅಲೋಪತಿ ಹಾಗೂ ಆಯುರ್ವೇ ದವನ್ನು ಹೋಲಿಕೆ ಮಾಡುವುದು ಸರಿಯಲ್ಲ. ಆಯಸ್ಸನ್ನು ವೃದ್ಧಿಸಬಲ್ಲ ನಮ್ಮ ದೇಶದ ನೆಲ ಮೂಲ ಪದ್ಧತಿಯಾಗಿರುವ ಆಯುರ್ವೇದವು ತನ್ನದೇ ಆದ ವೈಶಿಷ್ಠವನ್ನು ಹೊಂದಿದೆ ಎಂದರು.ಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಆಯುರ್ವೇದ ಪದ್ಧತಿಯಿಂದ ಚಿಕಿತ್ಸೆ ನೀಡುತ್ತಿರುವ ವೈದ್ಯ ರಿಗೆ ಅಭಿನಂದನಾ ಪತ್ರಗಳನ್ನು ನೀತಿ ಪ್ರೋತ್ಸಾಹಿಸ ಲಾಯಿತು. ಆಯುಷ್ ಇಲಾಖೆಯ ಅಧಿಕಾರಿ ಪಿ.ಎಂ. ಇಂದುಮತಿ, ಪೊಲೀಸ್ ಅಧಿಕಾರಿ ಚಿನ್ನಪ್ಪ, ವೈದ್ಯ ರಾಜುಸೇಠ್ ಮತ್ತಿತರರು ಉಪಸ್ಥಿತರಿದ್ದರು.
ಅಲೋಪತಿ ರೋಗವನ್ನು ಶಮನ ಗೊಳಿಸುವುದು. ಆದರೆ ತಲೆತಲಾಂತರಗಳಿಂದ ಬಳುವಳಿಯಾಗಿ ಬಂದಿರುವ ಆಯು ರ್ವೇದ ಪದ್ಧತಿ ರೋಗವನ್ನು ಶಮನಗೊಳಿಸು ವುದರೊಂದಿಗೆ, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಸಂತಸಮಯ ಜೀವನ ಸಾಗಿಸಲು ಸಹಕಾರಿಯಾಗಿದೆ.
-ಡಾ.ಎಂ.ವಿ. ವೆಂಕಟೇಶ
ಜಿಲ್ಲಾಧಿಕಾರಿ, ಕೋಲಾರ ಜಿಲ್ಲೆ