ಸಂವಿಧಾನ ಪ್ರಜಾಪ್ರಭುತ್ವದ ಭದ್ರಬುನಾದಿ: ಸಚಿವ ರಾಮಲಿಂಗಾರೆಡ್ಡಿ
ಕೋಲಾರ, ಜ.27: ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಮಾಧ್ಯಮ ಪ್ರಜಾಪ್ರಭುತ್ವ ವ್ಯವಸ್ಥೆಯ ಮುಖ್ಯ ಆಧಾರ ಸ್ತಂಭಗಳಾಗಿದ್ದು, ಸಂವಿಧಾನವೇ ಪ್ರಜಾಪ್ರಭುತ್ವದ ಭದ್ರ ಬುನಾದಿಯಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಅವರು, ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 67ನೆ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ, ಪಥಸಂಚಲನ ಹಾಗೂ ಗೌರವ ವಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು.
ಸಂವಿಧಾನವು ಎಲ್ಲ ದೇಶವಾಸಿಗಳಿಗೆ ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಒದಗಿಸಿಕೊಟ್ಟಿದ್ದು, ರಾಷ್ಟ್ರೀಯ ಏಕತೆ, ಭಾವೈಕ್ಯತೆ, ದೇಶ ಪ್ರೇಮ ಪ್ರಕಟಗೊಳ್ಳುವ ಸುಸಂದರ್ಭವೇ ಗಣತಂತ್ರ ದಿನ ಎಂದು ಹೇಳಿದರು.
ಧರ್ಮಕ್ಕಿಂತ ದೇಶ ಮುಖ್ಯವಾಗಿದ್ದು, ದೇಶಕ್ಕೆ ಮಾರಕವಾಗುವಂತಹ ಕೆಲಸಗಳಲ್ಲಿ ತೊಡಗದೆ, ದೇಶಕ್ಕೆ ಕೊಡುಗೆಯನ್ನು ನೀಡುವಂತಹ ಜವಾಬ್ದಾರಿ ಯುವ ಸಮುದಾಯದ ಮೇಲಿದೆ ಎಂದರು.ಲ್ಲೆಯನ್ನು ಬಹು ವರ್ಷಗಳಿಂದ ಕಾಡುತ್ತಿರುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸರಕಾರ ಬದ್ಧವಾಗಿದೆ. ಎತ್ತಿನ ಹೊಳೆ ಯೋಜನೆ ಎಷ್ಟೇ ಅಡ್ಡಿ ಆತಂಕಗಳು ಎದುರಾದರೂ ಜಾರಿಯಾಗುತ್ತದೆ, ಅದಕ್ಕೂ ಮೊದಲು ಕೆಸಿವ್ಯಾಲಿ ನೀರು ಜಿಲ್ಲೆಗೆ ಹರಿಯಲಿದೆ ಎಂದರು.ಣರಾಜ್ಯೋತ್ಸವ ಪಥ ಸಂಚಾಲನದಲ್ಲಿ ಸುಮಾರು 22 ತಂಡಗಳು ಭಾಗವಹಿಸಿದ್ದವು, ಧ್ವಜಾರೋಹಣದ ನಂತರ ವಿವಿಧ ಶಾಲಾ ಮಕ್ಕಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾಮೂಹಿಕ ವ್ಯಾಯಾಮ ನಡೆಸಲಾಯಿತು.ಸಂದರ್ಭದಲ್ಲಿ ಸಂಸದ ಕೆ.ಎಚ್.ಮುನಿಯಪ್ಪ, ಜಿಪಂ ಅಧ್ಯಕ್ಷೆ ರತ್ನಮ್ಮ ನಂಜೇಗೌಡ, ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ ಚಂದ್ರ, ಜಿಲ್ಲಾ ರಕ್ಷಣಾಧಿಕಾರಿ ದಿವ್ಯ ಗೋಪಿನಾಥ್, ಜಿ.ಪಂ.ಸಿಇಒ ಎನ್.ಎಂ.ಪನಾಲಿ, ಉಪವಿಭಾಗಾಧಿಕಾರಿ ಮಂಜುನಾಥ್, ಎಎಸ್ಪಿ ಅಬ್ದುಲ್ ಸತ್ತಾರ್, ಡಿಡಿಪಿಐ ಎನ್.ಆಂಜಿನಪ್ಪ, ಕೆಯುಡಿಎ ಅಧ್ಯಕ್ಸ ವೆಂಕಟಮುನಿಯಪ್ಪ, ಮಾಜಿ ಸಚಿವ ನಿಸಾರ್ ಅಹ್ಮದ್, ಡಿಸಿಸಿ ಅಧ್ಯಕ್ಷ ಚಂದ್ರಾರೆಡ್ಡಿ, ಕೆ.ಜಯದೇವ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೆ.ಸಿ.ವ್ಯಾಲಿ ಮತ್ತು ಎತ್ತಿನಹೊಳೆ ಯೋಜನೆಗಳಿಂದ ನೀರು ತರುತ್ತಿರುವುದರಿಂದ ಈ ಜಿಲ್ಲೆಗಳು ಮಲೆನಾಡು ಆಗಲಿದೆ. ಎತ್ತಿನ ಹೊಳೆ ಯೋಜನೆಗೆ ಎದುರಾಗುವ ಯಾವುದೇ ಅಡೆ ತಡೆಗಳನ್ನು ಮೆಟ್ಟಿ ನಿಂತು ಜಿಲ್ಲೆಗೆ ನೀರು ಕೊಡಲಾಗುವುದು. ಇತ್ತೀಚೆಗೆ ಮಳೆಯ ಕೊರತೆ ಉಂಟಾಗಿರುವುದರಿಂದ ಜಿಲ್ಲೆಯಲ್ಲಿ ಅಂತರ್ಜಲ ಕುಸಿತ ಉಂಟಾಗಿ ನೀರಿನ ಸಮಸ್ಯೆ ಕಾಡುತ್ತಿದೆ. ಆದರೆ ಜಿಲ್ಲೆಯ ಜನ ಹೆದರಿಕೊಳ್ಳುವ ಅಗತ್ಯವಿಲ್ಲ, ಎರಡು ಮೂರು ವರ್ಷಗಳಲ್ಲಿ ನೀರಿನ ಸಮಸ್ಯೆ ಬಗೆಹರಿಯಲಿದೆ.
- ರಾಮಲಿಂಗಾರೆಡ್ಡಿರಾಜ್ಯ ರಸ್ತೆ ಸಾರಿಗೆ ಸಚಿವರು, ಕರ್ನಾಟಕ.