ಆರೋಗ್ಯ ಇಲಾಖೆ ನೌಕರರ ಬಾಕಿ
‘ಸರಕಾರದಿಂದ 10.43 ಲಕ್ಷರೂ. ವೈದ್ಯಕೀಯ ವೆಚ್ಚಬಿಡುಗಡೆ’
ಕೋಲಾರ, ಜ.27: ಆರೋಗ್ಯ ಇಲಾಖೆ ನೌಕರರ ಸಂಘದ ಪದಾಧಿಕಾರಿಗಳ ಪರಿಶ್ರಮದಿಂದ ಬಾಕಿ ಇದ್ದ ಇಲಾಖೆ ನೌಕರರ ವೈದ್ಯಕೀಯ ವೆಚ್ಚದ ಬಿಲ್‌ಗಳಿಗೆ ಅಗತ್ಯವಾದ 10.43ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಜಿಲ್ಲಾ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ಮುನಿರಾಜು ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ಲಿಪಿಕ ನೌಕರರ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ವೈದ್ಯಕೀಯ ವೆಚ್ಚದ ಬಾಕಿ ಬಿಡುಗಡೆಗೆ ಶ್ರಮಿಸಿದ ಆರೋಗ್ಯ ಇಲಾಖೆ ನೌಕರರ ಸಂಘದ ಅಧ್ಯಕ್ಷೆ ವಿಜಯಮ್ಮ ಮತ್ತು ಪದಾಧಿಕಾರಿಗಳನ್ನು ಅಭಿನಂದಿಸಿದರು.ಳೆದ ಮೂರು ವರ್ಷಗಳಿಂದ ಜಿಲ್ಲಾ ಆರೋಗ್ಯ ಇಲಾಖೆಯ ಆಧಿಕಾರಿ ಮತ್ತು ಸಿಬ್ಬಂದಿಗಳ ವ್ಯೆದ್ಯಕೀಯ ವೆಚ್ಚದ ಬಿಲ್‌ಗಳಿಗೆ ಅನುದಾನವಿಲ್ಲದೆ ಬಾಕಿ ಇತ್ತು. ಸಂಘದ ಪದಾಧಿಕಾರಿಗಳು ಸರಕಾರದ ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳನ್ನು ಭೇಟಿಯಾಗಿ ಚರ್ಚಿಸಿ ಕೋಲಾರ ಜಿಲ್ಲೆಗೆ ಅಗತ್ಯವಾದ ಅನುದಾನ ಬಿಡುಗಡೆ ಮಾಡಿಸಿದ್ದಾರೆ ಎಂದರು.
ನೌಕರರ ಆನೇಕ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸವುದಾಗಿ ತಿಳಿಸಿದರೂ ಆರೋಗ್ಯ ಇಲಾಖೆಯ ನೌಕರರಿಗೆ ನಿಗದಿತ ಸಮಯದಲ್ಲಿ ವೇತನ ಬಿಡುಗಡೆ ಬಗ್ಗೆ, ಎಚ್.ಆರ್.ಎಂ.ಎಸ್ ಬಗ್ಗೆ ಸುದೀರ್ಘವಾಗಿ ಚರ್ಚಿಸಿಲಾಯಿತು ಎಂದು ತಿಳಿಸಿದರು.