×
Ad

ಪಶು ವೈದ್ಯಕೀಯ ಕಾಲೇಜಿನಲ್ಲಿ ಅಕ್ರಮ ಆರೋಪ: ಡೀನ್ ಅಮಾನತಿಗೆ ಆಗ್ರಹ

Update: 2016-01-28 23:14 IST

ಹಾಸನ, ಜ.28: ಪಶು ವೈದ್ಯಕೀಯ ಕಾಲೇಜ್ ಡೀನ್ ವಸಂತಶೆಟ್ಟಿಯನ್ನು ಅಮಾನತುಗೊಳಿಸಿ, ಕೂಡಲೇ ನಡೆಸಲಾಗಿರುವ ಎಲ್ಲ ಅಕ್ರಮಗಳನ್ನು ಲೋಕಾಯುಕ್ತ ತನಿಖೆಗೆ ನೀಡುವಂತೆ ಅಂಬೇಡ್ಕರ್ ಯುವ ಸೇನೆ ರಾಜ್ಯ ಸಮಿತಿ ಕಾರ್ಯಾಧ್ಯಕ್ಷ ನಾಗರಾಜ್ ಹೆತ್ತೂರ್ ಆಗ್ರಹಿಸಿದ್ದಾರೆ.

 ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ನಗರದ ಸಮೀಪ ಚಿಕ್ಕಹೊನ್ನೇನಹಳ್ಳಿ ಬಳಿ ಇರುವ ಸರಕಾರಿ ಪಶು ವೈದ್ಯಕೀಯ ಮಹಾವಿದ್ಯಾನಿಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮತ್ತು ಸುಳ್ಳು ಅನುಭವ ಪ್ರಮಾಣ ಪತ್ರ ನೀಡುವುದು ಸೇರಿದಂತೆ 8 ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಬರೆ ಎಳೆದಿರುವ ಡಿನ್ ವಸಂತ ಶೆಟ್ಟಿಯ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ದೇ ಕಾಲೇಜಿನಲ್ಲಿ 40 ರಿಂದ 50 ಜನ ಗುತ್ತಿಗೆ ಆಧಾರದ ಮೇಲೆ ಕಳೆದ 6 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ನೇಮಕಾತಿ ಮಾಡಿಕೊಳ್ಳುವ ವೇಳೆ ಸರಕಾರ ಹಾಗೂ ವಿಶ್ವವಿದ್ಯಾಲಯಗಳ ನಿಯಮಗಳಾದ ಹೊರಗುತ್ತಿಗೆ ನೀಡುವುದು, ರೋಸ್ಟರ್ ಪದ್ಧತಿ ಅಳವಡಿಕೆ, ಸಾರ್ವಜನಿಕವಾಗಿ ಪ್ರಕಟಣೆ ಮೂಲಕ ತಿಳಿಸುವುದು ಹಾಗೂ ಸಂದರ್ಶನ ನಡೆಸುವಂತಹ ಯಾವುದೇ ನಿಯಮವನ್ನು ಪಾಲಿಸಿಲ್ಲ ಎಂದು ದೂರಿದರು.

&16ಕೆಲವು ಮಂದಿಗೆ ನಕಲಿ ಅಂಕ ಪಟ್ಟಿ ನೀಡಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. 10ನೆ ತರಗತಿ ವಿದ್ಯಾರ್ಹತೆ ಇರದ 40 ವರ್ಷ ಮೇಲ್ಪಟ್ಟವರನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದಲ್ಲದೆ, ಒಂದೇ ಕುಟುಂಬದ 4 ಜನ ಸದಸ್ಯರು ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡು ಅರ್ಹ ಅಭ್ಯರ್ಥಿಯನ್ನು ನೇಮಕ ಮಾಡಿಕೊಳ್ಳಬೇಕು. ಸುಳ್ಳು ಅನುಭವದ ಪ್ರಮಾಣ ಪತ್ರ ನೀಡಿರುವ ಅಧಿಕಾರಿ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಸರಕಾರಿ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಸೂಕ್ತ ತನಿಖೆ ನಡೆಸಬೇಕು ಮತ್ತು ಕಾಲೇಜಿನ ಡೀನ್ ವಸಂತಶೆಟ್ಟಿಯನ್ನು ಅಮಾನತು ಮಾಡಿ, ಅಕ್ರಮಗಳ ಬಗ್ಗೆ ಲೋಕಾಯುಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದರು.ನೆ ಸಾಲಿನಲ್ಲಿ 75 ಸೀಟ್‌ಗಳಿಗೆ ಮಾತ್ರ ಭಾರತೀಯ ಪಶು ವೈದ್ಯಕೀಯ ಪರಿಷತ್ ಅವಕಾಶ ಕಲ್ಪಿಸಿದೆ. ಆದರೆ ಇಲ್ಲಿ 83 ಸೀಟುಗಳನ್ನು ನೀಡಲಾಗಿದೆ. ಇದರಲ್ಲಿ 8 ವಿದ್ಯಾರ್ಥಿಗಳನ್ನು ಅಕ್ರಮವಾಗಿ ದಾಖಲು ಮಾಡಿಕೊಳ್ಳುವ ಮೂಲಕ ವಿವಿಯ ನಿಯಮವನ್ನು ಗಾಳಿಗೆ ತೂರಿದೆ. ಇಂತಹ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದ್ದು, ಇದರ ಜವಾಬ್ದಾರಿ ವಿವಿ ಹೊರಬೇಕೆಂದು ಆಗ್ರಹಿಸಿದರು.
ಪಶು ಸಂಗೋಪನೆ ಸಚಿವ ಎ.ಮಂಜು ಅವರು ಕೆಲ ದಿನಗಳ ಹಿಂದೆ ಇದೇ ಕಾಲೇಜನ್ನು ಉದ್ಘಾಟಿಸಿದ್ದಾರೆ. ಇಲ್ಲಿನ ಅವ್ಯವಸ್ಥೆ ಬಗ್ಗೆ ಅವರಿಗೆ ತಿಳಿದಿಲ್ಲ. ಕೂಡಲೇ ಕಾನೂನು ಪಾಲನೆಯ ಮೂಲಕ ಕಾಲೇಜು ಉಳಿಸಲು ಗಮನ ನೀಡಬೇಕು ಎಂದು ಒತ್ತಾಯಿಸಿದರು.ಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ಕೆ. ಪ್ರಕಾಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಸಂಪತ್ ಸುಬ್ಬಯ್ಯ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News