×
Ad

ಜಿಪಂ ಚುನಾವಣೆ ಹುಣಸೂರು: 6 ಕ್ಷೇತ್ರಗಳಲ್ಲಿ 4 ಮಹಿಳೆಯರಿಗೆ ಮೀಸಲು

Update: 2016-01-28 23:15 IST

ಮೂರು ಶಾಸಕರ ಪ್ರತಿಷ್ಠೆಯ ಕಣ
ಹುಣಸೂರು, ಜ.28: ಮುಂಬರುವ ಜಿಪಂ ಚುನಾವಣೆೆಯಲ್ಲಿ ತಾಲೂಕಿನಲ್ಲಿ ಮಹಿಳೆಯರಿಗೆ ಹೆಚ್ಚಿನ ಕ್ಷೇತ್ರಗಳು ಲಭಿಸಿದ್ದು, 6 ಜಿಪಂ ಕ್ಷೇತ್ರ್ರಗಳ ಪೈಕಿ 4 ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಿದೆ. ಉಳಿದೆರಡು ಕ್ಷೇತ್ರಗಳಲ್ಲಿ ಮಾತ್ರ ಪುರುಷರಿಗೆ ಅವಕಾಶವಿದೆ. ತಾಲೂಕಿನ 6 ಕ್ಷೇತ್ರಗಳ ಪೈಕಿ ಗಾವಡಗೆರೆ ಸಾಮಾನ್ಯ (ಮಹಿಳೆ), ಬಿಳಿಕೆರೆ ಸಾಮಾನ್ಯ (ಮಹಿಳೆ), ಧರ್ಮಾಪುರ ಹಿಂದುಳಿದ ಎ ವರ್ಗ, ಬನ್ನಿಕುಪ್ಪೆ ಪ.ಜಾ. (ಮಹಿಳೆ), ಚಿಲ್ಕುಂದಸಾಮಾನ್ಯ (ಮಹಿಳೆ), ಹನಗೂಡುಪ.ಪಂಗಡಕ್ಕೆ ಮೀಸಲಾಗಿವೆ.ಬಾರಿ ತಾಲೂಕಿನಲ್ಲಿ ಮೂರು ಜನ ಶಾಸಕರು ತಮ್ಮ ತಮ್ಮ ಕುಟುಂಬದವರನ್ನು ಕಣಕ್ಕಿಳಿಸಿ ಕುಟುಂಬ ರಾಜಕಾರಣಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಧರ್ಮಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಹುಣಸೂರಿನ ಶಾಸಕ ಎಚ್.ಪಿ.ಮಂಜುನಾಥ್ ಅವರ ನಾದಿನಿ ಹಾಲಿ ಮೈಸೂರು ಜಿಪಂ ಅಧ್ಯಕ್ಷೆ ಡಾ. ಪುಷ್ಪಾ ಅಮರ್‌ನಾಥ್ ಈ ಬಾರಿ ಬನ್ನಿಕುಪ್ಪೆ ಮೀಸಲು ಕ್ಷೇತ್ರದತ್ತ ಕಣ್ಣು ಹಾಯಿಸಿದ್ದಾರೆ. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರ ಪತ್ನಿ ಲಲಿತಾ ಜಿ.ಟಿ.ದೇವೇಗೌಡ ಹನಗೂಡು ಕ್ಷೇತ್ರದಿಂದ ಬಿಳಿಕೆರೆ ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರದತ್ತ ಕಾಲಿಡಲು ಸಕಲ ಸಿದ್ಧತೆ ನಡೆಸಿದ್ದಾರೆ. ಹಾಗೆಯೇ ಎಚ್.ಡಿ.ಕೋಟೆ ಶಾಸಕ ಎಸ್.ಚಿಕ್ಕಮಾದು ಅವರು ತಮ್ಮ ಪುತ್ರ ಅನೀಲ್‌ನನ್ನು ಹನಗೂಡು ಪಪಂ ಮೀಸಲು ಕ್ಷೇತದಿಂದ ರಾಜಕೀಯ ರಂಗ ಪ್ರವೇಶ ಮಾಡಿಸಲು ಸಕಲ ಸಿದ್ಧ್ದತೆ ಮಾಡಿದ್ದಾರೆ.
   ಧರ್ಮಾಪುರ (ಬಿ.ಸಿ.ಎಂ-ಎ ವರ್ಗ): ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಜಿಪಂ ವಿರೋಧ ಪಕ್ಷದ ಮಾಜಿ ನಾಯಕ ಡಿ.ಕೆ.ಕುನ್ನೇಗೌಡ ಅವರಿಗೆ ಟಿಕೆಟ್ ಬಹುತೇಕ ಖಚಿತಗೊಂಡಿದ್ದು, ಜೆಡಿಎಸ್‌ನಿಂದ ಕುರುಬರ ಸಮಾಜದ ಪ್ರಬಲ ಆಕಾಂಕ್ಷಿ ಮಾಜಿ ಪುರಸಭಾ ಮಾಜಿ ಅಧ್ಯಕ್ಷ ಕಲ್ಕುಣಿಕೆ ರಮೇಶ್, ಕೃಷಿಕ ಸುರೇಂದ್ರ ಹಾಗೂ ಮಾಜಿ ಜಿಪಂ ಸದಸ್ಯ ಎಚ್.ಎಂ.ಫಝಲುಲ್ಲಾ ಟಿಕೆಟ್‌ಗಾಗಿ ಪಕ್ಷದ ಮುಖಂಡರ ಮೊರೆ ಹೋಗಿದ್ದಾರೆ ಹಾಗೂ ಬಿಜೆಪಿಯಿಂದ ಮಲ್ಲೇಗೌಡನ ಕೊಪ್ಪಲು ಚಂದ್ರೇಗೌಡ, ಮತ್ತು ಲೋಕೇಶ್ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.್ಟಾರೆ ಈ ಬಾರಿ ಹುಣಸೂರಿನ 6 ಕ್ಷೇತ್ರಗಳು ಬಿರುಸಿನ ಚುನಾವಣೆ ಪ್ರತಿಷ್ಠೆಯ ಕಣಗಳಾಗಿ ವಿಜೃಂಭಿಸಲಿವೆ ಮತ್ತು ಎಲ್ಲ ಪಕ್ಷಗಳಿಂದ ಅಭ್ಯರ್ಥಿಗಳ ಆಯ್ಕೆಗಾಗಿ ಭಾರೀ ಕಸರತ್ತು ನಡೆಯುತ್ತಿದ್ದು, ಪಕ್ಷಗಳಿಂದ ಟಿಕೆಟ್ ದೊರಕದಿದ್ದರೂ, ಸ್ವತಂತ್ರವಾಗಿ ನಿಲ್ಲಲು ಮತ್ತಷ್ಟು ಆಕಾಂಕ್ಷಿಗಳು ಉತ್ಸುಕರಾಗಿದ್ದಾರೆ.
   ಬನ್ನಿಕುಪ್ಪೆ (ಪ.ಜಾ ಮಹಿಳೆ): ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಡಾ. ಪುಷ್ಪಾಅಮರ್‌ನಾಥ್ ಮತ್ತು ಜೆಡಿಎಸ್ ನಿಂದ ಅರಸು ಕುಟುಂಬದ ಒಡನಾಡಿ ಬಿಳಿಕೆರೆ ರಾಜುರ ಪತ್ನಿ ಭಾಗ್ಯಾ ನಡುವೆ ಭಾರೀ ಪೈಪೋಟಿ ನಡೆಯಲಿದ್ದು, ಇವರಿಬ್ಬರ ನಡುವಿನ ಮತಗಳನ್ನು ಕಸಿಯಲು ಬಿಜೆಪಿಯಿಂದ ಮಾಜಿ ಜಿಪಂಸದಸ್ಯ ನಾಗರಾಜಮಲ್ಲಾಡಿ ಪುತ್ರಿ ಹಾಗೂ ಸಂಶೋಧನ ವಿದ್ಯಾರ್ಥಿ ಪ್ರಪುಲ್ಲಾಮಲ್ಲಾಡಿ ಮುಂದಾಗಿದ್ದಾರೆ. ಈ ಬಾರಿಯ ಜಿಪಂ ಚುನಾವಣೆಯಲ್ಲಿ ಬನ್ನಿಕುಪ್ಪೆ ಕ್ಷೇತ್ರ ಪ್ರತಿಷ್ಠಿತ ಕ್ಷೇತ್ರವಾಗಿ ಬಿಂಬಿಸುತ್ತಿದೆ.
   ಬಿಳಿಕೆರೆ (ಸಾಮಾನ್ಯ ಮಹಿಳೆ): ಈ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಶಾಸಕ ಜಿ.ಟಿ.ದೇವೇಗೌಡರ ಪತ್ನಿ ಲಲಿತಾ ಜಿ.ಟಿ.ದೇವೇಗೌಡ ತಮ್ಮ ಸ್ವಕ್ಷೇತ್ರ ಹನಗೂಡಿನಿಂದ ಬಂದು ಬಿಳಿಕೆರೆಯಲ್ಲಿ ಸರ್ಧಿಸುತ್ತಿದ್ದು, ಇವರಿಗೆ ಸವಾಲಾಗಿ ಕಾಂಗ್ರೆಸ್‌ನಿಂದ ಹಂದನಹಳ್ಳಿ ಸೋಮಶೇಖರ್‌ರ ಪತ್ನಿ ಗೌರಮ್ಮ ಅಕಾಡಕ್ಕೆ ಇಳಿದಿದ್ದಾರೆ. ಇಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯಾಗಿ ವಕಿಲ ಯೋಗಾನಂದ್ ಪತ್ನಿ ನಾಗಮಣಿಯನ್ನು ನಿಲ್ಲಿಸುವ ಸಾಧ್ಯತೆಗಳು ಹೆಚ್ಚಾಗಿವೆ.
    ಹನಗೂಡು ( ಪಪಂ ಸಾಮಾನ್ಯ): ಈ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಎಚ್.ಡಿ.ಕೋಟೆ ಶಾಸಕ ಎಸ್.ಚಿಕ್ಕಮಾದುತಮ್ಮ ಮಗ ಅನಿಲ್‌ಗೆ ರಾಜಕೀಯ ರಂಗಪ್ರವೇಶ ಮಾಡಿಸಲು ಸಕಲ ಸಿದ್ಧ್ದತೆಗಳನ್ನು ಮಾಡಿಕೊಂಡಿದ್ದು, ಬಹುತೇಕ ಖಚಿತವಾಗಿದೆ. ಅದೇ ರೀತಿ ಕಾಂಗ್ರೆಸ್‌ನಿಂದ ಗಿರಿಜನ ಮುಖಂಡ ಜೆ.ಟಿ.ರಾಜಪ್ಪ ಮತ್ತು ವಕೀಲ ಚನ್ನಬಸಪ್ಪ ಪತ್ನಿ ಮಂಜುಳಾ ನಡುವೆ ಟಿಕೆಟ್‌ಗೆ ಪೈಪೋಟಿ ಇದ್ದು, ಇವರ ಜೊತೆಗೆ ಜಿಪಂ ನಲ್ಲಿ ಡಾ. ಪುಷ್ಪಾಅಮರ್‌ನಾಥ್ ಕಳೆದ ಬಾರಿ ಅಧ್ಯಕ್ಷರಾಗಲು ಬೆಂಬಲಿಸಿದ ಬಿ.ಆರ್.ಕಾವಲ್‌ನ ಚಂದ್ರೇಶ್ ಸಹ ಪ್ರಬಲ ಆಕಾಂಕ್ಷಿ ಆಗಿದು,್ದ ಯಾರಿಗೆ ಪಕ್ಷದ ಅಭಯ ಸಿಗುತ್ತದೋ ಎಂದು ಕಾದು ನೋಡಬೇಕಾಗಿದೆ.
  
ಗಾವಡಗೆರೆ ಕ್ಷೇತ್ರ (ಸಾಮಾನ್ಯ ಮಹಿಳೆ): ಈ ಕ್ಷೇತ್ರದಲ್ಲಿ ಜೆಡಿಎಸ್‌ನ ಹಾಲಿ ಸದಸ್ಯ ದೇವರಾಜ್ ಪ್ರತಿನಿಧಿಸುತ್ತಿದ್ದು, ಈ ಬಾರಿ ಸಾಮಾನ್ಯ ಮಹಿಳೆ ಕ್ಷೇತ್ರವಾಗಿದ್ದು,ತಮ್ಮ ಪತ್ನಿ ರತ್ನಮ್ಮ ಅವರನ್ನು ನಿಲ್ಲಿಸಲು ಮುಂದಾಗಿದ್ದಾರೆ. ತೋಡಾಳ್ ಶಂಕರ್‌ಪತ್ನಿ ಭಾರತಿ, ಸಿರೇನಹಳ್ಳಿ ಬಸವರಾಜು ಪತ್ನಿ ಪುಷ್ಪಲತಾ ಹಾಗೂ ಮಾಜಿ ಜಿಪಂ ಸದಸ್ಯೆ ಉಷಾಚನ್ನಪ್ಪಆಕಾಂಕ್ಷಿಗಳಾಗಿದ್ದು, ಕಾಂಗ್ರೆಸ್ ಪಕ್ಷದಿಂದ ಬಿಳಿಗೆರೆ ಮಂಜು ಪತ್ನಿ ಸಾವಿತ್ರಮ್ಮ, ಉದ್ಯಮಿ ಲೋಕೇಶ್ ಪತ್ನಿ ಕಾಂಚನಬಾಯಿ, ಶಾಸಕರ ಸ್ನೇಹಿತ ಲೋಕೇಶ್ ಪತ್ನಿ ಪುಷ್ಪಲತಾ, ಟಿಕೆಟ್‌ಗೆ ಪೈಪೋಟಿ ನಡೆಸುತ್ತಿದ್ದಾರೆ. ಹಾಗೆಯೇ ಬಿಜೆಪಿಯಿಂದ ಮಾಜಿ ಜಿಪಂ ಸದಸ್ಯ ಜಾಬಗೆರೆ ರಮೇಶ್ ಪತ್ನಿ ಪುಷ್ಪಲತಾ ಮತ್ತು ಪಕ್ಷದ ಜಿಲ್ಲಾ ಮಹಿಳಾ ಗ್ರಾಮಾಂತರ ಘಟಕದ ಮಾಜಿ ಅಧ್ಯಕ್ಷೆ ಕಮಲಮ್ಮ ಸಹ ಆಯ್ಕೆ ಬಯಸಿದ್ದಾರೆ.

ಚಿಲ್ಕುಂದ (ಸಾಮಾನ್ಯ ಮಹಿಳೆ): ಕ್ಷೇತ್ರ ವಂಚಿತ ಹಾಲಿ ಸದಸ್ಯ ಸಿ.ಟಿ.ರಾಜಣ್ಣ ಕಾಂಗ್ರೆಸ್ ನಿಂದ ಅವರ ಪತ್ನಿ ಜಯಲಕ್ಷ್ಮೀ ಕಣಕ್ಕಿಳಿಸುವ ಪ್ರಯತ್ನ ನಡೆದಿದೆ. ಜೊತೆಗೆ ಉದ್ಯಮಿ ಹೊಸೂರು ಅಣ್ಣಯ್ಯ ಪತ್ನಿ ಗೀತಾ ಮತ್ತು ಗ್ರಾಪಂ ಪುನರ್ ವಿಂಗಡಣಾ ಸಮಿತಿ ಸದಸ್ಯೆ ಎ.ಆರ್.ಸುಧಾಮಣಿ ಸಹ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್ ನಿಂದ ಮಾಜಿ ಶಾಸಕ ದಿ. ಡಿ.ಕರಿಯಪ್ಪಗೌಡರ ಪುತ್ರ ಗಣೇಶ್‌ಗೌಡರ ಪತ್ನಿ ರೂಪಾ, ಹುಣಸೆಗಾಲದ ಸುರೇಶ್ ರವರ ಪತ್ನಿ ಭಾಗ್ಯಮ್ಮ, ಎಪಿಎಂಸಿ ಹಾಲಿ ಸದಸ್ಯ ರವಿಗೌಡರ ಪತ್ನಿ ಕೆ.ಎಂ.ರಾಧಾ ಆಕಾಂಕ್ಷಿಗಳಾದರೆ ಬಿಜೆಪಿಯಿಂದ ಕೊತ್ತೇಗಾಲ ಜಯರಾಮೇಗೌಡರ ಪತ್ನಿ ನಳಿನಾಕ್ಷಿ ವಕೀಲ ಯೋಗಾನಂದರ ಪತ್ನಿ ನಾಗಮಣಿ, ಸ್ಪರ್ಧಾ ಆಕಾಂಕ್ಷಿಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News