×
Ad

ಇಂದಿನಿಂದ ಕೃಷಿ ಉತ್ಸವ

Update: 2016-01-28 23:16 IST

ಮಂಡ್ಯ, ಜ.28: ಕ್ಯಾಸ್‌ಕಡೆ ಕಂಪೆನಿ ವತಿಯಿಂದ ರಿಂದ 31ರವರೆಗೆ ನಗರದ ಕರುಬರ ಸಂಘದ ಆವರಣದಲ್ಲಿ ಕೃಷಿ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಕಂಪೆನಿಯ ಎ.ಸಿ. ಮಂಜುನಾಥ್ ತಿಳಿಸಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧುನಿಕ ಕೃಷಿ ಯಂತ್ರೋಪಕರಣಗಳ ಬಗ್ಗೆ ಕೃಷಿಕರಿಗೆ ಮಾಹಿತಿ ನೀಡುವುದರೊಂದಿಗೆ, ಕೃಷಿಯಂತ್ರೋಪಕರಣಗಳ ಪ್ರದರ್ಶನ ವ್ಯವಸ್ಥೆ ಮಾಡಲಾಗುವುದು ಎಂದರು.

 
ಕೃಷಿಯಲ್ಲಿ ಅನೇಕ ಬದಲಾವಣೆಗಳಾಗಿವೆ. ಆದರೂ, ಆಧುನಿಕ ಯಂತ್ರೋಪಕರಣಗಳ ಬಗ್ಗೆ ಬಹಳಷ್ಟು ರೈತರಿಗೆ ಅರಿವು ಮೂಡಿಲ್ಲ. ಆದ್ದರಿಂದ ರೈತರು ಈ ಕೃಷಿ ಉತ್ಸವದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.ಲೇಶ್‌ಗೌಡ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News