×
Ad

‘ಚುಟುಕು ಮಿಂಚು’ ಕೃತಿ ಬಿಡುಗಡೆ

Update: 2016-01-29 23:12 IST

ಮೈಸೂರು, ಜ.29: ಚುಟುಕು ಸಾಹಿತಿ ರತ್ನಾಹಾಲಪ್ಪಹೌಡ ವಿರಚಿತ ‘ಚುಟುಕು ಮಿಂಚು’ ಕೃತಿಯನ್ನು ಶುಕ್ರವಾರ ಹಿರಿಯ ಸಾಹಿತಿ ಪ್ರೊ.ಕೆ.ಬೈರವಮೂರ್ತಿ ಬಿಡುಗಡೆ ಮಾಡಿದ್ದಾರೆ.
ನಗರದ ಸಯ್ಯಜಿರಾವ್ ರಸ್ತೆಯ ಮೆಡಿವೇವ್ ಸಭಾಂಗಣದಲ್ಲಿ ಚುಟುಕು ಸಾಹಿತ್ಯ ಪರಿಷತ್ ಮತ್ತಿ ಕರ್ನಾಟಕ ವೈದ್ಯ ಸಾಹಿತ್ಯ ಪರಿಷತ್ ಆಯೋಜಿದ್ದ ಕಾರ್ಯಕ್ರಮದಲ್ಲಿ ಚುಟುಕು ಮಿಂಚು ಕೃತಿಯನ್ನು ಬಿಡುಗಡೆ ಮಾಡಲಾಯಿತು.ದೇ ವೇಳೆ ನಡೆದ ಸಂಕ್ರಾಂತಿ ಚುಟುಕು ಕವಿಗೋಷ್ಠಿಯನ್ನು ಕರ್ನಾಟಕ ವೈಧ್ಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಶರತ್ ಕುಮಾರ್ ಉದ್ಘಾಟಿಸಿದರು.
ನಂತರ ಮಾತನಾಡಿದ ಶರತ್ ಕುಮಾರ್, ಪ್ರಪಂಚದ ದೇಶಗಳು ಅಭಿವೃದ್ಧಿ ಹೊಂದುತ್ತಿದ್ದಂತೆ ಅತಿಯಾದ ಒತ್ತಡದಿಂದ ಜನರು ಮಾನಸಿಕ ಕಾಯಿಲೆಗಳಿಗೆ ತುತ್ತಾಗುತ್ತಿದಾರೆ. ಇದರಲ್ಲೆ ಒತ್ತಡದ ಜೀವನದಲ್ಲಿರುವ ಜನ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ರಿಯೆಗಳನ್ನು ಕಡೆಗಣಿಸುತ್ತಿದ್ದಾರೆ. ಮಾನವನ ಖಿನ್ನತೆಗಳನ್ನು ತಡೆಗಟ್ಟಲು ಸಾಹಿತ್ಯ. ಕಾವ್ಯಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಟಿ.ವಿ.ರವಿಕುಮಾರ್, ಚುಟುಕು ಸಾಹಿತಿ ರತ್ನ ಹಾಲಪ್ಪಗೌಡ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News