×
Ad

ಗಿರಿಜನರ ವಸತಿ ಸೌಲಭ್ಯದಲ್ಲಿ ಗೋಲ್‌ಮಾಲ್: ಆರೋಪ

Update: 2016-01-29 23:14 IST

ಚಾಮರಾಜನಗರ, ಜ.29: ಅರಣ್ಯ ಗರ್ಭದಲ್ಲಿರುವ ಹಾಡಿಗಳಲ್ಲಿ ವಾಸ ಮಾಡುವ ಗಿರಿಜನ ಮತ್ತು ಸೋಲಿಗ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದು ಮುಖ್ಯವಾಹಿನಿಗೆ ತರಲು ಪ್ರಯತ್ನ ನಡೆಸುತ್ತಿದೆ. ಅಂತಹ ಯೋಜನೆಗಳಲ್ಲಿ ಒಂದಾದ ವಸತಿ ಯೋಜನೆಯಲ್ಲಿ ಗೋಲ್‌ಮಾಲ್ ನಡೆದಿರುವ ಬಗ್ಗೆ ನಾಗರಿಕರಿಂದ ವಲಯದಿಂದ ಗಂಭೀರ ಆರೋಪ ಕೇಳಿಬಂದಿದೆ.

ಚಾಮರಾಜನಗರ ಜಿಲ್ಲೆಯು ಅರಣ್ಯ ಪ್ರದೇಶದಿಂದ ಕೂಡಿರುವ ಜಿಲ್ಲೆಯಾಗಿದ್ದು, ಈ ಅರಣ್ಯ ಗರ್ಭದಲ್ಲಿರುವ ಹತ್ತು ಹಲವಾರು ಗಿರಿಜನ ಮತ್ತು ಸೋಲಿಗ ಸಮುದಾಯದ ಕುಟುಂಬಗಳು ನೂರಾರು ವರ್ಷಗಳಿಂದ ವಾಸ ಮಾಡುತ್ತಾ ಇವೆ. ಇವರಿಗೆ ಸೂರು ಕಲ್ಪಿಸುವ ಯೋಜನೆ ಜಾರಿಗೆ ತಂದರೂ, ಗುತ್ತಿಗೆದಾರರ ಧನ ದಾಹದಿಂದ ಗಿರಿಜನರಿಗೆ ಸೂರಿನ ಕನಸು ಹಾಗೇ ಉಳಿದುಕೊಂಡು ಗುತ್ತಿಗೆದಾರರನ ಜೇಬು ಮಾತ್ರ ಭರ್ತಿಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಾಮರಾಜನಗರ ತಾಲೂಕಿನ ಪುಣಜನೂರು ಗ್ರಾಪಂ ವ್ಯಾಪ್ತಿಗೆ ಬರುವ ಮುನೇಶ್ವರ ಕಾಲನಿ ಶ್ರೀನಿವಾಸಪುರ ಕಾಲನಿಯಲ್ಲಿ ಗುತ್ತಿಗೆದಾರರು ಗಿರಿಜನರಿಗೆ ಸೂರು ಕಟ್ಟಿಕೊಡುವ ಭರವಸೆ ಮಾತ್ರ ಹಾಗೇ ಉಳಿದಿದ್ದು, ಸೂರು ಕಟ್ಟಿಕೊಡುವ ಸಂಪೂರ್ಣ ಹಣವನ್ನು ಬ್ಯಾಂಕ್‌ನಿಂದ ಡ್ರಾ ಮಾಡಿಕೊಂಡ ಗುತ್ತಿಗೆದಾರ ಮನೆಯಲ್ಲಿದ್ದಾನೆ. ಆದರೆ ಅರ್ಧ ಮನೆ ಕಟ್ಟಿಸಿಕೊಂಡು, ಮನೆ ನಿರ್ಮಾಣ ಪೂರ್ಣಗೊಳ್ಳದೇ ಗಿರಿಜನರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.ನೆ ಸಾಲಿನಲ್ಲಿ ಸರಕಾರವು ಜಿಪಂ ಮೂಲಕ ಬಸವ ವಸತಿ ಯೋಜನೆಯಡಿ ಶ್ರೀನಿವಾಸಪುರ ಕಾಲನಿ ಮತ್ತು ಮನೇಶ್ವರ ಕಾಲನಿಗೆ 77 ಮನೆಗಳು ಮಂಜೂರು ಮಾಡಿ, ಗ್ರಾಪಂ ಮೂಲಕ ಫಲಾನುಭವಿಗಳನ್ನು ಆಯ್ಕೆಮಾಡಿ ಪ್ರತಿ ಮನೆಗೆ 75 ಸಾವಿರ ರೂ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಿತ್ತು.
ಮೊದಲೇ ಗುಡ್ಡಗಾಡಿನಲ್ಲಿ ವಾಸ ಮಾಡುವ ಗಿರಿಜನರು ಮತ್ತು ಸೋಲಿಗರು ಹೇಳಿಕೊಳ್ಳುವಷ್ಟು ವಿದ್ಯಾವಂತರಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಆಗಿನ ಪುಣಜನೂರು ಗ್ರಾಪಂ ಅಧ್ಯಕ್ಷ ಶಮೀರ್ ಬಸವ ವಸತಿ ಯೋಜನೆಯ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡುವುದಾಗಿ ಹೇಳಿ, ಫಲಾನುಭವಿಗಳಿಂದ ಬ್ಯಾಂಕ್‌ನಲ್ಲಿ ಹಣ ಡ್ರಾ ಮಾಡಿಕೊಂಡು, ಹೇಳಿಕೊಳ್ಳುವಷ್ಟು ಗುಣಮಟ್ಟದಲ್ಲದ ಮನೆಗಳನ್ನು ನಿರ್ಮಾಣ ಮಾಡಿದ್ದು, ಬಹುತೇಕ ಮನೆಗಳು ಕುಸಿಯುವ ಹಂತದಲ್ಲಿದೆ.ತ್ತಮ ಗುಣಮಟ್ಟದಲ್ಲಿ ಮನೆಗಳು ನಿರ್ಮಾಣ ಮಾಡದೇ ಇರುವುದರಿಂದ ಸೂರಿಗಾಗಿ ಕಾದು ಕುಳಿತ್ತಿರುವ ಇವರ ಪಾಡು ಹೇಳತೀರದಷ್ಟು ಬಿಗಡಾಯಿಸಿದೆ. ಮನೆ ನಿರ್ಮಾಣ ಮಾಡುವಾಗ ಕೈಗೊಳ್ಳುವ ನಿಯಮವನ್ನು ಪಾಲಿಸದ ಶಮೀರ್ ಪಾಷ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮನೆಗಳ ಬೇಸ್‌ಮೆಂಟ್ ಹಾಕಿ ಕಳಪೆ ದರ್ಜೆಯಲ್ಲಿ ಕಾಮಗಾರಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮನೆಗಳ ನಿರ್ಮಾಣ ಯೋಜನೆ ಅನುಷ್ಠಾನಕ್ಕೆ ಬಂದು ಮೂರು ವರ್ಷವಾದರೂ ಬಹುತೇಕ ಮನೆಗಳು ನಿರ್ಮಾಣದ ಹಂತದಲ್ಲೇ ಇದೆ. ಇದಕ್ಕೆ ಆಗಿನ ಪುಣಜನೂರು ಗ್ರಾಪಂ ಕಾರ್ಯದರ್ಶಿ ಸಿದ್ದರಾಜುರವರ ಸಹಕಾರವೂ ಇದೆ. ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳ ಸಹಕಾರದಿಂದಲೇ ವಸತಿ ಯೋಜನೆಯಲ್ಲಿ ಗೋಲ್‌ಮಾಲ್ ನಡೆದಿದ್ದು, ಇದೀಗ ಪ್ರಕರಣ ಬಯಲಿಗೆ ಬಂದಿದೆ ಎಂದು ಹೇಳಲಾಗಿದೆ.
ಪುಣಜನೂರು ಗ್ರಾಪಂ ನಲ್ಲಿ ನಡೆದಿರುವ ವಸತಿಯೋಜನೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ತಾಪಂ ಮತ್ತು ಜಿಪಂ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುವರು ಎಂದು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News