×
Ad

‘ಜನಪರ ಕೆಲಸದಿಂದ ಅಸ್ತಿತ್ವ ಗುರುತಿಸಲು ಸಾಧ್ಯ

Update: 2016-01-29 23:22 IST

’ಮೈಸೂರು, ಜ.29: ಸಂಘ ಸಂಸ್ಥೆಗಳು ಜನಪರವಾದ ಕೆಲಸಗಳನ್ನು ಮಾಡಿದಾಗ ಮಾತ್ರ ತಮ್ಮ ಅಸ್ತ್ಥತ್ವವನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅಭಿಪ್ರಾಯಪಟ್ಟಿದ್ದಾರೆ.
ನಗರದ ಎಂಜಿನಿಯರಿಂಗ್ ಸಭಾಂಗಣದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನೋತ್ಸವದ ಅಂಗವಾಗಿ ಕರ್ನಾಟಕ ಸೇನಾ ಪಡೆ ವತಿಯಿಂದ ಆಯೋಜಿಸಿದ್ದ ಕುವೆಂಪು ಸ್ಮರಣೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು.
        
     ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸಬೇಕು. ಅಂತಹ ಕಾರ್ಯಗಳು ಸಂಸ್ಥೆಗಳ ಗೌರವ ಹೆಚ್ಚುವುದರೊಂದಿಗೆ ಜನಸಮಾನ್ಯರಿಗೆ ಪ್ರೇರಣೆಯಾಗುತ್ತದೆ. ಸಂಸ್ಥೆಯ ಬಗ್ಗೆ ಜನರಿಗೆ ತಪ್ಪುಕಲ್ಪನೆ ಮೂಡಬಾರದು. ಉತ್ತಮ ಕೆಲಸಗಳ ಬಗ್ಗೆ ಗಮನ ನೀಡಿ ಪ್ರೋತ್ಸಾಹಿಸುವ ಕೆಲಸಗಳು ಆಗಬೇಕು ಎಂದರು.ದೇ ಸಂದಭರ್ದಲ್ಲಿ ವಿವಿಧ ಕಾಲೇಜಿನ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಯುವರಾಜ ಕಾಲೇಜಿನ ಪ್ರಾಂಶುಪಾಲ ಡಾ.ಎಚ್. ನಂಜೇಗೌಡ, ಸಮಾಜ ಸೇವಕ ಬಿ.ಆರ್. ನಟರಾಜ್ ಜೋಯಿಸ್, ವಿಜಯ ವಿಠ್ಠಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಸತ್ಯ ಪ್ರಸಾದ್, ವೈದ್ಯ ಮಂಜುನಾಥ್, ವಕೀಲ ಎಂ.ಎನ್ ರಮೇಶ್, ಹಿರಿಯ ಪತ್ರಕರ್ತ ಕೆ.ವಿ.ಶ್ರೀನಿವಾಸ್, ವಿವೃತ್ತ ಪ್ರಾಧ್ಯಾಪಕಿ ಡಾ.ಶಾಂತಶೇಖರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಾರ್ಯಕ್ರಮದಲ್ಲಿ ಸಾಹಿತಿ ಸಿ.ಪಿ. ಕೃಷ್ಣಕುಮಾರ್, ಜನಚೇತನ ಟ್ರಸ್ಟ್‌ನ ಅಧ್ಯಕ್ಷ ಪ್ರಸನ್ನ ಎನ್ ಗೌಡ, ಸಮಾಜ ಸೇವಕ ಕೆ.ರಘುರಾಂ, ಪಾಲಿಕೆ ಸದಸ್ಯ ಪ್ರಶಾಂತಗೌಡ, ಕರ್ನಾಟಕ ಸೇನಾ ಪಡೆಯ ರಾಜ್ಯಾಧ್ಯಕ್ಷ ಚಾ.ರಂ. ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷ ತೇಜೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News