ಶಿವಮೊಗ್ಗ: ಹೆಲ್ಮೆಟ್ ದಂಡ: 963 ಕೇಸ್ ದಾಖಲು, 1.27 ಲಕ್ಷ ರೂ. ವಶ
ಶಿವಮೊಗ್ಗ, ಜ. 30: ಶಿವಮೊಗ್ಗ ಜಿಲ್ಲೆಯಲ್ಲಿ ಹೆಲ್ಮೆಟ್ ದಂಡ ಪ್ರಯೋಗ ಮುಂದುವರಿದಿದೆ. ಜ. 29 ರಂದು ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ ದ್ವಿ ಚಕ್ರ ವಾಹನ ಸವಾರರ ವಿರುದ್ದ 963 ಕೇಸ್ ದಾಖಲಿಸಿರುವ ಪೊಲೀಸ್ ಇಲಾಖೆಯು, ದಂಡ ರೂಪದಲ್ಲಿ 1,27,100 ರೂ.ಗಳನ್ನು ವಶಕ್ಕೆ ಪಡೆದುಕೊಂಡಿದೆ. ಈ ಕುರಿತಂತೆ ಜಿಲ್ಲಾ ಪೊಲೀಸ್ ಇಲಾಖೆಯು ಶನಿವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಪೆ. 29 ರಂದು ದಂಡ ರೂಪದಲ್ಲಿ ಸಂಗ್ರಹಿಸಿದ ಪೊಲೀಸ್ ಉಪ ವಿಭಾಗವಾರು ಅಂಕಿಅಂಶ ಬಿಡುಗಡೆ ಮಾಡಿದೆ.
ಈ ಮಾಹಿತಿಯ ಪ್ರಕಾರ ಶಿವಮೊಗ್ಗ ಉಪ ವಿಬಾಗದಲ್ಲಿಯೇ ಅತೀ ಹೆಚ್ಚು ಕೇಸ್ ದಾಖಲಿಸಿ, ದಂಡ ವಸೂಲಿ ಮಾಡಲಾಗಿದೆ. ವಿವರ: ಶಿವಮೊಗ್ಗ ಉಪ ವಿಭಾಗದಲ್ಲಿ 406 ಕೇಸ್ ದಾಖಲಿಸಿ 49,600 ರೂ. ದಂಡ ವಸೂಲಿ ಮಾಡಲಾಗಿದೆ. ಉಳಿದಂತೆ ದ್ರಾವತಿಯಲ್ಲಿ 218 ಕೇಸ್ ದಾಖಲಿಸಿ 21800 ರೂ., ಸಾಗರದಲ್ಲಿ 94 ಕೇಸ್ ಹಾಕಲಾಗಿದ್ದು ದಂಡ ರೂಪದಲ್ಲಿ 7800 ರೂ. ಸಂಗ್ರಹಿಸಲಾಗಿದೆ. ಶಿಕಾರಿಪುರದಲ್ಲಿ 165 ಕೇಸ್ ದಾಖಲಿಸಿ 25400 ರೂ. ಹಾಗೂ ತೀರ್ಥಹಳ್ಳಿ ಉಪ ವಿಬಾಗದಲ್ಲಿ 80 ಕೇಸ್ ದಾಖಲಿಸಿ 23500 ರೂ.ಗಳನ್ನು ದಂಡ ರೂಪದಲ್ಲಿ ಸಂಗ್ರಹಿಸಲಾಗಿದೆ. ಹಾಗೆಯೇ ಜ. 28 ರಂದು ಶಿವಮೊಗ್ಗ ನಗರದಲ್ಲಿ 390 ಕೇಸ್ ದಾಖಲಾಗಿದ್ದು 44700 ರೂ. ದಂಡ ವಿಧಿಸಲಾಗಿದೆ. ಹಾಗೆಯೇ ಜಿಲ್ಲೆಯಲ್ಲಿ 249 ಕೇಸ್ ದಾಖಲಾಗಿದ್ದು, 27800 ರೂ. ಸಂಗ್ರಹಿಸಲಾಗಿದೆ ಎಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಲಾಗಿದೆ.