×
Ad

ಸಿನೆಮೋತ್ಸವ ಗ್ರಾಮಾಂತರ ಜನತೆಗೂ ತಲುಪಲಿ: ನಟ ಸುಚೇಂದ್ರ ಪ್ರಸಾದ್

Update: 2016-01-30 23:34 IST

ಮಂಜುನಾಥ ದಾಸನಪುರ
ಬೆಂಗಳೂರು, ಜ.30: ನಗರದ ಒರಾಯನ್ ಮಾಲ್‌ನಲ್ಲಿ ನಡೆಯುತ್ತಿರುವ 8ನೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಯುವಜನತೆ ಯೊಂದಿಗೆ ಆಗಮಿಸಿದ್ದ ಹಿರಿಯ ನಟ ಸುಚೇಂದ್ರ ಪ್ರಸಾದ್ ಚಿತ್ರೋತ್ಸವದ ಕುರಿತು, ಯುವಜನತೆಯ ಸಿನೆಮಾಸಕ್ತಿ ಹಾಗೂ ಕನ್ನಡ ಚಿತ್ರರಂಗ ಭವಿಷ್ಯದಲ್ಲಿ ಸಾಗಬೇಕಾದ ದಾರಿಗಳ ಕುರಿತು ‘ವಾರ್ತಾಭಾರತಿ’ ಯೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ವಾ.ಭಾ: ಚಿತ್ರೋತ್ಸವದ ಕುರಿತು ನಿಮ್ಮ ಅಭಿಪ್ರಾಯವೇನು?
 ಸು.ಪ್ರ: ಸಿನೆಮೋತ್ಸವಕ್ಕೆ ಸಾಕಷ್ಟು ಹಣ ಖರ್ಚಾಗಿದೆ. ಆದರೆ, ಇದರ ಲಾಭ ಪಡೆಯುತ್ತಿ ರುವುದು ಕೇವಲ ಎರಡರಿಂದ ಮೂರು ಸಾವಿರ ಮಂದಿ. ಅದರಲ್ಲೂ ಶ್ರೀಮಂತರು ಮಾತ್ರ. ಆದರೆ, ಬೆಂಗಳೂರಿನ ಕೂಗಳತೆ ದೂರದಲ್ಲಿರುವ ಗ್ರಾಮಾಂತರ ಜನತೆಗೆ ಇದರ ಲಾಭ ಆಗುತ್ತಿದೆಯೇ ಎಂಬುದನ್ನು ಸರಕಾರ ಗಮನಿಸಬೇಕಾಗಿತ್ತು. ಮುಂದಿನ ವರ್ಷಗಳಲ್ಲಾದರೂ ಗ್ರಾಮೀಣ ಹಾಗೂ ಸಾಮಾನ್ಯ ಜನತೆಯನ್ನು ಒಳಗೊಳ್ಳುವಂತೆ ಸಿನಿಮೋತ್ಸವ ನಡೆಯಲಿ.
ವಾ.ಭಾ: ಸಿನೆಮಾಸಕ್ತ ವಿದ್ಯಾರ್ಥಿಗಳು ಸಿನೆಮೋತ್ಸವದಲ್ಲಿ ಗಮನಿಸಬೇಕಾದಅಂಶಗಳೇನು?
ು.ಪ್ರ:
ಹೊರ ರಾಜ್ಯದ, ಹೊರ ದೇಶದ ಸಿನೆಮಾ ವಿದ್ಯಾರ್ಥಿಗಳ ಕುರಿತು ನಾನು ಮಾತನಾಡುವುದಿಲ್ಲ. ಆದರೆ, ಕರ್ನಾಟಕದ ಸಿನೆಮಾ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದ ಸಿನೆಮಾ ವ್ಯಾಕರಣವನ್ನೇ ಕಲಿಸುವವರು ಇಲ್ಲವಾಗಿದ್ದಾರೆ. ರಾಜ್ಯದಲ್ಲಿ ಸಿನೆಮಾ ಕುರಿತು ಬರೆಯುವ, ವಿಮರ್ಶಿಸುವ ಪಂಡಿತರೆಲ್ಲರೂ ಸಿನೆಮಾದ ವ್ಯಾಕರಣ ಗೊತ್ತಿಲ್ಲದವರಾಗಿದ್ದಾರೆ. ಹೀಗಾಗಿ ಇಂದು ನಡೆಯುತ್ತಿರುವ ಅಂತಾ ರಾಷ್ಟ್ರೀಯ ಸಿನಿಮೋತ್ಸವಕ್ಕೆ ವಿದೇಶಿ ಚಿತ್ರ ನಿರ್ದೇಶಕರೊಂದಿಗೆ ಸಂವಾದ ನಡೆಸುವುದು ಒಳ್ಳೆಯದು. ಹಾಗೆಯೆ ಇಲ್ಲಿ ತೆರೆ ಕಾಣುತ್ತಿರುವ ಸಿನೆಮಾಗಳನ್ನು ಆಸಕ್ತಿಯಿಂದ ನೋಡುವುದು.
ವಾ.ಭಾ: ಭವಿಷ್ಯದ ಕನ್ನಡ ಸಿನೆಮಾ ಕ್ಷೇತ್ರ ಕುರಿತು ನಿಮ್ಮ ಅಭಿಪ್ರಾಯವೇನು?
ಸು.ಪ್ರ: ಭವಿಷ್ಯದ ಕನ್ನಡ ಸಿನೆಮಾ ರಂಗವನ್ನು ರೂಪಿಸಲು ಅವಕಾಶವಿರುವ ಜಾಗಗಳನ್ನು ಸಿನೆಮಾ ಕುರಿತು ಗಂಧ, ಗಾಳಿ ಇಲ್ಲದವರು ಆಕ್ರಮಿಸಿದ್ದಾರೆ. ಆದರೂ, ಇತ್ತೀಚಿನ ದಿನಗಳಲ್ಲಿ ಯುವಕರು ಸಿನೆಮಾ ಕ್ಷೇತ್ರಕ್ಕೆ ಸೃಜನಾತ್ಮಕವಾದ ಆಯಾಮವನ್ನು ಕೊಡುತ್ತಿರುವುದು ಒಳ್ಳೆಯ ಬೆಳವಣಿಗೆ ಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News