ಕಲ್ಪನಾ ಚಾವ್ಲ ಎಂಬ ಭಾರತದ ಮಿನುಗು ತಾರೆ

Update: 2016-02-01 16:41 GMT

ಇಂದಿಗೆ 13 ವರ್ಷಗಳ ಹಿಂದೆ ನಾಸಾದ ಕೊಲಂಬಿಯ ಬಾಹ್ಯಾಕಾಶ ನೌಕೆ ಭೂಮಿಯ ಕಕ್ಷೆಗೆ ಹಿಂದಿರುಗುವ ಹಾದಿಯಲ್ಲಿ ತನ್ನ 7 ಮಂದಿ ಬಾಹ್ಯಾಕಾಶ ಯಾನಿಗಳ ಸಹಿತ ಪತನವಾಯಿತು. ಆ ನೌಕೆಯೊಂದಿಗೆ ಆಕಾಶದಲ್ಲಿ ಮರೆಯಾದ ಆ ಏಳು ಅನನ್ಯ ಸಾಧಕರಲ್ಲಿ ಒಬ್ಬರು ನಮ್ಮ ದೇಶದ ಕೀರ್ತಿ ಪತಾಕೆಯನ್ನು ಜಗತ್ತು ಮಾತ್ರವಲ್ಲ ಅದರಾಚೆಗೂ ಹಾರಿಸಿದ ಕಲ್ಪನಾ ಚಾವ್ಲ. ಇಂದಿಗೂ ಕೋಟ್ಯಂತರ ಭಾರತೀಯರ ಪಾಲಿಗೆ ಆಕೆ ದೊಡ್ಡ ಸಾಧಕಿ, ಸ್ಪೂರ್ತಿಯ ಸೆಲೆ. ಇಂದು ಆಕೆಯನ್ನು ನೆನೆಯುತ್ತಾ ಆಕೆಯ ಬಗೆಗಿನ ಕೆಲವು ಕುತೂಹಲಕಾರಿ ವಿಷಯಗಳನ್ನು ತಿಳಿದುಕೊಳ್ಳೋಣ . 

ನೀವು ಬಾಹ್ಯಾಕಾಶದಲ್ಲಿ ನಕ್ಷತ್ರ ಸಮೂಹವನ್ನು ನೋಡುವಾಗ, ನೀವು ಯಾವುದೇ ಒಂದು ತುಂಡು ಭೂಮಿಯಿಂದ ಬಂದವರಲ್ಲ ಬದಲಾಗಿ ಇಡೀ ಸೌರ ಮಂಡಲದಿಂದ ಬಂದವರು ಎಂದು ನಿಮಗನಿಸುತ್ತದೆ. 

- ತನ್ನ ಮೊದಲ ಬಾಹ್ಯಾಕಾಶ ಯಾನದ ಬಳಿಕ ಕಲ್ಪನಾ ಹೇಳಿದ್ದು 

* ಕಲ್ಪನಾ ಬಾಹ್ಯಾಕಾಶಕ್ಕೆ ಹೋದ ಪ್ರಪ್ರಥಮ ಹಾಗು ಏಕೈಕ ಭಾರತೀಯ ಮಹಿಳೆ 

* ಕಲ್ಪನಾ ಚಾವ್ಲರ ಮೊದಲ ಹೆಸರು "ಮೊನ್ಟೋ" ಆಗಿತ್ತು . 

* ಶಾಲೆಯಲ್ಲಿ ಕಲಿಕೆಯಲ್ಲೂ ಚುರುಕಿದ್ದ ಕಲ್ಪನಾ ಬರಹ, ಡ್ಯಾನ್ಸ್ ಇತ್ಯಾದಿಗಳಲ್ಲೂ ಸದಾ ಸಕ್ರಿಯವಾಗಿದ್ದಳು 

* ಬಾಹ್ಯಾಕಾಶ ಯಾನಿಯಗುವ ಮೊದಲು ಕಲ್ಪನಾ ನಾಸಾದಲ್ಲಿ ಹಲವು ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. 

* ಕಮರ್ಷಿಯಲ್ ಪೈಲಟ್ ತರಬೇತಿ ಪಡೆದಿದ್ದ ಕಲ್ಪನಾ ಅಮೇರಿಕಾದ ವಿಮಾನಯಾನ ಸಂಬಂಧಿ ಬರಹಗಾರ ಜೀನ್ ಪಿಯರಿ ಹ್ಯಾರಿಸನ್ ರನ್ನು ವಿವಾಹವಾಗಿದ್ದರು. 

* ಅಮೇರಿಕಾ ಪ್ರಜೆಯಾಗಿದ್ದ ಕಲ್ಪನಾ ಪಿಎಚ್ಡಿ ಕೂಡ ಮಾಡಿದ್ದರು . 

* ನಿಧನದ ಬಳಿಕ ಕ್ಷುದ್ರ ಗೃಹವೊಂದಕ್ಕೆ ಹೆಸರಾಗುವ ಸಹಿತ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿ , ಗೌರವಗಳು ಕಲ್ಪನಾರನ್ನು ಅರಸಿಕೊಂಡು ಬಂದವು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor