×
Ad

ಕುಡಿಯುವ ನೀರಿನ ದರ ದುಪ್ಪಟ್ಟು

Update: 2016-02-01 22:35 IST

ಬೆಂಗಳೂರು, ಫೆ. 1: ರಾಜ್ಯ ಸರಕಾರ 30್ಡ40 ವಿಸ್ತೀರ್ಣದ ಕಟ್ಟಡಗಳಿಗೆ ಈ ಹಿಂದೆ ಇದ್ದ ಕುಡಿಯುವ ನೀರಿನ ದರವನ್ನು 150ರೂ.ಗಳಿಂದ 250 ರೂ.ಗಳಿಗೆ ಹೆಚ್ಚಳ ಮಾಡುವ ಮೂಲಕ ಬೆಂಗಳೂರು ನಗರದ ನಾಗರಿಕರಿಗೆ ಶಾಕ್ ನೀಡಿದ್ದು, ನೂತನ ದರ ಇಂದಿನಿಂದ ಜಾರಿ ಮಾಡಿದೆ.
ಕೊಳಚೆ ಪ್ರದೇಶ ಹಾಗೂ ಪ್ರತಿಷ್ಠಿತ ಬಡಾವಣೆ ಎಂಬ ಯಾವುದೇ ಬೇಧ-ಭಾವ ಇಲ್ಲದೆ ಎಲ್ಲ ನಿವಾಸಿಗಳಿಗೂ ಕುಡಿಯುವ ನೀರಿನ ಈ ನೂತನ ದರ ಅನ್ವಯವಾಗಲಿದೆ. 30್ಡ40 ವಿಸ್ತೀರ್ಣಕ್ಕೆ ಮೇಲ್ಪಟ್ಟ ಕಟ್ಟಡಗಳಿಗೆ ಈ ಹಿಂದೆ ಇದ್ದ 200 ರೂ.ಗಳನ್ನು ದುಪ್ಪಟ್ಟು (400 ರೂ.) ಮಾಡಿದೆ.
 ಎಲ್ಲ ರೀತಿಯ ವಸತಿಯೇತರ ಮತ್ತು ವಾಣಿಜ್ಯ ಕಟ್ಟಡಗಳ ಚದರ ಮೀಟರ್‌ಗೆ ಈ ಹಿಂದೆ ಇದ್ದ 300ರೂ.ಗಳನ್ನು 600ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಒಂದಂಸ್ತಿಗಿಂತ ಹೆಚ್ಚು ಮಹಡಿಗಳನ್ನು ನಿರ್ಮಿಸಿಕೊಳ್ಳುವವರು ಪ್ರತಿ ಅಂತಸ್ತಿಗೂ ಶುಲ್ಕವನ್ನು ಪಾವತಿಸಲೇಬೇಕಾಗಿದೆ.
ಕೊಯ್ಲು ಕಡ್ಡಾಯ: 2016ರ ಜನವರಿ 1ರಿಂದ 30್ಡ40 ಅಳತೆಯ ವಿಸ್ತೀರ್ಣದ ಮನೆ ನಿವಾಸಿಗಳು ಕಡ್ಡಾಯವಾಗಿ ಮಳೆನೀರು ಕೊಯ್ಲು ಪದ್ದತಿಯನ್ನು ಅಳವಡಿಸಿ ಕೊಳ್ಳಬೇಕೆಂದು ಆದೇಶಿಸಲಾಗಿದೆ. ಆದರೆ, ಸಾರ್ವಜನಿಕರಿಂದ ನೀರಿನ ದರ ಏರಿಕೆಗೆ ವ್ಯಾಪಕ ವಿರೋಧವೂ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News