×
Ad

ಅಪೌಷ್ಟಿಕತೆ ನಿವಾರಣೆಗೆ ಬರ ಸಹಿಷ್ಣು ‘ಕಿನ್ವ’ ಬೆಳೆ ಬೆಳೆಯಿರಿ

Update: 2016-02-03 23:49 IST

ಹೂಡಿಕೆದಾರರ ಸಮಾವೇಶದಲ್ಲಿ ಕಿನ್ವ ಪ್ರಾತ್ಯಕ್ಷಿಕೆ
ಬೆಂಗಳೂರು, ಫೆ. 3: ದೇಶದಲ್ಲಿನ ಮಕ್ಕಳು ಮತ್ತು ವಯಸ್ಕರಲ್ಲಿನ ಅಪೌಷ್ಟಿಕತೆ ನಿವಾರಣೆಗೆ ‘ಸೂಪರ್ ಫುಡ್’ ಎಂಬ ಖ್ಯಾತಿಗೆ ಪಾತ್ರವಾಗಿರುವ ‘ಕಿನ್ವ’ ಎಂಬ ದಕ್ಷಿಣ ಅಮೆರಿಕ ಮೂಲದ ಬೆಳೆಯನ್ನು ಬೆಳೆಯಿರಿ, ಲಾಭವನ್ನು ಗಳಿಸಿ ಎಂದು ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ(ಸಿಎಫ್‌ಟಿಆರ್‌ಐ) ರೈತರಿಗೆ ಕರೆ ನೀಡಿದೆ.
ಬುಧವಾರ ಇಲ್ಲಿನ ಅರಮನೆ ಮೈದಾನ ದಲ್ಲಿ ‘ಇನ್ವೆಸ್ಟ್-ಕರ್ನಾಟಕ’ ಹೂಡಿಕೆದಾರರ ಸಮಾವೇಶದ ಅಂಗವಾಗಿ ಏರ್ಪಡಿಸಿರುವ ಪ್ರದರ್ಶನ ಮಳಿಗೆಯಲ್ಲಿ ‘ಕಿನ್ವ’ ಎಂಬ ಕಿನೋಪೋಡಿಯೇಸಿ ಬೆಳೆಯ ಪ್ರಾತ್ಯಕ್ಷತೆ ದೇಶ-ವಿದೇಶಗಳ ಕೃಷಿ ಆಸಕ್ತರ ಗಮನವನ್ನು ಸೆಳೆಯಿತು.
ಕಿನ್ವ ಎಂಬ ಧಾನ್ಯವು ಉತ್ತಮ ಪೌಷ್ಟಿಕತೆ ಹೊಂದಿದ್ದು, ‘ಸೂಪರ್ ಫುಡ್’ ಎಂಬ ಖ್ಯಾತಿಗೂ ಪಾತ್ರವಾಗಿದೆ. ಅಪೌಷ್ಟಿಕತೆ ನಿವಾರಣೆಯಲ್ಲಿ ಬಹುಮುಖ್ಯ ಪಾತ್ರ ಹೊಂದಿದೆ. 2013ನೆ ವರ್ಷವನ್ನು ವಿಶ್ವ ಸಂಸ್ಥೆ ‘ಕಿನ್ವ ಅಂತಾರಾಷ್ಟ್ರೀಯ ವರ್ಷ’ವೆಂದು ಘೋಷಿಸಿರುವುದು ‘ಕಿನ್ವ’ ಬೆಳೆಯ ಹೆಮ್ಮೆಯೇ ಸರಿ.
ಕಿನ್ವ ಸುಮಾರು ಶೇ.14ರಷ್ಟು ಪ್ರೊಟೀನ್ ಹೊಂದಿದ್ದು, ಸಾಮಾನ್ಯ ಏಕದಳ ಧಾನ್ಯಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ರುತ್ತದೆ. ಇದು ಗ್ಲೂಟೆನ್ ರಹಿತವಾದ ಧಾನ್ಯ. ಇದರಲ್ಲಿ ಪ್ರೊಟೀನ್ ಹಾಗೂ ಪಿಷ್ಠ, ಸರಿಯಾದ ಪ್ರಮಾಣದ ನಾರಿನಾಂಶ, ಕಬ್ಬಿಣ, ಮೆಗ್ನೀಶಿಯಂ, ಮ್ಯಾಂಗನೀಸ್ ಹಾಗೂ ರೈಬೋಫ್ಲಾವಿನ್ ಭರಿತವಾಗಿದೆ. ಮಾತ್ರವಲ್ಲ ಇದರ ಎಲೆ ಗಳೂ ಪೌಷ್ಟಿಕವಾಗಿದ್ದು ಸೇವಿಸಬಹು ದಾಗಿದೆ.
ಬೇಸಾಯ ಕ್ರಮ: ಕಿನ್ವ ಬೆಳೆಯನ್ನು ಮಳೆಗಾಲ(ಜೂನ್-ಜುಲೈ) ಹಾಗೂ ಚಳಿಗಾಲ(ಅಕ್ಟೋಬರ್-ನವೆಂಬರ್)ದಲ್ಲಿ ಬೆಳೆಯಬಹುದು. ಈ ಬೆಳೆಯು ಬರ ಸಹಿಷ್ಣುತೆ ಹೊಂದಿದ್ದು, ಕಡಿಮೆ ಫಲವತ್ತಾದ ಭೂಮಿಯಲ್ಲೂ ಬೆಳೆಯಬಹುದು ಎಂಬುದು ಗಮನಾರ್ಹವಾಗಿದೆ.
ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಹದಗೊಳಿಸಿ, ಒಂದು ಎಕರೆಗೆ ನಾಲ್ಕು ಟನ್ ಕೊಟ್ಟಿಗೆ ಗೊಬ್ಬರ ಅಥವಾ ಎರಡು ಟನ್ ಎರೆಹುಳು ಗೊಬ್ಬರ ಹಾಕಬೇಕು. ಅಥವಾ ಸಾರಜನಕ, ರಂಜಕ ಹಾಗೂ ಪೊಟ್ಯಾಷ್ ಅನ್ನು 15 ಕೆಜಿಯಂತೆ ಎಕರೆಗೆ ಕೊಡಬಹುದು. ಒಂದು ಎಕರೆಗೆ 500 ಗ್ರಾಂ ಬಿತ್ತನೆ ಬೀಜ ಬೇಕಾಗುತ್ತದೆ.
ಬೀಜವನ್ನು ನೇರವಾಗಿ 45ರಿಂದ 65 ಸೆ.ಮೀ. ಅಂತರದ ಸಾಲುಗಳಲ್ಲಿ ಕಾಲು ಇಂಚು ಆಳದಲ್ಲಿ ಬಿತ್ತನೆ ಮಾಡಬೇಕು. ಆವಶ್ಯಕ ತೇವಾಂಶ ಇದಲ್ಲಿ ಬೀಜ 24 ಗಂಟೆಗಳಲ್ಲಿ ಮೊಳಕೆಯೊಡೆದು 5-7 ದಿನಗಳಲ್ಲಿ ಸಸಿ ಹೊರಬರುತ್ತದೆ. ಸಸಿಯಿಂದ ಸಸಿಗೆ 30-45 ಸೆ.ಮೀ. ಅಂತರ ಇರುವಂತೆ ನೋಡಿಕೊಳ್ಳಬೇಕು.
ಈ ಬೆಳೆಗೆ ಯಾವುದೇ ನಿಯಮಿತ ಸಸ್ಯ ಸಂರಕ್ಷಣಾ ಕ್ರಮ ಅಗತ್ಯವಿಲ್ಲ. ಆದರೂ, ಹುಳುಗಳ ಬಾಧೆ ಕಂಡುಬಂದರೆ ಶೇ.1ರ ಪ್ರಮಾಣದಲ್ಲಿ ಬೇವಿನ ಎಣ್ಣೆಯ ಜೊತೆಗೆ ಶೇ.0.05ರಷ್ಟು ಸೋಪು ನೀರನ್ನು ಬೆರೆಸಿ ಎಲೆಗಳ ಮೇಲೆ ಸಿಂಪಡಿಸಬಹುದು. ಸುಮಾರು ಎರಡರಿಂದ ಮೂರು ಬಾರಿ ಕಳೆ ನಿಯಂತ್ರಿಸುವುದು ಅಗತ್ಯ.

ಬೆಳೆಯು 90ರಿಂದ 120 ದಿನಗಳಲ್ಲಿ ಕಟಾವಿಗೆ ಸಿದ್ಧವಾಗುತ್ತದೆ. ಗಿಡ ಹಳದಿ ಬಣ್ಣಕ್ಕೆ ತಿರುಗಿ ಎಲೆ ಒಣಗಲು ಪ್ರಾರಂಭಿಸಿ ದಾಗ ಗಿಡಗಳನ್ನು ಕಟಾವು ಮಾಡಿ ಬೀಜ ಬೇರ್ಪಡಿಸಬೇಕು. ಆಸಕ್ತ ರೈತರು ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು ಇ-ಮೇಲ್ ಜ್ಟಿಛ್ಚಿಠಿಟ್ಟ ಃ್ಚ್ಛಠ್ಟಿಜಿ.್ಚಟಞ, ವೆಬ್‌ಸೈಟ್ ಡಿಡಿಡಿ.್ಚ್ಛಠ್ಟಿಜಿ.್ಚಟಞ ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News