ಅಭಿವೃದ್ಧಿಪರ ಕಾಂಗ್ರೆಸ್‌ಗೆ ಜಯ ಶಾಸಕ ಮಂಜುನಾಥ್ ವಿಶ್ವಾಸ

Update: 2016-02-04 18:02 GMT

ಹುಣಸೂರು, ಫೆ.4: ಧರ್ಮಾಪುರ ಜಿಪಂ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿ ಕುಡಿಯುವ ನೀರು ಸೌಲಭ್ಯ ಕಲ್ಪಿಸಲಾಗಿದ್ದು, ತಾಲೂಕಿನಾದ್ಯಂತ ಇರುವ 550 ಕಿ.ಮೀ ರಸ್ತೆ ಪೈಕಿ 479 ಕಿ.ಮೀ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ಜಿಪಂ-ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಿಸಲಿದೆ ಎಂದು ಸಂಸದೀಯ ಕಾರ್ಯದರ್ಶಿ, ಶಾಸಕ ಹೆಚ್.ಪಿ.ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ಹುಣಸೂರು ತಾಲೂಕಿನ ಗದ್ದಿಗೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಈವರೆಗೆ ನಡೆಸಲಾಗಿರುವ ಜನಪರ ಅಭಿವೃದ್ಧಿ ಕೆಲಸಗಳು ಚುನಾವಣೆಗೆ ಪೂರಕವಾಗಲಿದೆ ಎಂದು ಹೇಳಿದರು
  ಧರ್ಮಾಪುರ ಜಿಪಂ ಹಾಗೂ ಈ ಭಾಗದ ತಾಪಂ ಕ್ಷೇತ್ರಗಳಿಗೆ ಹಲವು ಆಕಾಂಕ್ಷಿಗಳಿದ್ದು, ಪಕ್ಷ ಟಿಕೆಟ್ ನೀಡುವವರ ಗೆಲುವಿಗೆ ಉಳಿದವರು ಶ್ರಮಿಸಬೇಕು. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತವನ್ನು ಬಲಪಡಿಸಬೇಕೆಂದು ಮನವಿ ಮಾಡಿದರು.
ಪಕ್ಷ ಸೇರ್ಪಡೆ: ಬಿಜೆಪಿಯ ಕೆಂಡಗಣ್ಣಪುರದ ಚೆಲುವರಾಜು, ಜೆಡಿಎಸ್‌ನಬಸವನಹಳ್ಳಿಯ ಕೆಂಡಗಣ್ಣೇಗೌಡ, ಯೋಗೇಶ, ಕರೀಮುದ್ದನಹಳಿಯ ಲೋಕೇಶ, ನಾಗರಾಜೇಗೌಡ, ನರಸಿಂಹೇಗೌಡ, ಶಿವರಾಮೇಗೌಡ, ಶಿವಪುರದ ಹರೀಶ, ವಸಂತ್‌ಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಸಭೆಯಲ್ಲಿ ತಾಪಂ ಮಾಜಿ ಸದಸ್ಯ ದೇವರಾಜ್, ಜಿಪಂ ಮಾಜಿ ಸದಸ್ಯ, ಟಿಕೆಟ್ ಆಕಾಂಕ್ಷಿ ಡಿ.ಕೆ.ಕುನ್ನೇಗೌಡ ಹಾಗೂ ಎಂ.ರಮೇಶ್, ತಾ.ಕಾಂಗ್ರೆಸ್ ಅಧ್ಯಕ್ಷ ಬಸವರಾಜು,ಬಸವರಾಜೇಗೌಡ, ಧರ್ಮಾಪುರ ಗ್ರಾಪಂ ಅಧ್ಯಕ್ಷ ಸ್ವಾಮಿಗೌಡ, ಉಪಾಧ್ಯಕ್ಷ ಗೋವಿಂದರಾಜು, ಮಾಜಿ ಅಧ್ಯಕ್ಷ ಆರ್.ಸ್ವಾವಿ ಮತ್ತಿತರ ಮುಖಮಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News