ಸದಾಚಾರ ಸಂಹಿತೆ, ಚುನಾವಣೆ ವೆಚ್ಚಮಿತಿ ಪಾಲಿಸಲು ಸೂಚನೆ ಜಿಪಂ-ತಾಪಂ ಚುನಾವಣೆ
ಚಾಮರಾಜನಗರ, ಫೆ.4: ಜಿಲ್ಲಾ ಮತ್ತು ತಾಪಂ ಚುನಾವಣೆ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಸದಾಚಾರ ಸಂಹಿತೆ ಹಾಗೂ ಚುನಾವಣೆ ವೆಚ್ಚಕ್ಕೆ ನಿಗದಿ ಮಾಡಿರುವ ಮಿತಿಯನ್ನು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಭಾರತಿ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾ ಹಾಗೂ ತಾಪಂ ಚುನಾವಣೆ ಕುರಿತು ಸದಾಚಾರ ಸಂಹಿತೆ ಹಾಗೂ ಚುನಾವಣಾ ವೆಚ್ಚ ನಿರ್ವಹಣಾ ಬಗ್ಗೆ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆೆಯಲ್ಲಿ ಅವರು ಮಾತನಾಡಿದರು.
ನೀತಿ ಸಂಹಿತೆಯು ಚುನಾವಣಾ ಘೋಷಣೆಯಾದ ಜ.18ರಿಂದಲೇ ಜಾರಿಗೆ ಬಂದಿದ್ದು, ಫೆ.24ರವರೆಗೂ ಜಾರಿಯಲ್ಲಿರುತ್ತದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ನೀತಿಸಂಹಿತೆ ಅನ್ವಯವಾಗುವುದಿಲ್ಲ. ಆದರೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚುನಾವಣಾ ಸಂಬಂಧ ಸಭೆೆ ಸಮಾರಂಭಗಳನ್ನು ನಡೆಸಲು ಅನುಮತಿ ಪಡೆಯಬೇಕು ಎಂದು ಅವರು ತಿಳಿಸಿದರು.ುನಾವಣೆಗೆ ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿ ಅಥವಾ ಅವರ ಪರ ಏಜೆಂಟರು ಚುನಾವಣೆಗೆ ಮಾಡುವ ಖರ್ಚು ಕುರಿತು ಲೆಕ್ಕಪತ್ರ ಇಡಬೇಕಿದೆ. ನಾಮಪತ್ರ ಸಲ್ಲಿಸಿದ ದಿನಾಂಕದಿಂದ ಚುನಾವಣೆ ಫಲಿತಾಂಶ ಘೋಷಣೆಯ ದಿನಾಂಕದವರೆಗೂ ಪ್ರತಿದಿನ ಮಾಡಲಾದ ವೆಚ್ಚವನ್ನು ನಿಯಮಗಳಲ್ಲಿ ತಿಳಿಸಿರುವಂತೆ ವಿವರ ನೀಡಬೇಕು.
ತಾಪಂ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ ಗರಿಷ್ಠ 50 ಸಾವಿರ ರೂ., ಜಿಪಂ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ ಗರಿಷ್ಠ 1 ಲಕ್ಷ ರೂ.ವರೆಗೆ ವೆಚ್ಚ ಮಾಡಲು ಮಿತಿ ಹೇರಲಾಗಿದೆ. ಅಭ್ಯರ್ಥಿಯು ದೈನಂದಿನ ವೆಚ್ಚದ ಲೆಕ್ಕ ವಿವರಗಳನ್ನು ನಿರ್ವಹಿಸಬೇಕು. ವೆಚ್ಚ ನಿಗಾ ವಹಿಸಲು ವೆಚ್ಚ ವೀಕ್ಷಕರು ಹಾಗೂ ನೋಡೆಲ್ ಅಧಿಕಾರಿಗಳು ನೇಮಕವಾಗಿದ್ದಾರೆ ಎಂದು ಅವರು ತಿಳಿಸಿದರು. ುನಾವಣೆ ಸಂದಭರ್ದಲ್ಲಿ ಪ್ರಚಾರಕ್ಕಾಗಿ ಬಳಸುವ ವಾಹನ, ಸಭೆ ಸಮಾರಂಭ, ಮೆರವಣಿಗೆಗೆ ಉಪಯೋಗಿಸಲಾಗುವ ಶಾಮಿಯಾನ, ಕುರ್ಚಿ, ಧ್ವನಿವರ್ಧಕ, ಹೂವು, ಇನ್ನಿತರ ಪರಿಕರಗಳಿಗೆ ಸಾಮಾನ್ಯ ದರವನ್ನು ನಿಗದಿ ಮಾಡಲಾಗಿದೆ. ಈ ಪ್ರಕಾರ ಖರ್ಚು ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದರು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್, ವೆಚ್ಚ ನೋಡೆಲ್ ಅಧಿಕಾರಿ ಮುದ್ದುರಾಜ್, ಎಚ್.ಎಸ್. ಗಂಗಾಧರ್, ಚುನಾವಣಾ ತಹಸೀಲ್ದಾರ್ ನಂದಕಿಶೋರ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಸೈಯದ್ ರಫಿ, ಸಿ.ಎಂ. ಕೃಷ್ಣಮೂರ್ತಿ, ಬ್ಯಾಡಮೂಡ್ಲು ಬಸವಣ್ಣ ಮತ್ತಿತರರು ಉಪಸ್ಥಿತರಿದ್ದರು.
ಚುನಾವಣಾ ಮಾದರಿ ನೀತಿಸಂಹಿತೆಯನ್ನು ಪ್ರತೀ ಪಕ್ಷಗಳು ಹಾಗೂ ಅಭ್ಯರ್ಥಿಗಳು ಪಾಲನೆ ಮಾಡಲೇಬೇಕು. ಮತದಾರರಿಗೆ ಯಾವುದೇ ರೀತಿಯ ಆಸೆ, ಆಮಿಷಗಳನ್ನು ನೀಡುವುದು, ಅಕ್ರಮ ಮದ್ಯ ಸರಬರಾಜು, ಸಾಗಾಟ ಮಾಡುವುದು, ಅಕ್ರಮ ಮತದಾನಕ್ಕೆ ಓಲೈಸುವುದು, ಗ್ರಾಮೀಣ ಮತದಾರ ರನ್ನು ನಗರ ಪ್ರದೇಶಕ್ಕೆ ಕರೆತಂದು ಆಮಿಷಗಳನ್ನು ಒಡ್ಡಿ ಮತ ಹಾಕಿಸುವಂತಿಲ್ಲ. ಇಂತಹ ಪ್ರಕರಣಗಳು ನೀತಿಸಂಹಿತೆ ಉಲ್ಲಂಘನೆಯಾಗುತ್ತದೆ. ಈ ರೀತಿಯ ಚಟುವಟಿಕೆಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.
ಡಿ.ಭಾರತಿ, ಹೆಚ್ಚುವರಿ ಜಿಲ್ಲಾಧಿಕಾರಿ, ಚಾಮರಾಜನಗರ.