×
Ad

ಮುಂಬೈಯಲ್ಲೊಂದು "ಕಳ್ಳ ಮಂಗನ" ಬೇಟೆ

Update: 2016-02-05 23:21 IST

ಮುಂಬೈಯ ಸಯಾನ್ ಪ್ರದೇಶದ ನಿವಾಸಿಗಳ ಪಾಲಿಗೆ ಕಳೆದ ೬ ತಿಂಗಳಿಂದ ದೊಡ್ಡ ತಲೆನೋವಾಗಿದ್ದ ಮಂಗಣ್ಣನನ್ನು ಶುಕ್ರವಾರ ವೃತ್ತಿಪರ ಮಂಗ ಹಿಡಿಯುವವರು ಕೊನೆಗೂ ಬಲೆಗೆ ಹಾಕಿದ್ದಾರೆ. ಈ ಭಾರೀ ಪುಂಡ ಪೋಕರಿ ಮಂಗ ಆಹಾರ "ಕದಿಯುವುದು", ಬಟ್ಟೆ , ದಿಂಬು ಹರಿದುಹಾಕುವುದು ಇತ್ಯಾದಿಗಳ ಮೂಲಕ ಜನರನ್ನು ಗೋಳು ಹೊಯ್ದುಕೊಳ್ಳುತ್ತಿತ್ತು.  ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟರೂ ಅದಕ್ಕೆ ಸಾಧ್ಯವಾಗಲಿಲ್ಲ. ಈ ಮಂಗ ಬೇಟೆಯ ಕೆಲವು ಕುತೂಹಲಕಾರಿ ಚಿತ್ರಗಳು ಇಲ್ಲಿವೆ. 
ಕೃಪೆ : hindustantimes.com 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor