ಬೇಂದ್ರೆ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಆವಶ್ಯಕತೆ ಇದೆ: ಪ್ರೊ.ಮಾಲತಿ
ಬೆಂಗಳೂರು, ಫೆ.5: ಬೇಂದ್ರೆ ಸಾಹಿತ್ಯವನ್ನು ಸಂಶೋಧಿಸಿ ಮುಂದಿನ ಪೀಳಿಗೆಗೆ ಕೊಂಡೊ ಯ್ಯಬಲ್ಲ ಯುವ ಬರಹಗಾರರ ಅಗತ್ಯವಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದ.ರಾ.ಬೇಂದ್ರೆ ಕಾವ್ಯಕೂಟ ಆಯೋಜಿಸಿದ್ದ ದ.ರಾ.ಬೇಂದ್ರೆ ಅವರ 120ನೆ ಹುಟ್ಟುಹಬ್ಬ ಮತ್ತು ಗೀತಗಾಯನ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಲೇಖಕ ಡಾ.ಜಿ.ಕೃಷ್ಣಪ್ಪ ರಚಿಸಿರುವ ‘ತಿರು ತಿರುಗಿ ಹೊಸದಾಗಿರಲಿ’ ಮತ್ತು ‘ಬೇಂದ್ರೆಯವರ ಸಾಹಿತ್ಯದಲ್ಲಿ ಶರಣರ ಚಿಂತನೆ’ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ವರಕವಿ ದ.ರಾ.ಬೇಂದ್ರೆಯವರ ಸಾಹಿತ್ಯ ಅಗಾಧವಾದ ಸಾಗರವಿದ್ದಂತೆ. ಇವರ ಸಾಹಿತ್ಯದಲ್ಲಿ ಪ್ರಕೃತಿ ಸೌಂದರ್ಯ, ಬೆರಗು, ವಿಸ್ಮಯಗಳು ಇದುವರೆಗೂ ರಹಸ್ಯವಾಗಿಯೇ ಉಳಿದಿದೆ. ಈ ನಿಟ್ಟಿನಲ್ಲಿ ಬೇಂದ್ರೆಯವರ ಸಾಹಿತ್ಯವನ್ನು ಸಂಶೋಧಿಸಿ ಮುಂದಿನ ಪೀಳಿ ಗೆಗೆ ಕೊಂಡೊಯ್ಯುವ ಯುವ ಬರಹಗಾರರು ಬೇಕಾಗಿದ್ದಾರೆ ಎಂದು ತಿಳಿಸಿದರು.
ಇಂದಿನ ಮಕ್ಕಳಿಗೆ ಸಿನೆಮಾ, ಕಂಪ್ಯೂ ಟರ್ ಹಾವಳಿಯಿಂದ ಕನ್ನಡ ಸಾಹಿತ್ಯದ ಸೊಗಡು ಮತ್ತು ಕವಿಗಳ ಬಗ್ಗೆ ಅರಿವು ಇಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಅನಿವಾಸಿ ಕನ್ನಡಿಗರು ವಿದೇಶಗಳಲ್ಲಿ ದ.ರಾ.ಬೇಂದ್ರೆಯವರ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಆದರೆ ರಾಜ್ಯದಲ್ಲಿ ಬೇಂದ್ರೆಯವರ ಹುಟ್ಟುಹಬ್ಬಕ್ಕೆ ಮನ್ನಣೆ ಸಿಗದಿರುವುದು ವಿಪರ್ಯಾಸವೆಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಪುಸ್ತಕಗಳ ಬಗ್ಗೆ ಮಾತನಾಡಿದ ಅವರು, ‘ತಿರು ತಿರುಗಿ ಹೊಸದಾಗಿರಲಿ’ ಮತ್ತು ‘ಬೇಂದ್ರೆಯವರ ಸಾಹಿತ್ಯದಲ್ಲಿ ಶರಣರ ಚಿಂತನೆ’ ಕೃತಿಗಳನ್ನು ಓದುತ್ತಿದ್ದರೆ ನಮ್ಮನ್ನು ಬೇಂದ್ರೆಯವರ ಬಳಿ ಕೈ ಹಿಡಿದುಕೊಂಡು ಹೋಗಿ ಬಿಟ್ಟಂತೆ ಭಾಸವಾಗತ್ತದೆೆ. ಬೇಂದ್ರೆ ಯವರ ಜೀವನದ ಪ್ರತಿಯೊಂದು ಘಟ್ಟವನ್ನು ಪುಸ್ತಕಗಳಲ್ಲಿ ಚಿತ್ರಿಸಿದ್ದಾರೆ. ಲೇಖಕರು ಬೇಂದ್ರೆಯವರ ಸಾಹಿತ್ಯದ ಶಿಕ್ಷಕನ ಪಾತ್ರವನ್ನು ನಿಭಾಯಿಸಿದ್ದಾರೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ದ.ರಾ.ಬೇಂದ್ರೆ ಕಾವ್ಯ ಕೂಟದ ಅಧ್ಯಕ್ಷ, ಲೇಖಕ ಡಾ.ಜಿ.ಕೃಷ್ಣಪ್ಪ, ಪ್ರೊ.ಜಿ.ಅಶ್ವತ್ಥ ನಾರಾಯಣ, ನಿವೃತ್ತ ಪ್ರಾಂಶು ಪಾಲ ಪ್ರೊ.ನರಸಿಂಗರಾವ್ ಉಪಸ್ಥಿತರಿದ್ದರು.