×
Ad

‘ಹಜ್‌ಯಾತ್ರಿಗಳಿಗೆ ತೊಂದರೆ ನೀಡುವವರ ವಿರುದ್ಧ ಕ್ರಮ’

Update: 2016-02-06 23:55 IST

ಕೇಂದ್ರ ಸರಕಾರಕ್ಕೆ ಕೆಎಸ್‌ಎಚ್‌ಒಎ ಶಿಫಾರಸುಬೆಂಗಳೂರು, ಫೆ.6: ಹಜ್, ಉಮ್ರಾ ಯಾತ್ರಿಗಳಿಗೆ ಅನಗತ್ಯವಾಗಿ ಕಿರುಕುಳ ನೀಡುವಂತಹ ಖಾಸಗಿ ಟೂರ್ ಆಪರೇಟರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರಕ್ಕೆ ರಾಜ್ಯ ಹಜ್ ಆರ್ಗನೈಸರ್ಸ್‌ ಅಸೋಸಿಯೇಶನ್ (ಕೆಎಸ್‌ಎಚ್‌ಒಎ) ಶಿಫಾರಸು ಮಾಡಿದೆ.

ಶನಿವಾರ ನಗರದಲ್ಲಿ ನಡೆದ ಕೆಎಸ್‌ಎಚ್‌ಒಎ ಸರ್ವ ಸದಸ್ಯರ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ವಿದೇಶಾಂಗ ಇಲಾಖೆಯ (ಹಜ್ ಮತ್ತು ಗಲ್ಫ್) ನಿವೃತ್ತ ಜಂಟಿ ಕಾರ್ಯದರ್ಶಿ ದಯಾಕರ್, ಹಜ್ ಹಾಗೂ ಉಮ್ರಾ ಯಾತ್ರೆಗಾಗಿ ಯಾತ್ರಿಗಳನ್ನು ಕರೆದುಕೊಂಡು ಹೋಗಿ ಅವರಿಗೆ ತೊಂದರೆ, ಕಿರುಕುಳ ಹಾಗೂ ಹಣಕಾಸು ವಿಚಾರದಲ್ಲಿ ತೊಂದರೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರದ ಕಾನೂನಿಗೆ ತಿದ್ದುಪಡಿ ಅಗತ್ಯ ಎಂದರು.ಮ್ರಾ ಹಾಗೂ ಝಿಯಾರತ್ ಕೇಂದ್ರ ಸರಕಾರದ ಕಾನೂನು ವ್ಯಾಪ್ತಿಗೆ ಒಳಪಡುವುದಿಲ್ಲ. ಖಾಸಗಿ ಟೂರ್ ಆಪರೇಟರ್‌ಗಳ ಮೇಲೆ ರಾಜ್ಯ ಅಥವಾ ಕೇಂದ್ರ ಸರಕಾರ ನಿಯಂತ್ರಣವಿರಬೇಕು. ಆಗ ಮಾತ್ರ ಯಾತ್ರಿಗಳಿಗೆ ಆಗುವಂತಹ ಅನಗತ್ಯ ಕಿರುಕುಳವನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಈ ಸಂಬಂಧ ಕೇಂದ್ರ ಸರಕಾರಕ್ಕೆ ಶಿಫಾರಸು ಕಳುಹಿಸಿಕೊಡುವಂತೆ ಅವರು ಸೂಚಿಸಿದರು.ೆಎಸ್‌ಎಚ್‌ಒಎ ಮುಖ್ಯಸ್ಥ ಇಕ್ಬಾಲ್ ಅಹ್ಮದ್ ಸಿದ್ದೀಖಿ ಮಾತನಾಡಿ, ಕೆಲವು ಖಾಸಗಿ ಟೂರ್ ಆಪರೇಟರ್‌ಗಳು ಜನ ಸಾಮಾನ್ಯರಿಗೆ ಕಡಿಮೆ ಮೊತ್ತದಲ್ಲಿ ಯಾತ್ರೆಗೆ ಕರೆದುಕೊಂಡು ಹೋಗುವುದಾಗಿ ಜಾಹೀರಾತುಗಳನ್ನು ನೀಡಿ, ಅವರಿಂದ ಹಣ ಪಡೆದು ನಾಪತ್ತೆಯಾಗುವ ಪ್ರಕರಣಗಳು ಇತ್ತೀಚೆಗೆ ವರದಿಯಾಗುತ್ತಿವೆ ಎಂದರು.ವಿಚಾರಕ್ಕೆ ಸಂಬಂಧಿಸಿದಂತೆ ಹಿಂದಿನ ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಹಾಗೂ ಹಜ್ ಸಚಿವ ರೋಷನ್‌ಬೇಗ್ ನೇತೃತ್ವದಲ್ಲಿ ಖಾಸಗಿ ಟೂರ್ ಆಪರೇಟರ್‌ಗಳ ಸಭೆಯನ್ನು ಕರೆದು ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಜನಸಾಮಾನ್ಯರು ನೋಂದಾಯಿತ ಸಂಸ್ಥೆಗಳ ಮೂಲಕವೇ ತಮ್ಮ ಯಾತ್ರೆಯನ್ನು ಕೈಗೊಳ್ಳುವುದು ಉತ್ತಮ ಎಂದು ಅವರು ಸಲಹೆ ನೀಡಿದರು.
ಪ್ರತಿ ದಿನ ಹೊಸ ಹೊಸ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿವೆ. ಖಾಸಗಿ ಟೂರ್ ಆಪರೇಟರ್‌ಗಳ ಜಾಹೀರಾತುಗಳನ್ನು ಪತ್ರಿಕೆಗಳಲ್ಲಿ ಪ್ರಕಟ ಮಾಡುವಾಗ ಅವರ ನೋಂದಾಯಿತ ಸಂಖ್ಯೆಯನ್ನು ಹಾಕುವುದು ಉತ್ತಮ. ಇದರಿಂದಾಗಿ, ಆ ಸಂಸ್ಥೆಗಳ ಪೂರ್ವಾಪರವನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕೆಎಸ್‌ಎಚ್‌ಒಎ ಅಧ್ಯಕ್ಷ ಶೌಕತ್ ಅಲಿ ಸುಲ್ತಾನ್ ಮಾತನಾಡಿ, ಕೇಂದ್ರ ವಿದೇಶಾಂಗ ಇಲಾಖೆ ಅಡಿಯಲ್ಲಿ ನೋಂದಣಿಯಾದ ಮೊಟ್ಟಮೊದಲ ಹಜ್ ಆರ್ಗನೈಸರ್ಸ್‌ ಗಳ ಸಂಸ್ಥೆ ನಮ್ಮದು. ಪ್ರಸ್ತುತ ನಮ್ಮ ಬಳಿ 50 ಖಾಸಗಿ ಟೂರ್ ಆಪರೇಟರ್‌ಗಳು ಸದಸ್ಯತ್ವವನ್ನು ಹೊಂದಿದ್ದಾರೆ. ಈ ಪೈಕಿ ತಮಿಳುನಾಡು ಹಾಗೂ ಆಂಧ್ರಪ್ರದೇಶದವರು ಇದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News