×
Ad

ಮಂಗಳೂರು ಯುನೈಟೆಡ್ ನ ಕರುಣ್ ನಾಯರ್ 4 ಕೋಟಿ ರೂ.ಗೆ ಮಾರಾಟ

Update: 2016-02-07 14:52 IST

ಬೆಂಗಳೂರು, ಫೆ.7: ಕರ್ನಾಟಕದ ಕರುಣ್ ನಾಯರ್ ಐಪಿಎಲ್ 9ನೆ ಆವೃತ್ತಿಯ ಆಟಗಾರರ ಹರಾಜಿನಲ್ಲಿ 4 ಕೋಟಿ ರೂ.ಗೆ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಸೇರಿಕೊಂಡಿದ್ದಾರೆ.
24ರ ಹರೆಯದ ಕರುಣ್ ನಾಯರ್ ಕರ್ನಾಟಕ ರಣಜಿ ತಂಡದ ಆಟಗಾರ .2009ರಲ್ಲಿ ಕೆಪಿಎಲ್‌ನಲ್ಲಿ ಮಂಗಳೂರು ಯುನೈಟೆಡ್ ಸೇರ್ಪಡೆಗೊಂಡಿದ್ದ ಕರುಣ್ ನಾಯರ್ ಬಳಿಕ ತಂಡದ ನಾಯಕರಾಗಿದ್ದರು. ತಂಡದ ಬ್ಯಾಟಿಂಗ್‌ನ ಬೆನ್ನಲುಬು ಆಗಿದ್ದಾರೆ.
ಕರ್ನಾಟಕ ರಣಜಿ ತಂಡದ ಪರ 31 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ನಾಯರ್ 7 ಶತಕ ಮತ್ತು 8 ಅರ್ಧಶತಕಗಳನ್ನು ಒಳಗೊಂಡ 2,295 ರನ್ ಮತ್ತು 8 ವಿಕೆಟ್ ಪಡೆದಿದ್ದಾರೆ. ಅವರ ಗರಿಷ್ಠ ವೈಯಕ್ತಿಕ ಸ್ಕೋರ್ 328. 50 ಟ್ವೆಂಟಿ-20 ಪಂದ್ಯಗಳಲ್ಲಿ 5 ಅರ್ಧಶತಕಗಳನ್ನು ಒಳಗೊಂಡ 822 ರನ್ ಗಳಿಸಿದ್ದಾರೆ.
     ಮೂಲತ ರಾಜಸ್ಥಾನದ ಕರುಣ್ ನಾಯರ್ 2012ರಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಮೂಲಕ ಐಪಿಎಲ್ ಪ್ರವೇಶಿಸಿದ್ದರು. ಈ ವರೆಗೆ 27 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. 4 ಅರ್ಧಶತಕ ಒಳಗೊಂಡ 520 ರನ್ ಗಳಿಸಿದ್ದಾರೆ. ಔಟಾಗದೆ 73 ರನ್ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. 2014ರಲ್ಲಿ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಸೇರಿದ್ದ ನಾಯರ್ ಈ ಬಾರಿ ಡೆಲ್ಲಿ ಡೇರ್‌ಡೆವಿಲ್ಸ್‌ನಲ್ಲಿ ಮಿಂಚಲಿದ್ದಾರೆ.
 ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಸೇರಿರುವ ಪ್ರತಿಭಾವಂತ ಆಟಗಾರ ಕರುಣ್ ನಾಯರ್ ಅವರನ್ನು  ಮಂಗಳೂರು ಯುನೈಟೆಡ್‌ ಮತ್ತು ಫಿಝ್ಝಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಬಿ.ಎಂ ಫಾರೂಕ್ ಮತ್ತು ಮಂಗಳೂರು ಉತ್ತರ ಶಾಸಕ ಮೊಯ್ದೀನ್ ಬಾವಾ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News