ತುಮಕೂರು: ಸ್ಪರ್ಧಾತ್ಮಕ ಪರೀಕ್ಷೆಗಳ ವೆಬ್‌ಸೈಟ್ ಮತ್ತು ಆಂಡ್ರಾಯ್ಡ್ ಅಪ್ಲಿಕೇಶನ್ ಬಿಡುಗಡೆ
ತುಮಕೂರು, ಫೆ.7: ಮುಂದಿನ ದಿನಗಳಲ್ಲಿ ಸಿಇಟಿ ಸೇರಿದಂತೆ ಹಲವು ಪಠ್ಯ ಪರೀಕ್ಷೆಗಳು ಅನ್‌ಲೈನ್ ಮೂಲಕ ನಡೆಯುವ ಸಾಧ್ಯತೆಯಿರುವುದರಿಂದ ಯುವಜನತೆ ತಂತ್ರಜ್ಞಾನವನ್ನು ಹೆಚ್ಚಿನ ಮಟ್ಟದಲ್ಲಿ ಬಳಕೆ ಮಾಡಿಕೊಂಡು ಪೈಪೋಟಿಗೆ ಸಜ್ಜಾ ಗುವಂತೆ ಶಾಸಕ ಡಾ.ರಫೀಕ್ ಅಹ್ಮದ್ ಕರೆ ನೀಡಿದ್ದಾರೆ.
ನಗರದ ಡಾ.ಶಿವಕುಮಾರಸ್ವಾಮೀಜಿ ವೃತ್ತದಲ್ಲಿರುವ ಎಕ್ಸಲೆಂಟ್ ಇನ್‌ಸ್ಟಿಟ್ಯೂಟ್ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ವೆಬ್‌ಸೈಟ್ ಮತ್ತು ಆ್ಯಂಡ್ರಾಯ್ಡಾ ಅಪ್ಲಿಕೇಷನ್ ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಅವರು, ಈ ಹಿನ್ನೆಲೆಯಲ್ಲಿ ತುಮಕೂರು ನಗರದಲ್ಲಿ ಮುಂದಿನ ದಿನಗಳಲ್ಲಿ ಆಯ್ದ ಭಾಗಗಳಲ್ಲಿ ಫ್ರೀ ವೈಫೈ ನೆಟ್‌ವರ್ಕ್ ದೊರೆಯುವಂತೆ ಯೋಜನೆ ರೂಪಿಸಲಾಗಿದೆ ಎಂದರು.ರಂದು ಅಂದಿನ ಪ್ರಧಾನಿ ರಾಜೀವ್‌ಗಾಂಧಿ ಅವರು ವಿಜ್ಞಾನ ತಂತ್ರಜ್ಞಾನಕ್ಕೆ ನೀಡಿದ ಕೊಡುಗೆಯಿಂದಾಗಿ ಇಂದು ಡಿಜಿಟಲ್‌ಯುಗ ಆರಂಭವಾಗಿದೆ. ಐಟಿ-ಬಿಟಿ ಕ್ಷೇತ್ರದಲ್ಲಿ ಬೆಂಗಳೂರು ದೊಡ್ಡ ಹೆಸರು ಮಾಡಿದೆ. ಇಂದಿನ ಪ್ರಧಾನಿ ಇದಕ್ಕೆ ಮತ್ತಷ್ಟು ಒತ್ತು ನೀಡುವ ಮೂಲಕ ಭಾರತವನ್ನು ತಂತ್ರಜ್ಞಾನ ರಾಷ್ಟ್ರವಾಗಿ ಕಟ್ಟಲು ಒತ್ತು ನೀಡುತ್ತಿದ್ದಾರೆ ಎಂದರು.ಾಗಲೇ ಕೆಲವು ಶಾಲಾ ಕಾಲೇಜುಗಳಲ್ಲಿ ಬೋಧನಾ ಕ್ರಮವೇ ಬದಲಾಗಿದೆ. ಬೋರ್ಡ್‌ಗೆ ಬದಲಾಗಿ ಪ್ರೊಜೆಕ್ಟರ್ ಮೂಲಕ, ಟ್ಯಾಬ್‌ಗಳ ಮೂಲಕ ಪಾಠ ಪ್ರವಚನ ನಡೆಸುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳೆಲ್ಲಾ ಅನ್‌ಲೈನ್ ಮೂಲಕವೇ ನಡೆಸುವ ಮೂಲಕ ಕಾಗದ ರಹಿತ ಆಡಳಿತ ಜಾರಿಯಾಗಲಿದೆ. ಆದ್ದರಿಂದ ಮಕ್ಕಳು ಹೆಚ್ಚಿನ ರೀತಿಯಲ್ಲಿ ಆನ್‌ಲೈನ್ ಆ್ಯಪ್‌ಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಇದರಿಂದ ಅರ್ಜಿ ಹಾಕಲು, ಸಂಬಂಧಪಟ್ಟ ಪುಸ್ತಕಗಳನ್ನು ಓದಲು ಒಂದು ಕಡೆಯಿಂದ ಇನ್ನೊಂದು ಕಡೆಗೆ ಅಲೆಯುವ ಬದಲು ಬೇರೆ ಕೆಲಸ ಕಾರ್ಯ ಮಾಡುತ್ತಲೇ ಬಿಡುವಿನ ಸಮಯದಲ್ಲಿ ಈ ಕೆಲಸ ಮಾಡಬಹುದಾಗಿದೆ ಎಂದು ಶಾಸಕ ಡಾ.ರಫೀಕ್ ಅಹ್ಮದ್ ನುಡಿದರು.
ಪ್ರಾಸ್ತಾವಿಕವಾಗಿ ಎಕ್ಸಲೆಂಟ್ ಇನ್‌ಸ್ಟಿಟ್ಯೂಟ್ ನಿರ್ದೇಶಕ ದೀಪಕ್ ಮಾತನಾಡಿದರು. ಪತ್ರಿಕೋದ್ಯಮಿ ಎಸ್.ನಾಗಣ್ಣ ಮತ್ತಿತರರು ಉಪಸ್ಥಿತರಿದ್ದರು.