ಇವರು ಅವರೇನಾ.. ?
Update: 2016-02-08 22:24 IST
ಟಾಮ್ ಹ್ಯಾಂಕ್ಸ್, ಆಮಿರ್ ಖಾನ್ , ಸಲ್ಮಾನ್ ಖಾನ್ , ರಣದೀಪ್ ಹೂಡ.... ತಾವು ನಿಭಾಯಿಸುವ ಪಾತ್ರದ ಕುರಿತು ಈ ಖ್ಯಾತನಾಮ ನಟರಿಗೆ ಇರುವ ನಿಷ್ಠೆ ನೋಡಿದರೆ ಬೆರಗಾಗದೆ ಇರಲು ಅಸಾಧ್ಯ. ಅಷ್ಟರ ಮಟ್ಟಿಗೆ ತಮ್ಮ ದೇಹವನ್ನು ದಂಡಿಸಿ , ದೊಡ್ಡ ರಿಸ್ಕ್ ತೆಗೆದುಕೊಂಡು ಪಾತ್ರಕ್ಕೆ ಸಿದ್ದವಾಗುವ ಇವರ ವ್ರುತ್ತಿಪರತೆ ಎಲ್ಲರಿಗೂ ಮಾದರಿ. ಇಲ್ಲಿರುವ ಕೆಲವು ಚಿತ್ರಗಳನ್ನು ಈ ಮಟ್ಟಿಗೆ ಚಿತ್ರದ ಪಾತ್ರದೊಳಗೆ ಪ್ರವೇಶಿಸುವುದೇ .. ಎಂದು ನೀವು ಮೂಗಿಗೆ ಬೆರಳಿಡುವುದು ಖಚಿತ . ಅವರಿಗೇನು .. ಬೇಕಾದಷ್ಟು ಹಣ ಸಿಗುತ್ತದೆ ಎಂದು ಹೇಳಿ ಬಿಡುವುದು ಸುಲಭ. ಆದರೆ ಕೇವಲ ಹಣಕ್ಕಾಗಿ ಯಾರಾದರೂ ಇಷ್ಟೆಲ್ಲಾ ಪಾಡು ಪಡುತ್ತಾರಾ ?