×
Ad

ಅರ್ಹರಿಗೆ ಪ್ರಶಸ್ತಿನೀಡುವುದರಿಂದ ಅನಗತ್ಯಚರ್ಚೆಗೆ ಕಡಿವಾಣ:ಪಿಚ್ಚಳ್ಳಿಶ್ರೀನಿವಾಸ್

Update: 2016-02-08 22:54 IST

ತುಮಕೂರು: ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭ

ತುಮಕೂರು, ಫೆ.8: ಜ್ಞಾನಪೀಠ ಪ್ರಶಸ್ತಿಯಿಂದ ಹಿಡಿದು ಸಣ್ಣಪುಟ್ಟ ಸಾಹಿತ್ಯಿಕ ಪ್ರಶಸ್ತಿಗಳನ್ನು ನೀಡಿದಾಗಲೂ ಸಾಕಷ್ಟು ಚರ್ಚೆಗಳು ನಡೆಯುತಿದ್ದು, ಅರ್ಹರಿಗೆ ಪ್ರಶಸ್ತಿಗಳು ದೊರೆತಾಗ ಮಾತ್ರ ಇಂತಹ ಅನಗತ್ಯ ಚರ್ಚೆಯಿಂದ ಮುಕ್ತಿ ಪಡೆಯಬಹುದು ಎಂದು ಕರ್ನಾಟಕ ಜನಪದ ಅಕಾಡಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ.


  ನಗರದ ಶ್ರೀಸಿದ್ದಗಂಗಾ ಮಹಿಳಾ ಪದವಿ ಕಾಲೇಜಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಅನನ್ಯ ಪ್ರಕಾಶನ ಏರ್ಪಡಿಸಿದ್ದ ಕೆ.ಸಾಂಬಶಿವಪ್ಪ ಅವರ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಿದ್ದ ಅವರು, ಪ್ರತಿಯೊಂದು ಪ್ರಶಸ್ತಿಗಳು ಬಂದಾಗಲೂ ಪ್ರಶಸ್ತಿಯ ಆಯ್ಕೆಯ ಮಾನದಂಡಗಳ ಕುರಿತು ಚರ್ಚೆಗಳು ನಡೆಯುತ್ತಿರುವುದು ದುರದೃಷ್ಟಕರ ಎಂದರು.ಂದು ಸತ್ಯ ಹೇಳುವುದಕ್ಕೂ ಭಯಪಡುವಂತಹ ಸ್ಥಿತಿಯಿದೆ. ಸತ್ಯ ಹೇಳಿದರೆ ಗುಂಡಿಗೆ ಬಲಿಯಾಗಬೇಕಾಗುತ್ತದೆ ಎಂಬ ಆತಂಕ ಕಾಡುತ್ತದೆ. ಇದಕ್ಕೆ ಅಧೀರರಾಗುವ ಅಗತ್ಯವಿಲ್ಲ. ಎಲ್ಲಿಯವರೆಗೆ ಸಾಹಿತಿಗಳು, ಕಲಾವಿದರು ಸತ್ಯವನ್ನು ಜನರ ಮುಂದಿಡುತ್ತಾರೆ ಅಲ್ಲಿಯವರೆಗೆ ಪ್ರಜಾಪ್ರಭುತ್ವ ಗಟ್ಟಿಯಾಗಿರುತ್ತದೆ.ಈ ನಿಟ್ಟಿನಲ್ಲಿ ಸಾಹಿತಿಗಳು ತಮ್ಮ ಬರವಣಿಗೆಯನ್ನು ಮತ್ತಷ್ಟು ಉರಿಗೊಳಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.ಟ್ಟುಕಥೆ ಮತ್ತು ಅನುಭವದ ಕಥನ ಇವುಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ.ಅನುಭವ ಕಥನಗಳಲ್ಲಿ ಬದುಕಿನ ಸಾರವೇ ಅಡಗಿದೆ. ನಮ್ಮ ತತ್ವಪದಕಾರರು, ಸೂಫಿ ಸಂತರು, ವಚನಕಾರರ ತಮ್ಮ ಅನುಭವವನ್ನೇ ಜನರ ಮುಂದಿಡುವ ಮೂಲಕ ಸಮಾಜಕ್ಕೆ ಒಳಿತನ್ನೇ ಬಯಸಿದ್ದಾರೆ.ವಚನ ಕ್ರಾಂತಿಯ ಮೂಲಕ ಜಗತ್ತಿನ ಒಳಿತನ್ನು ಬಯಸಿದ ಬಸವಣ್ಣನನ್ನೂ ಸೇರಿದಂತೆ ಎಲ್ಲ ವಚನಕಾರರನ್ನು ಒಂದೊಂದು ಜಾತಿಗೆ ಸೀಮಿತಗೊಳಿಸಿ ಜಾತಿ ಕೂಪದಿಂದ ಹೊರಬರದಂತೆ ಕಟ್ಟಿ ಹಾಕಲಾಗಿದೆ.ಅವರು ಹೊರ ತರುವ ಗುರುತರ ಜವಾಬ್ದಾರಿ ಸಾಹಿತಿಗಳ ಮೇಲಿದೆ.ಮನಬಿಚ್ಚಿ ಮಾತನಾಡುವ, ಬರೆಯುವ ಮೂಲಕ ಸತ್ಯವನ್ನು ಜನರ ಮುಂದಿಡಬೇಕಿದೆ ಎಂದರು.ಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಲೇಖಕಿ ಸುಧಾ ಚಿದಾನಂದಗೌಡ,ನಾನು ಬೆಳೆದು ಬಂದ ಪರಿಸರ, ಅಲಮಟ್ಟಿ ಹಿನ್ನೀರಿನಿಂದಾಗಿ ಬದಲಾಗುವ ಪರಿಸರ ಹೀಗೆ ಅನೇಕ ಘಟಕಗಳು ನನ್ನ ಬರವಣಿಗೆಗೆ ಸಹಕಾರಿಯಾಗಿವೆ. ತೋಚಿದನ್ನು ಬರೆದಿದ್ದೇನೆ. ಅದನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತೋಷದ ವಿಚಾರವಾಗಿದೆ ಎಂದರು.ಾರ್ಯಕ್ರಮದಲ್ಲಿ ಪ್ರಿಯಸಖಿ ಪಾತರಗಿತ್ತಿ ಪುಸ್ತಕ ಕುರಿತು ಮಾತನಾಡಿದ ಹಿರಿಯ ಲೇಖಕ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ,60ರ ದಶಕದವರೆಗೆ ಪ್ರಬಂಧಗಳನ್ನು ಒಂದು ಚೌಕಟ್ಟಿನೊಳಗೆ ಮಾತ್ರ ವ್ಯಾಖ್ಯಾನಿಸಲಾಗುತ್ತಿತ್ತು. ನಂತರ ಚೌಕಟ್ಟನ್ನು ಮೀರಿ ಬೆಳೆಯಲು ಆರಂಭಿಸಿತು. ವಿ.ಕೃ.ಗೋಕಾಕ್ ಅವರು ಕಾವ್ಯಕ್ಕೆ ಛಂದಸ್ಸಿನ ಉಲ್ಲಂಘನೆ ಕುರಿತು ವ್ಯಾಖ್ಯಾನ ಮಾಡಿದ್ದಾರೆ.ನಂತರದ ದಿನಗಳಲ್ಲಿ ವಸ್ತುವಿನ ಆಯ್ಕೆ, ನಿರ್ವಹಣೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಎಂದರು.ಾರ್ಯಕ್ರಮದಲ್ಲಿ ಪ್ರೊ.ಎಚ್.ವಿ.ವೀರಭದ್ರಯ್ಯ, ಅನನ್ಯ ಪ್ರಕಾಶನದ ಎಂ.ಸಿ.ಲಲಿತಾ, ಹೇಮಲತಾ ಮತ್ತತಿತರು ಉಪಸ್ಥಿತರಿದ್ದರು. 


ಪ್ರಶಸ್ತಿ ಒಂದು ಪ್ರದೇಶಕ್ಕೆ ಸೀಮಿತವಾಗಿದ್ದರೆ ಅದರ ಘನತೆ ಕಡಿಮೆಯಾಗುತ್ತದೆ. ವ್ಯಾಪ್ತಿ ಮೀರಿ ಪ್ರಶಸ್ತಿಗಳನ್ನು ವಿಸ್ತರಿಸಿದಾಗ ಪಾರದರ್ಶಕತೆ ಮತ್ತು ಗುಣಾತ್ಮಕತೆಯನ್ನು ಕಾಪಾಡಿಕೊಳ್ಳಬಹುದು. ಇತ್ತೀಚೆಗೆ ಸಮಸ್ಯೆಗಳ ಕುರಿತು ಬರೆಯುವವರ ಸಂಖ್ಯೆ ಹಾಗೂ ಸ್ಥಳೀಯ ಮಣ್ಣಿನ ಹದವನ್ನು ಬೆರೆಸಿ ಕಥೆಯನ್ನು ಹೆಣೆಯುವವರು ಕಡಿಮೆಯಾಗುತ್ತಿದ್ದಾರೆ. ಅನುಭವ ಜನ್ಯವಲ್ಲದ ಕೇವಲ ಕಟ್ಟು ಕಥೆಗಳು ಇಂದು ವಿರಾಜಿಸುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
  ಪ್ರೊ.ಎಸ್.ಜಿ.ಸಿದ್ದರಾಮಯ್ಯಹಿರಿಯ ಲೇಖಕ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News