×
Ad

ಕೊಳಗೇರಿ ಮಕ್ಕಳಿಗೆ ಪರೀಕ್ಷಾಪೂರ್ವ ತರಬೇತಿ

Update: 2016-02-08 22:54 IST

ತುಮಕೂರು, ಫೆ.8: ನಗರ ವಂಚಿತ ಯುವಜನ ಸಂಪನ್ಮೂಲ ಕೇಂದ್ರದಲ್ಲಿ ಕೊಳಗೇರಿಗಳಲ್ಲಿರುವ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಲು ಅಗತ್ಯವಿರುವ ಮಾಹಿತಿ ಮತ್ತು ಮಾರ್ಗದರ್ಶನದ ತರಬೇತಿ ನೀಡಲಾಯಿತು.
 
ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೆೇಶಕ ಪ್ರೋ ಕೆ.ದೊರೈರಾಜ್, ವಿಧ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ತಮ್ಮ ಆತ್ಮ ಸ್ಥೈರ್ಯವನ್ನು ಕಳೆದುಕೊಳ್ಳಬಾರದು. ತಮಗೆ ಅಭ್ಯಾಸದಲ್ಲಿ ಗೊಂದಲಗಳು ಉಂಟಾದಾಗ ಸಂಬಂಧಪಟ್ಟ ವಿಷಯ ಶಿಕ್ಷರನ್ನು ಕಂಡು ಪರಿಹರಿಸಬೇಕು ಎಂದು ಸಲಹೆ ನೀಡಿದರು.ಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥ್ಥೆಯ ಉಪನ್ಯಾಸಕ ರಾಜಣ್ಣರವರು ಉಪನ್ಯಾಸ ನೀಡಿದರು. ಾರ್ಯಕ್ರಮದಲ್ಲಿ ಕೊಳಗೇರಿ ಸಮಿತಿಯ ಅಧ್ಯಕ್ಷ ನರಸಿಂಹಮೂರ್ತಿ, ನಗರ ವಂಚಿತ ಯುವಜನ ಸಂಪನ್ಮೂಲ ಕೇಂದ್ರದ ಕಾರ್ಯದರ್ಶಿ ಶೆಟ್ಟಾಳಲ್ಲಯ,ಯುವಘಟಕದ ಅರುಣ್,ರಘ,ಕೆಂಪೇಶ್ವರಿ,ರವಿ,ಸೋಮಶೇಖರ್, ವಿನ್ ಮತ್ತಿತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News