ಕಂದಲಿ ಕ್ಷೇತ್ರದಿಂದ ಡಿ.ಟಿ.ಪ್ರಕಾಶ್ ನಾಮಪತ್ರಸಲ್ಲಿಕೆ
ಹಾಸನ, ಫೆ.8: ಕಂದಲಿ ಕ್ಷೇತ್ರದಿಂದ ಜಿಪಂ ಚುನವಾಣೆಗೆ ಸ್ಪರ್ಧಾಳುಗಳಾಗಿ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ. ಪ್ರಕಾಶ್ ತಮ್ಮ ಅಭಿಮಾನಿಗಳೊಂದಿಗೆ ಇಂದು ದೇವರಾಯಪಟ್ಟಣದಲ್ಲಿ ನಾಮಪತ್ರ ಸಲ್ಲಿಸಿದರು.
ನಗರದ ಹೇಮಾವತಿ ಪ್ರತಿಮೆಯಿಂದ ಎನ್.ಆರ್. ವೃತ್ತದ ಮೂಲಕ ಬಿ.ಎಂ. ರಸ್ತೆಯಲ್ಲಿರುವ ಉಪ ವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.ಚ್ಟಡಿ.ಟಿ. ಪ್ರಕಾಶ್ ಜೆಡಿಎಸ್ ಪಕ್ಷದಿಂದ ಹೊರ ಬಂದು ವಿಧಾನ ಪರಿಷತ್ ಚುನಾವಣೆಯಲ್ಲಿ ಉಸ್ತುವಾರಿ ಸಚಿವ ಎ. ಮಂಜು ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು.
ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಬಾರಿ ಗ್ರಾಪಂ ಸದಸ್ಯನಾಗಿ, ಒಂದು ಬಾರಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಜಿಪಂ ಚುನಾವಣೆಗೆ 8 ಜನ ಅಭ್ಯರ್ಥಿ ಗಳಲ್ಲಿ ನಾನು ಕೂಡ ಮನವಿ ಮಾಡಿದ್ದು, 7 ಜನರಿಗೆ ಅವಕಾಶ ದೊರಕಿಲ್ಲ. ಕಾಂಗ್ರೆಸ್ ಮುಖಂಡರು ಟಿಕೆಟ್ ನೀಡುವ ಒತ್ತಡದಲ್ಲಿರುವುದರಿಂದ ಇಂದು ನಾಮಪತ್ರ ಸಲ್ಲಿಸುವ ವೇಳೆ ಯಾರೂ ಹಾಜರಾಗಿಲ್ಲ ಮುಂದೆ ಎಲ್ಲರ ಸಹಕಾರದಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರದಲ್ಲಿ ತೊಡಗುವುದಾಗಿ ಹೇಳಿದರು.