ರೋಹಿತ್ ವೆಮುಲಾ ಸಾವಿಗೆ ನ್ಯಾಯ ಕೋರಿ ಕ್ಯಾಂಪಸ್ ಫ್ರಂಟ್ ನಿಂದ ಛಲೋ ರಾಜಭವನ್

Update: 2016-02-09 13:21 GMT

ಜನವರಿ 30ರಂದು ದೆಹಲಿಯಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಸೇರಿಕೊಂಡು ರೋಹಿತ್ ವೆಮುಲರವರ ಬಲವಂತದ ಆತ್ಮಹತ್ಯೆಗೆ ಕಾರಣರಾದವರನ್ನು ಕನೂನಿನ ಮುಂದೆ ತರಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರ ಮೇಲೆ ಪೊಲೀಸರು ಹಾಗು ಫ್ಯಾಶಿಷ್ಟ್ ಶಕ್ತಿಗಳ ಗೂಂಡಾಗಳು ಅಮಾನುಶವಾಗಿ ಹಲ್ಲೆ ನಡೆಸಿದ್ದಾರೆ. ಅದೇರೀತಿ ಬೆಂಗಳೂರಿನಲ್ಲಿ ವಿದ್ಯಾರ್ಥಿ ಸಂಘಟನೆಯೊಂದು ಹಿಂದುಳಿದ ವರ್ಗ ಮತ್ತು ದಲಿತರಿಗೆ ಖಾಸಗಿ ವಲಯದಲ್ಲಿ ವೀಸಲಾತಿ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆಯನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಯಾವುದೇ ರೀತಿ ಮುನ್ನಚ್ಚರಿಕೆಗಳನ್ನು ನೀಡದೆ ಅಲ್ಲಿದ್ದ ವಿದ್ಯಾರ್ಥಿಗಳ ಹಾಗು ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಅವರೊಂದಿಗೆಅಮಾನುಷವಾಗಿ ವರ್ತಿಸಿದರು. ಈ ರೀತಿಯಾಗಿ ವಿದ್ಯಾರ್ಥಿಗಳ ಹೋರಾಟವನ್ನುಅಸಂವಿಧಾನಿಕವಾಗಿ ಹಿಮ್ಮೆಟ್ಟಿಸುವ ಕೆಲಸ ನಡೆಯುತ್ತಿದೆ.

ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳನ್ನು ಸ್ವಚಾರಿತ್ರ್ಯವಂತರನ್ನಾಗಿ ಮತ್ತುದೇಶದ ಭವಿಷ್ಯದ ನಾಯಕರನ್ನಾಗಿ ಮಾಡಬೇಕಾಗಿದೆ. ಕಲೆ, ಸಂಸ್ಕ್ರತಿ ಮತ್ತು ಸಹಬಾಳ್ವೆಯ ಮೂಲ ಪಾಠವನ್ನುವಿದ್ಯಾರ್ಥಿಗಳ ಮಧ್ಯೆ ಬಿತ್ತರಿಸಿ, ಅವರನ್ನುದೇಶದ ಸಂಪತ್ತಾಗಿ ಮಾರ್ಪಡಿಸುವಂತಹದ್ದು ವಿಶ್ವವಿದ್ಯಾನಿಲಯಗಳ ಆದ್ಯಕರ್ತವ್ಯವಾಗಿದೆ. ವಿಶ್ವವಿದ್ಯಾನಿಲಯಗಳಲ್ಲಿ ಸಾಂಸ್ಕ್ರತಕ, ಸಾಮಾಜಿಕ.ರಾಜಕೀಯ ಹಾಗೂ ಸಂವಿಧಾನಿಕ ವಿಚಾರೆಧಾರೆಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಸಮೂಹವನ್ನು ನಿರ್ಮೂಲನೆ ಮಾಡುವಂತಹ ಪ್ರಕ್ರಿಯೆಗಳು ಇತ್ತೀಚಿಗೆ ಹೆಚ್ಚಾಗುತ್ತಿದೆ. ಇಂತಹ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳಾಗಿ ಬಲಪಂಥೀಯ ಚಿಂತನೆಗಳನ್ನು ಉಳ್ಳಂತಹ ವ್ಯಕ್ತಿಗಳನ್ನು ನೇಮಿಸಲಾಗುತ್ತಿದ್ದು, ಈ ಮೂಲಕ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಬಲಪಂಥೀಯ ವಿಚಾರಧಾರೆಗಳನ್ನು ಹೇರುವ ಕೆಲಸ ನಡೆಯುತ್ತಿದೆ. ಇದರಿಂದಅದೇರೀತಿಅಲಿಗಡ ವಿಶ್ವವಿದ್ಯಾನಿಲಯಗಳನ್ನುಅಲ್ಪಸಂಖ್ಯಾತ ಮಾನ್ಯತೆಯನ್ನು ರದ್ದು ಪಡಿಸಬೇಕು ಎಂಬ ಚರ್ಚೆಗಳು ನಡೆಯುತಿದ್ದು, ಇದು ವಿದ್ಯಾರ್ಥಿಗಳಲ್ಲಿ ವೈಜ್ನಾನಿಕ ಚಿಂತನೆಯನ್ನು ಕೊನೆಗೊಳಿಸುವ ಷಡ್ಯಂತ್ರವಾಗಿದೆ.

ಆದುದರಿಂದ ಈ ಮೇಲಿನ ವಿಚಾರಗಳು ಸಂಪೂರ್ಣವಾಗಿ ಸಂವಿಧಾನ ವಿರೋಧಿಯಾಗಿದ್ದು ಇವುಗಳನ್ನು ಕೂಡಲೇಕೈಬಿಟ್ಟು ಸಂವಿಧಾನದ ಮೂಲ ಆಶಯಗಳನ್ನು ಹಾಗೂ ದೇಶದ ಘನತೆಯನ್ನು ಕಾಪಾಡಬೇಕೆಂದು ಕ್ಯಾಂಪಸ್ ಫ್ರಂಟ್‌ಆಫ್‌ಇಂಡಿಯಾ ಆಹ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News