ಲಾನ್ಸ್ ನಾಯಕ್ ಹನುಮಂತಪ್ಪ ಜೀವಂತ: ಮುಖ್ಯಮಂತ್ರಿ ಸಂತಸ
Update: 2016-02-09 23:19 IST
ಹುಬ್ಬಳ್ಳಿ, ಫೆ.9: ಭಾರತ ಹಾಗೂ ಪಾಕಿಸ್ತಾನ ಗಡಿಯ ಸಿಯಾಚಿನ್ ಪ್ರದೇಶದಲ್ಲಿ ಫೆ.3ರಂದು ನಡೆದ ಹಿಮಪಾತದಲ್ಲಿ ಮೃತನಾದನೆಂದು ಹೇಳಲಾದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಲಾನ್ಸ್ ನಾಯಕ್ ಹನುಮಂತಪ್ಪಕೊಪ್ಪದ್ ಹಿಮಕುಸಿತದಲ್ಲಿ 25 ಅಡಿ ಪ್ರಪಾತದಲ್ಲಿ ಸಿಲುಕಿ ಮೈನಸ್ 50 ಡಿಗ್ರಿ ಹವಾಮಾನ ವೈಪರೀತ್ಯ ಒಡ್ಡಿದ ಸವಾಲನ್ನು ಸತತ ಆರು ದಿನಗಳ ಕಾಲ ಎದುರಿಸಿ ಬದುಕುಳಿದಿದ್ದಾರೆ ಎಂಬುದು ತಮಗೆ ಅಚ್ಚರಿಯ ಜೊತೆಗೆ ಅತೀವ ಆನಂದ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹರ್ಷ ವ್ಯಕ್ತಪಡಿಸಿದ್ದಾರೆ.