ಧಾರವಾಡ: ರಸ್ತೆ ದುರಂತಕ್ಕೆ ಯೋಧ ಬಲಿ
Update: 2016-02-11 23:20 IST
ಬೆಂಗಳೂರು, ಫೆ. 11: ಲಾರಿ ಹಾಗೂ ದ್ವಿಚಕ್ರ ವಾಹನ ಢಿಕ್ಕಿಯಾಗಿ ಯೋಧನೋರ್ವ ಅಸುನೀಗಿದ ಘಟನೆ ಧಾರವಾಡದಲ್ಲಿ ಸಂಭವಿಸಿದೆ.
ಧಾರವಾಡ ತಾಲೂಕಿನ ಕಲ್ಲೂರು ಗ್ರಾಮದ ನಿವಾಸಿ ಮಹೇಶ ಮಲ್ಲಿಕಾರ್ಜುನ ಹೂಗಾರ (28) ಮೃತಪಟ್ಟ ಯೋಧ.
ರಜೆಯ ಮೇಲೆ ಸ್ವಗ್ರಾಮಕ್ಕೆ ಆಗಮಿಸಿದ್ದ ಮಹೇಶ ಮಲ್ಲಿಕಾರ್ಜುನ ಹೂಗಾರ ಧಾರವಾಡದಿಂದ ತನ್ನ ಸ್ವಗ್ರಾಮಕ್ಕೆ ಬೈಕ್‌ನಲ್ಲಿ ತೆರಳುವ ವೇಳೆ ಹಿಂದಿನಿಂದ ಬಂದ ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಸುದ್ದಿ ತಿಳಿದ ಕೂಡಲೇ ಧಾರವಾಡ ಜಿಲ್ಲಾಧಿಕಾರಿ ಪಿ.ರಾಜೇಂದ್ರ ಚೋಳನ್ ಇಲ್ಲಿನ ಆಸ್ಪತ್ರೆಗೆ ಭೇಟಿ ನೀಡಿ ಮೃತ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಆ ಬಳಿಕ ಯೋಧನ ಪಾರ್ಥಿವ ಶರೀರವನ್ನು ಗ್ರಾಮಕ್ಕೆ ಕಳುಹಿಸಿಕೊಡಲಾಯಿತು ಎಂದು ತಿಳಿದು ಬಂದಿದೆ.