×
Ad

ನಿವೃತ್ತ ನ್ಯಾಯಮೂರ್ತಿ ಕೆ.ಜಗನ್ನಾಥ ಶೆಟ್ಟಿ ನಿಧನ

Update: 2016-02-12 23:26 IST

ಬೆಂಗಳೂರು, ಫೆ. 12: ರಾಜ್ಯ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಕೆ. ಜಗನ್ನಾಥ ಶೆಟ್ಟಿ (84) ಅವರು ತೀವ್ರ ಹೃದಯಾಘಾತದ ಹ್ನಿನೆಲೆಯಲ್ಲಿ ಶುಕ್ರವಾರ ಬೆಳಗ್ಗೆ 9:30ರ ಸುಮಾರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಓರ್ವ ಪುತ್ರ ಮತ್ತು ಓರ್ವ ಪುತ್ರಿ ಸೇರಿದಂತೆ ಅಪಾರ ಸಂಖ್ಯೆಯ ಬಂಧು-ಮಿತ್ರರು ಹಾಗೂ ಸಹೋದ್ಯೋಗಿಗಳನ್ನು ಜಗನ್ನಾಥ ಶೆಟ್ಟಿ ಅಗಲಿದ್ದಾರೆ. ಪುತ್ರ ಡಾ.ರಮಾನಂದ್ ಶೆಟ್ಟಿ ಅವರು ವಿದೇಶದಲ್ಲಿದ್ದು, ಅವರು ಅಲ್ಲಿಂದ ಬಂದ ಬಳಿಕ ಅಂತ್ಯಕ್ರಿಯೆ ಎಲ್ಲಿ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ದಕ್ಷಿಣ ಕನ್ನಡದ ಪುತ್ತೂರು ಮೂಲದವರಾದ ನ್ಯಾ.ಜಗನ್ನಾಥ್ ಅವರು ಹಾವೇರಿಯಲ್ಲಿ ರೈತರ ಮೇಲಿನ ಗೋಲಿಬಾರ್ ಮತ್ತು ಭಟ್ಕಳದಲ್ಲಿ ನಡೆದ ಕೋಮು ಗಲಭೆಯ ಕುರಿತ ತನಿಖಾ ಆಯೋ ಗದ ಅಧ್ಯಕ್ಷರಾಗಿಯೂ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News