ಹಫೀಜ್ಹ್ ಸಯೀದ್ ಭಯೋತ್ಪಾದಕನೆ, ಅಲ್ಲವೇ ? ಗೃಹ ಸಚಿವರಿಗೇ ಗೊತ್ತಿಲ್ಲ !
Update: 2016-02-15 21:26 IST
ಜೆ ಎನ್ ಯು ವಿವಿಯಲ್ಲಿ ನಡೆದ ಘಟನೆಗೆ ಹಫೀಜ್ಹ್ ಸಯೀದ್ ಬೆಂಬಲ ಇತ್ತು ಎಂದು ಹೇಳಿ ವಿವಾದ ಸೃಷ್ಟಿಸಿರುವ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಅವರಿಗೆ ಹಫೀಜ್ಹ್ ಸಯೀದ್ ಹಾಗು ಆತನ ಜಮಾತ್ ಉದ್ ದಾವಾ ಸಂಘಟನೆಯನ್ನು ಕೇಂದ್ರ ಗೃಹ ಸಚಿವಾಲಯ ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸುತ್ತದೆಯೇ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರ ನೀಡಲು ತಿಣುಕಾಡಿದ ರಾಜ್ ನಾಥ್ ಪಕ್ಕದಲ್ಲಿದ್ದವರ ಬಳಿ ವಿಚಾರಿಸಿ " ಹಾಂ " ಎಂದರು. ಹಾಗಾದರೆ ಗೃಹ ಸಚಿವಾಲಯದ ಭಯೋತ್ಪಾದಕ ಸಂಘಟನೆಗಳ ಪಟ್ಟಿಯಲ್ಲಿ ಅದರ ಹೆಸರು ಯಾಕಿಲ್ಲ ಎಂಬ ಮರುಪ್ರಶ್ನೆಗೆ ಗೃಹ ಸಚಿವ ಸಂಪೂರ್ಣ ನಿರುತ್ತರರಾದರು. ಬಳಿಕ ಅಬ್ಬೇಪಾರಿ ನಗು ನಕ್ಕು ಜಾರಿಕೊಂಡರು. ವೀಡಿಯೋ ನೋಡಿ.