ಮೆಸ್ಸಿ - ಸುಆರೆಝ್ ಜೋಡಿಯಿಂದ ಶತಮಾನದ ಪೆನಾಲ್ಟಿ ಗೋಲು !
Update: 2016-02-15 22:03 IST
ರವಿವಾರ ಬಾರ್ಸಿಲೋನಾದಲ್ಲಿ ಮೆಸ್ಸಿ - ಸುಆರೆಝ್ ಶತಮಾನದ ಪೆನಾಲ್ಟಿ ಗೋಲ್ ಬಾರಿಸಿದರೆ ? ಇದು ಫುಟ್ಬಾಲ್ ನಲ್ಲಿ ವಿನೂತನ ಪೆನಾಲ್ಟಿ ಗೋಲ್ ಹೊಡೆತದ ವಿಧಾನವೊಂದಕ್ಕೆ ನಾಂದಿ ಹಾಡಲಿದೆಯೇ ? ಇಡೀ ಫುಟ್ಬಾಲ್ ಜಗತ್ತು ಹೀಗೊಂದು ಚರ್ಚೆಗೆ ಬೀಳುವಂತೆ ಮಾಡಿದ್ದು ಮೆಸ್ಸಿ - ಸುಆರೆಝ್ ಜೋಡಿ. ಆಗಲೇ ೩-೧ ಅಂತರದಿಂದ ಎದುರಾಳಿ ಸೆಲ್ಟ ವಿಗೊ ಗಿಂತ ಮುಂದಿದ್ದ ಬಾರ್ಸಿಲೊನದ ಮೆಸ್ಸಿ ತನ್ನ ಪಾಲಿಗೆ ಬಂದ ಪೆನಾಲ್ಟಿ ಹೊಡೆತವನ್ನು ನೇರವಾಗಿ ಗೋಲ್ ಪೋಸ್ಟ್ ಗೆ ಗುರಿ ಮಾಡದೆ ಹ್ಯಾಟ್ರಿಕ್ ಸಾಧನೆಯ ಹಾದಿಯಲ್ಲಿದ್ದ ಸಹ ಆಟಗಾರ ಉರುಗ್ವೆಯ ಸುಆರೆಝ್ ಗೆ ದಾಟಿಸುವ ಮೂಲಕ ವಿಶಿಷ್ಟ ಗೋಲ್ ಮಾದರಿಯೊಂದನ್ನು ಫುಟ್ಬಾಲ್ ಇತಿಹಾಸಕ್ಕೆ ಸೇರಿಸಿದ್ದಾರೆ. ಅಂದ ಹಾಗೆ ಈ ಪಂದ್ಯವನ್ನು ಬಾರ್ಸಿಲೊನ ೬-೧ ಗೋಲುಗಳಿಂದ ಗೆದ್ದಿದೆ. ವೀಡಿಯೋ ನೋಡಿ .
courtesy : firstpost.com