×
Ad

ಪಾಕಿಸ್ತಾನ ಸೂಪರ್‌ ಲೀಗ್‌ ಪಾಕ್‌ ಆಟಗಾರರ ತಳ್ಳಾಟ....

Update: 2016-02-15 23:19 IST

ಶಾರ್ಜಾ:  ಶಾರ್ಜಾ ಕ್ರಿಕೆಟ್‌ ಸ್ಟೇಡಿಯಂನಲ್ಲಿ ರವಿವಾರ ರಾತ್ರಿ ನಡೆದ ಪಾಕಿಸ್ತಾನ ಸೂಪರ‍್ ಲೀಗ್‌ನಲ್ಲಿ ಕ್ವೆಟ್ಟಾ ಗ್ಲೇಡಿಯೇಟರ್ಸ್‌   ಮತ್ತು ಪೇಶಾವರ ಝಾಲ್ಮಿ ತಂಡಗಳ ನಡುವಿನ ಪಂದ್ಯದಲ್ಲಿ ಪಾಕ್‌ನ ಇಬ್ಬರು ಆಟಗಾರರಾದ ಅಹ್ಮದ್‌ ಶಹಝಾದ್‌ ಮತ್ತು ವಹಾಬ್‌ ರಿಯಾಝ್‌ ನಡುವೆ ತಳ್ಳಾಟ ನಡೆಯಿತು.
ಇನಿಂಗ್ಸ್‌ನ ಐದನೆ ಓವರ್‌ನಲ್ಲಿ ಗ್ಲೇಡಿಯೇಟರ್ಸ್‌ನ  ಅಹ್ಮದ್‌ ಶಹಝಾದ್‌  ಅವರು ಪೇಶಾವರ ಝಾಲ್ಮಿಯ ತಂಡದ ಬೌಲರ್‌ ವಹಾಬ್‌ ರಿಯಾಝ್‌ರ ಮೊದಲ ಎಸೆತದಲ್ಲಿ ಚೆಂಡನ್ನು   ಸಿಕ್ಸರ್‌ಗೆ ಅಟ್ಟಿದರು. ಎರಡನೆ ಎಸೆತದಲ್ಲಿ  ಶಹಝಾದ್‌ ಬೌಲ್ಡ್‌ ಆದರು. ಕ್ರೀಸ್‌ ಬಿಡುತ್ತಿದ್ದಾಗ ಶಹಝಾದ್ ಅವರು ರಿಹಾಝ್ ನ್ನು ನಿಂದಿಸಿದರು. ಇದರಿಂದ ಕೆರಳಿದ ರಿಹಾಝ್‌ ಅವರು ಶಹಝಾದನ್ನು ತಳ್ಳಿದರು. ಸಹ ಆಟಗಾರರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಪಾಕ್‌ನ ಆಟಗಾರರ ಜಗಳದ ವೀಡಿಯೊ ಇಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor