×
Ad

ಕರಾವಳಿ ಉತ್ಸವಕ್ಕೆ ಹೊಸ ಅತಿಥಿಗಳು, ಗ್ರಾಹಕರನ್ನು ರಂಜಿಸಿದ ಟಾಮ್ ಆ್ಯಂಡ್ ಜೆರಿ

Update: 2016-02-16 20:11 IST

ಮಂಗಳೂರು, ಫೆ. 16: ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಕಳೆದ ಜನವರಿ 23ರಿಂದ ನಡೆಯುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವಕ್ಕೆ ಹೊಸ ಅತಿಥಿಗಳಾಗಿ ಟಾಮ್ ಆ್ಯಂಡ್ ಜೆರಿ ಆಗಮಿಸಿದ್ದಾರೆ. ಈ ಹೊಸ ಅತಿಥಿಗಳ ಆಗಮನದಿಂದ ಉತ್ಸವಕ್ಕೆ ಧಾವಿಸುತ್ತಿರುವ ಗ್ರಾಹಕರ ಸಹಿತ ಮಕ್ಕಳಿಗೆ ಮನೋರಂಜನೆ ದೊರೆಯುವಂತಾಗಿದೆ. ಉತ್ಸವಕ್ಕೆ ಬರುವ ಗ್ರಾಹಕರು ಮತ್ತು ಮಕ್ಕಳು ಕೂಡ ಟಾಮ್ ಆ್ಯಂಡ್ ಜೆರಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯ ಕಂಡುಬಂತು. ಒಟ್ಟಾರೆ ಈ ಇಬ್ಬರು ಹೊಸ ಅತಿಥಿಗಳ ಆಗಮನದಿಂದಾಗಿ ಉತ್ಸವವು ಮತ್ತಷ್ಟು ಮೆರುಗು ಪಡೆದುಕೊಂಡಿದೆ.ಕರಾವಳಿ ಉತ್ಸವದ ಪ್ರವೇಶ ದ್ವಾರದಲ್ಲಿ ನಿಂತು ತಮ್ಮ ಹೆತ್ತವರೊಂದಿಗೆ ಉತ್ಸವಕ್ಕೆ ಆಗಮಿಸುವ ಮಕ್ಕಳೊಂದಿಗೆ ಸ್ವಯಂ ಪ್ರೇರಿತವಾಗಿ ಕೈಕುಲುಕುವ ಮೂಲಕ ಈ ಅತಿಥಿಗಳು ಮಕ್ಕಳಿಗೆ ಮುದ ನೀಡುವಲ್ಲಿ ಯಶಸ್ವಿಯಾಗಿದೆ. ಈ ಟ್ಯಾಮ್ ಆ್ಯಂಡ್ ಜೆರಿಯ ವೇಶ ಭೂಷಣ ಧರಿಸಿದವರು ಮೂಲತಃ ತ್ರಿಪುರದ ನಿವಾಸಿ ಪ್ರಸ್ತುತ ಬೆಂಗಳೂರಿನ ಕೋರಮಂಗಲದ ನಿವಾಸಿ ತಪಾಶ್ ಮತ್ತು ಮೈಸೂರಿನ ನಿವಾಸಿ ಶಂಭು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor