ಶೌರ್ಯಕ್ಕಾಗಿ ನೀಡುವ ದೇಶದ ಶಾಂತಿಕಾಲದ ಅತ್ಯುನ್ನತ ಮಿಲಿಟರಿ ಗೌರವ ಅಶೋಕ್ ಚಕ್ರ ಪಡೆದ ಅತ್ಯಂತ ಕಿರಿಯ ಸಾಧಕಿ ನೀರ್ಜಾ ಭಾನೊತ್
Update: 2016-02-17 17:33 IST
ಶೌರ್ಯಕ್ಕಾಗಿ ನೀಡುವ ದೇಶದ ಶಾಂತಿಕಾಲದ ಅತ್ಯುನ್ನತ ಮಿಲಿಟರಿ ಗೌರವ ಅಶೋಕ್ ಚಕ್ರ ಪಡೆದ ಅತ್ಯಂತ ಕಿರಿಯ ಸಾಧಕಿ ನೀರ್ಜಾ ಭಾನೊತ್. ಅಮೇರಿಕ ಸರಕಾರದಿಂದಲೂ ತನ್ನ ಶೌರ್ಯಕ್ಕಾಗಿ ಪ್ರಶಸ್ತಿ ಪುರಸ್ಕೃತೆ ಎಂಬುದು ವಿಶೇಷ. ಈಕೆ ಮಾಡೆಲ್ ಸಹ ಆಗಿದ್ದ ಆಕೆ ಪಾನ್ ಅಮೆರಿಕನ್ ವಿಮಾನದಲ್ಲಿ ಗಗನಸಖಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಳು. 1986 ರ ಸೆಪ್ಟೆಂಬರ್ 5 ರಂದು ಉಗ್ರಗಾಮಿಗಳು ಆಕೆಯಿದ್ದ ವಿಮಾನವನ್ನು ಅಪಹರಿಸಿದಾಗ ಅಸಾಮಾನ್ಯ ಧೈರ್ಯ ,ಸಮಯಪ್ರಜ್ಞೆ ಹಾಗು ಮಾನವೀಯತೆ ತೋರಿದ ನೀರ್ಜಾ ತಾನು ಉಗ್ರರಿಗೆ ಬಲಿಯಾಗುವ ಮುನ್ನ ವಿಮಾನದಲ್ಲಿದ್ದ 359 ಪ್ರಯಾಣಿಕರ ಪ್ರಾಣ ಉಳಿಸಿದ್ದಳು. ಅದೇ ಕತೆ ಆಧರಿಸಿದ ಚಿತ್ರ ಸೋನಂ ಕಪೂರ್ ಪ್ರಧಾನ ಪಾತ್ರದಲ್ಲಿರುವ ' ನೀರ್ಜಾ' ಶುಕ್ರವಾರ ಬಿಡುಗಡೆಯಾಗಲಿದೆ. ಈ ಸಂದರ್ಭದಲ್ಲಿ ಅಂದು ವಿಮಾನದಲ್ಲಿ ನೀರ್ಜಾ ಮಾಡಿದ ಕೊನೆಯ ಪ್ರಕಟಣೆಯ ಮೂಲ (ORIGINAL) ಆಡಿಯೋವನ್ನು ಚಿತ್ರ ನಿರ್ಮಿಸಿದ ಫಾಕ್ಸ್ ಸ್ಟಾರ್ ಹಿಂದಿ ಬಿಡುಗಡೆ ಮಾಡಿದೆ. ಕೇಳಿ .