ಹಾವೇರಿ: ಭಯೋತ್ಪಾದನೆ ವಿರುದ್ಧ ಜಿಹಾದ್‌ಹಾವೇರಿ ಜಿಲ್ಲಾ ಆಂದೋಲನಕ್ಕೆ ಚಾಲನೆ
ಹಾವೇರಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್(ಈ) ರಾಜ್ಯಾದ್ಯಂತ ಹಮ್ಮಿಕೊಂಡ ಭಯೋತ್ಪಾದನೆ ವಿರುದ್ಧ ಜಿಹಾದ್ ಇದರ ಹಾವೇರಿ ಜಿಲ್ಲಾ ಮಟ್ಟದ ಜನಾಂದೋಲನ ಕಾರ್ಯಕ್ರಮಕ್ಕೆ ಸವಣೂರಿನಲ್ಲಿರುವ ಮುಈನುಸುನ್ನ ಆಡಿಟೋರಿಯಂನಲ್ಲಿ ಇತ್ತೀಚೆಗೆ ಹುತಾತ್ಮರಾದ ಯೋಧ ಹನುಮಂತಪ್ಪ ಕೊಪ್ಪದ್ ಅವರ ಹೆಸರಿನಲ್ಲಿ ಮಾಡಿದ ವೇದಿಕೆಯಲ್ಲಿ ಚಾಲನೆ ನೀಡಲಾಯಿತು. ಉದ್ಘಾಟನಾ ಸೆಮಾರಂಭದ ಉದ್ಘಾಟಕರಾಗಿ ಆಗಮಿಸಿದ ಶ್ರೀ ಶ್ರೀ ಚನ್ನಬಸವ ಮಹಾಸ್ವಾಮಿ, ದೊಡ್ಡ ಹುಣಸೇ ಕಲ್ಮಠ, ಸವಣೂರು, ಇವರು ಮಾತನಾಡಿ ಭಯೋತ್ಪಾದನೆ ದೇಶದ ಶತ್ರುವಾಗಿದ್ದು ಇದರ ವಿರುದ್ಧ ಜಿಹಾದ್ ಸಾರಿದ ಈನ ಹೋರಾಟವನ್ನು ಶ್ಲಾಘಿಸಿದರು ಭಯೋತ್ಪಾದನೆ ಎಂಬ ಪೈಶಾಚಿಕ ಕೃತ್ಯವನ್ನು ಇಸ್ಲಾಮ್ ಖಂಡಿಸುತ್ತಿರುವುದನ್ನು ಜಗತ್ತಿನ ಹೆಚ್ಚು ಅನಾವರಣಮಾಡಬೇಕೆಂದರು. ಹಾವೇರಿ ಜಿಲ್ಲಾಧ್ಯಕ್ಷ ಇಕ್ಬಾಲ್ ರಾಣಿಬೆನ್ನೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಉತ್ತರ ಕರ್ನಾಟಕ ಮಾನವ ಹಕ್ಕು ಸಮಿತಿ ಇದರ ಅಧ್ಯಕ್ಷ ರಮಾಕಾಂತ್ ಶೇಂಡಿಗೆ, ಹಾವೇರಿ ಜಿಲ್ಲಾ ಈ ಪ್ರಧನ ಕಾರ್ಯದರ್ಶಿ ಕೆ.ಎಂ ಮುಸ್ತಫಾ ನಈಮಿ, ಹಿಮಮಿ, ಇಹ್ಸಾನ್ ಸಂಚಾಲಕ ಹುಸೈನ್ ಸಅದಿ ಹೊಸ್ಮಾರ್, ಯಾಸೀನ್ ಸಖಾಫಿ ರಾಣಿಬೆನ್ನೂರು ಮಾತನಾಡಿದರು.