ಅಟಲ್‌ಜಿ ಜನಸ್ನೇಹಿ ಯೋಜನೆ: ಅತ್ಯುತ್ತಮ ನಾಡಕಚೇರಿಗಳ ಪಟ್ಟಿ ಪ್ರಕಟ
ಬೆಂಗಳೂರು, ಫೆ.17: ಅಟಲ್‌ಜಿ ಜನಸ್ನೇಹಿ ಕೇಂದ್ರ ಯೋಜನೆಯಡಿ ಸಾರ್ವಜನಿಕರಿಗೆ ವಿವಿಧ ಪ್ರಮಾಣ ಪತ್ರಗಳ ಸೇವೆಯನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡಿರುವ ಮೊದಲ ಹಾಗೂ ಕೊನೆಯ ಸ್ಥಾನದಲ್ಲಿರುವ ತಲಾ ಹತ್ತು ನಾಡ ಕಚೇರಿಗಳ ಪಟ್ಟಿ ಪ್ರಕಟ ಮಾಡಲಾಗಿದೆ.
ಮೊದಲ ಹತ್ತು ಸ್ಥಾನ ಪಡೆದ ನಾಡ ಕಚೇರಿಗಳು: ಕೋಲಾರ ಜಿಲ್ಲೆಯ ಅವನಿ, ಬೆಳಗಾವಿ ಜಿಲ್ಲೆಯ ಮೂಡಕ, ಉಡುಪಿ ಜಿಲ್ಲೆಯ ಉಡುಪಿ ಮತ್ತು ಕಾಪು, ಬಳ್ಳಾರಿ ಜಿಲ್ಲೆಯ ಹಚ್ಚೊಳ್ಳಿ, ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ, ರಾಮನಗರ ಜಿಲ್ಲೆಯ ತಿಪ್ಪಸಂದ್ರ, ಬೆಳಗಾವಿ ಜಿಲ್ಲೆಯ ಕೆ.ಚಂದರಗಿ, ಉಡುಪಿ ಜಿಲ್ಲೆಯ ಬೈಂದೂರು, ತುಮಕೂರು ಜಿಲ್ಲೆಯ ಕೊತ್ತಗೆರೆ.
ಕೊನೆಯ ಹತ್ತು ಸ್ಥಾನ ಪಡೆದ ನಾಡ ಕಚೇರಿಗಳು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಡಿಗೇನಹಳ್ಳಿ ಮತ್ತು ಸೋಂಪುರ, ಹಾಸನ ಜಿಲ್ಲೆಯ ಸಾಲಗಾಮೆ ಮತ್ತು ರಾಮನಾಥಪುರ, ಕೊಪ್ಪಳ ಜಿಲ್ಲೆಯ ರೇವನಕಲಕುಂಟ, ಅರಸೀಕೆರೆ (ಕಸಬ), ಚಿಕ್ಕಮಗಳೂರು ಜಿಲ್ಲೆಯ ಜಾಗ್ರ, ಹಾಸನ ಜಿಲ್ಲೆಯ ಕಟ್ಟಾಯ, ಬೆಂಗಳೂರು ಜಿಲ್ಲೆಯ ದಾಸನಪುರ-1 ಹಾಗೂ ಹಾಸನ ಜಿಲ್ಲೆಯ ಶಾಂತಿಗ್ರಾಮ ಎಂದು ಪ್ರಕಟನೆ ತಿಳಿಸಿದೆ.