×
Ad

ಫೆ.29ರಿಂದ ವಿಧಾನಪರಿಷತ್ ಅಧಿವೇಶನ

Update: 2016-02-18 23:53 IST

ಬೆಂಗಳೂರು, ಫೆ. 18: ಕರ್ನಾಟಕ ವಿಧಾನಪರಿಷತ್ತಿನ ಅಧಿವೇಶನವು ಫೆ.29ರಂದು ಮಧ್ಯಾಹ್ನ 12ಗಂಟೆಗೆ ಬೆಂಗಳೂರಿನ ವಿಧಾನಸಭೆಯ ಸಭಾಂಗಣದಲ್ಲಿ ಸಮಾವೇಶಗೊಳ್ಳಲಿದೆ ಎಂದು ವಿಧಾನ ಪರಿಷತ್‌ನ ಕಾರ್ಯದರ್ಶಿ ಶ್ರೀಶ್ ತಿಳಿಸಿದ್ದಾರೆ.
   ಫೆ.29ರ ಮಧ್ಯಾಹ್ನ 12ಗಂಟೆಗೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ರಾಜ್ಯಪಾಲರ ಭಾಷಣ ಮುಗಿದ ಕೂಡಲೇ ವಿಧಾನ ಪರಿಷತ್ತಿನ ಸಭಾಂಗಣದಲ್ಲಿ ಮತ್ತೆ ಸಭೆ ಸೇರಲಿದೆ. ಅನಂತರ ಮಾ.1ರಿಂದ 5ರ ವರೆಗೆ ಸರಕಾರಿ ಹಾಗೂ ಖಾಸಗಿ ಕಾರ್ಯಕಲಾಪಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News