ಸೆಲ್ಫಿಗಾಗಿ ಡಾಲ್ಫಿನ್ ಅನ್ನು ನೀರಿಂದ ಹೊರಗೆಳೆದು ಕೊಂದರು !
Update: 2016-02-19 17:17 IST
ಬ್ಯೂನಸ್ ಐರಿಸ್ , ಫೆ. ೧೯ : ಸೆಲ್ಫಿ ಗೀಳು ಮನುಷ್ಯರ ಜೀವಕ್ಕೆ ಎರವಾಗುತ್ತಿರುವ ಹಲವು ಸುದ್ದಿಗಳ ನಡುವೆ ಇಲ್ಲೊಂದು ಹೊಸ ಸುದ್ದಿ. ಮನುಷ್ಯರ ಸೆಲ್ಫಿ ಗೀಳಿಗೆ ಅಪರೂಪದ ಡಾಲ್ಫಿನ್ ಒಂದು ಜೀವ ಕಳೆದುಕೊಂಡ ಘಟನೆ ಅರ್ಜೆಂಟೀನಾದ ಬೀಚ್ ರಿಸಾರ್ಟ್ವೊಂದರಲ್ಲಿ ಇತ್ತೀಚಿಗೆ ನಡೆದಿದೆ.
ಇಲ್ಲಿನ ಸಾಂತಾ ತೆರೆಸ್ಟಿಯ ಬೀಚ್ ರಿಸಾರ್ಟ್ನಲ್ಲಿ ವ್ಯಕ್ತಿಯೊಬ್ಬ ಸಮುದ್ರದಿಂದ ವಿನಾಶದಂಚಿನಲ್ಲಿರುವ ಅಪರೂಪದ ಡಾಲ್ಫಿನ್ ಮಗುವೊಂದನ್ನು ಬಲವಂತವಾಗಿ ದಡಕ್ಕೆ ಎಳೆದಿದ್ದಾನೆ. ತಕ್ಷಣ ಅಲ್ಲಿ ಜನ ಸೇರಿದ್ದಾರೆ. ಎಲ್ಲರೂ ಆ ಪುಟ್ಟ ಡಾಲ್ಫಿನ್ ಅನ್ನು ಮುದ್ದಾಡಲು ಹಾಗು ಅದರ ಜೊತೆ ಸೆಲ್ಫಿ ತೆಗೆಯಲು ಸ್ಪರ್ಧೆಗೆ ಬಿದ್ದಿದ್ದಾರೆ. ಎಲ್ಲಿವರೆಗೆ ಎಂದರೆ , ಆ ಡಾಲ್ಫಿನ್ ನೀರು ಕಾಣದೆ ಕಂಗಾಲಾಗುವ ವರೆಗೂ. ಕೊನೆಗೆ ಅದನ್ನು ಅಲ್ಲೇ ಸಾಯಲು ಬಿಟ್ಟು ಈ ಸೆಲ್ಫಿ ಹುಚ್ಚರು ಅಲ್ಲಿಂದ ಹೋಗಿದ್ದಾರೆ.
ಈ ಕೃತ್ಯಕ್ಕೆ ಎಲ್ಲೆಡೆಯಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.