ನಾನೂ ರೋಗಿ, ನನ್ನ ಹಾಗು ಇತರ ಟಿವಿ ಸುದ್ದಿ ವಾಹಿನಿಗಳೂ ಕಾಯಿಲೆ ಬಿದ್ದಿವೆ ...
Update: 2016-02-20 18:38 IST
ಟಿ . ಆರ್. ಪಿ ಗಳಿಕೆಯ ಸ್ಪರ್ಧೆಯಲ್ಲಿ ಬಿದ್ದಿರುವ ಟಿವಿ ಸುದ್ದಿ ವಾಹಿನಿಗಳು ಡಿಬೇಟ್ ನ ಹೆಸರಲ್ಲಿ ಹೇಗೆ ಸಮಾಜದಲ್ಲಿ ದ್ವೇಷ ಬಿತ್ತುತ್ತಿವೆ , ತಮಗೆ ಬೇಕಾದ ಅಭಿಪ್ರಾಯವನ್ನೇ ಜನಾಭಿಪ್ರಾಯವಾಗಿ ರೂಪಿಸುತ್ತಿವೆ, ಆರೋಗ್ಯಪೂರ್ಣ ಚರ್ಚೆಯ ಅವಕಾಶವೇ ಇಲ್ಲದಂತೆ ಪರಸ್ಪರ ಹೊಡೆಯುವ , ಬಡಿಯುವ ವೇದಿಕೆಗಳಾಗುತ್ತಿವೆ, ಒಟ್ಟಾರೆಯಾಗಿ ಭಾರತದ ಟಿವಿ ಮಾಧ್ಯಮ ಸಾಯುತ್ತಿದೆ ಎಂದು ಖ್ಯಾತ ಟಿವಿ ನಿರೂಪಕ ಹಾಗು ಹಿರಿಯ ಪತ್ರಕರ್ತ ರವೀಶ್ ಕುಮಾರ್ ಈ ವಿಶೇಷ ಕಾರ್ಯಕ್ರಮದಲ್ಲಿ ಮನಮುಟ್ಟುವಂತೆ ಒಪ್ಪಿಕೊಂಡಿದ್ದಾರೆ. ಇದಕ್ಕಾಗಿ ಶುಕ್ರವಾರ ರಾತ್ರಿಯ ಎನ್ ಡಿ ಟಿ ವಿ ಇಂಡಿಯಾದ ಪ್ರೈಮ್ ಟೈಮ್ ಕಾರ್ಯಕ್ರಮದಲ್ಲಿ ಯಾವುದೇ ದೃಶ್ಯಗಳನ್ನು ತೋರಿಸದೆ ಕೇವಲ ವಿಷಯಗಳನ್ನು ಮಾತ್ರ ಹೇಳಿದ್ದಾರೆ. ಅರ್ನಬ್ ಗೋಸ್ವಾಮಿ, ಅವರ ಅಭಿಮಾನಿಗಳು ಹಾಗು ಎಲ್ಲ ಟಿವಿ ವೀಕ್ಷಕರು ನೋಡಲೇಬೇಕಾದ ಕಾರ್ಯಕ್ರಮ.
courtesy : NDTV