×
Ad

‘ಆರ್‌ಟಿಇ’ನಡಿ ಮಕ್ಕಳ ದಾಖಲಾತಿ ಮಾಹಿತಿ ವೆಬ್‌ಸೈಟ್‌ನಲ್ಲಿ ಲಭ್ಯ

Update: 2016-02-20 23:26 IST

ಬೆಂಗಳೂರು, ಫೆ. 20: ಜಿಲ್ಲೆಯಲ್ಲಿ 2016-17ನೆ ಸಾಲಿನ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ನೆರೆ-ಹೊರೆ ಶಾಲೆಗಳ ಪಟ್ಟಿಗಳನ್ನು ಫೆ.22ರಂದು ಉಪನಿರ್ದೇಶಕರ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಪ್ರಕಟಿಸಲಾಗುವುದು.
ಈ ಸಂಬಂಧ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಲು ಟೋಲ್‌ಫ್ರೀ ಸಂಖ್ಯೆಯನ್ನು ಸ್ಥಾಪಿಸಲಾಗಿದೆ. ಅಗತ್ಯ ಮಾಹಿತಿ ಪಡೆದುಕೊಂಡ ಸಾರ್ವಜನಿಕರು ತಮ್ಮ ಮಕ್ಕಳ ದಾಖಲಾತಿ ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಕೋರಿದ್ದಾರೆ.
ಟೋಲ್ ಫ್ರಿ ಸಂಖ್ಯೆ: ಉಪನಿರ್ದೇಶಕರ ಕಚೇರಿ ಬೆಂಗಳೂರು ಟೋಲ್‌ಫ್ರೀ 1800 4251 1004 ನೋಡಲ್ ಅಧಿಕಾರಿ-ಎಸ್ ಮಲ್ಲಪ್ಪ, ಮೊಬೈಲ್ ಸಂಖ್ಯೆ- 90083 27584, ದೇವನಹಳ್ಳಿ ಬಿಇಓ ಕಚೇರಿ ಟೋಲ್‌ಫ್ರೀ-2768 2384 ನೋಡಲ್ ಅಧಿಕಾರಿ ಚಲಪತಿ-94805 02369.
ದೊಡ್ಡಬಳ್ಳಾಪುರ ಬಿಇಓ ಕಚೇರಿ ಟೋಲ್‌ಫ್ರೀ-2762 2208, ಭೀಮರಾಜು -97400 79819, ಹೊಸಕೋಟೆ ಬಿಇಓ ಕಚೇರಿ ಟೋಲ್‌ಫ್ರೀ-27931311 ಚಿನ್ನಸ್ವಾಮಿ- 94801 84279, ನೆಲಮಂಗಲ ಬಿಇಓ ಕಚೇರಿ ಟೋಲ್‌ಫ್ರೀ- 2772 2164, ಗಂಗರಾಜು-95354 09339ನ್ನು ಸಂಪರ್ಕಿಸಲು ಪ್ರಕಟನೆ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News