×
Ad

ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಫೆ.25ರ ವರೆಗೆ ಅವಧಿ ವಿಸ್ತರಣೆ

Update: 2016-02-20 23:28 IST

ಬೆಂಗಳೂರು, ಫೆ. 20: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ-2016 ಪ್ರವೇಶ ಪರೀಕ್ಷೆಯ ಆನ್‌ಲೈನ್ ಅರ್ಜಿ ಸಲ್ಲಿಸುವ ಅವಧಿಯನ್ನು ಫೆ.25ರ ಗುರುವಾರದವರೆಗೆ ವಿಸ್ತರಿಸಿದೆ ಹಾಗೂ ಬ್ಯಾಂಕುಗಳಲ್ಲಿ ಅರ್ಜಿ ಶುಲ್ಕ ಪಾವತಿಸಲು ಫೆ.26ರ ವರೆಗೆ ಕಾಲಾವಕಾಶ ನೀಡಲಾಗಿದೆ.
ಒಸಿಐ/ಪಿಐಒ ಅಭ್ಯರ್ಥಿಗಳಿಗೂ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ: ಹೈಕೋರ್ಟಿನ ಡಬ್ಲೂಪಿಎನ್ 43939/2015 ನಿರ್ದೇಶನದನ್ವಯ ಒಸಿಐ/ಪಿಐಒ ಅಭ್ಯರ್ಥಿಗಳಿಗೂ ಸಿಇಟಿ-2016ಕ್ಕಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆ ಮಾಡಲು ನ್ಯಾಯಾಲಯದ ಅಂತಿಮ ತೀರ್ಪನ್ನು ಕಾಯ್ದಿರಿಸಿ ಅವಕಾಶ ನೀಡಲಾಗಿದೆ.
ಇಂತಹ ಅಭ್ಯರ್ಥಿಗಳು ಫೆ. 25ರ ಗುರುವಾರದ ವರೆಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ ಮತ್ತು ಬ್ಯಾಂಕುಗಳಲ್ಲಿ ಅರ್ಜಿ ಶುಲ್ಕವನ್ನು ಫೆ.26ರ ವರೆಗೆ ಪಾವತಿ ಮಾಡಬಹುದಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ತಪ್ಪುಗಳ ತಿದ್ದುಪಡಿಗೆ ಅವಕಾಶ: ಈಗಾಗಲೇ ಆನ್‌ಲೈನ್ ಅರ್ಜಿ ಸಲ್ಲಿಕೆ ಮಾಡಿದ್ದು ಶುಲ್ಕ ಪಾವತಿಸಿರುವ ಅಭ್ಯರ್ಥಿಗಳು ಅರ್ಜಿಗಳಲ್ಲಿ ತಪ್ಪುಗಳನ್ನು ಮಾಡಿ ತಿದ್ದುಪಡಿ ಅವಕಾಶ ಅಗತ್ಯವಿದ್ದಲ್ಲಿ, ಪ್ರಾಧಿಕಾರವು ಫೆ.27ರಿಂದ 29ರ ವರೆಗೆ ಮೂರು ದಿನಗಳ ಕಾಲಾವಕಾಶ ನೀಡಿದೆ.
ಈ ಅವಧಿಯಲ್ಲಿ ಅಭ್ಯರ್ಥಿಗಳು ತಮ್ಮ ಅರ್ಜಿಗಳಲ್ಲಿ ಅಚಾತುರ್ಯದಿಂದ ಭರ್ತಿ ಮಾಡದೆ ಬಿಟ್ಟಿರುವ ವಿವರಗಳನ್ನು ಸೇರಿಸಬಹುದು/ತಪ್ಪುಗಳನ್ನು ಸರಿಪಡಿಸಿ ಪುನಃ ಸಲ್ಲಿಸಲು ಅವಕಾಶವಿದೆ. ಅಗತ್ಯವುಳ್ಳ ವಿದ್ಯಾರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಈ ಬಗ್ಗೆ ಪೂರ್ಣ ವಿವರಗಳಿಗೆ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ ಸೈಟ್: http://kea.kar.nic.in ನೋಡಬಹುದು ಎಂದು ಪ್ರಕಟಣೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News