×
Ad

ಜಿಪಂ-ತಾಪಂ ಚುನಾವಣೆ: ಶೇ.71.63ರಷ್ಟು ಮತದಾನ

Update: 2016-02-21 23:43 IST

ಬೆಂ.ಗ್ರಾಮಾಂತರ-ಶೇ.83.90
ಯಾದಗಿರಿ-ಶೇ.62.21

ಬೆಂಗಳೂರು, ಫೆ.21: ರಾಜ್ಯದ 30 ಜಿಲ್ಲೆಗಳ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳಿಗೆ ಫೆ.13ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.73.94 ಹಾಗೂ 20ರಂದು ನಡೆದ ಎರಡನೆ ಹಂತದ ಚುನಾವಣೆಯಲ್ಲಿ ಶೇ.69.32ರಷ್ಟು ಸೇರಿದಂತೆ ಒಟ್ಟಾರೆ ಶೇ.71.63ರಷ್ಟು ಮತದಾನವಾಗಿದೆ.
ಈ ಚುನಾವಣೆಯಲ್ಲಿ ಶೇ.83.90ರಷ್ಟು ಮತದಾನ ಮಾಡುವ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಗ್ರಸ್ಥಾನದಲ್ಲಿದ್ದರೆ, ಶೇ.62.21ರಷ್ಟು ಮತದಾನ ವಾಗಿರುವ ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಇದಲ್ಲದೆ, ಬೆಂಗಳೂರು ನಗರ-ಶೇ.69.77, ರಾಮನಗರ-ಶೇ.81.95, ಚಿತ್ರದುರ್ಗ-ಶೇ.73.81, ದಾವಣಗೆರೆ- ಶೇ.75.63ರಷ್ಟು ಮತದಾನವಾಗಿದೆ.
ಕೋಲಾರ-ಶೇ.81.52, ಚಿಕ್ಕಬಳ್ಳಾಪುರ-ಶೇ.80.97, ಶಿವಮೊಗ್ಗ-ಶೇ.73.05, ತುಮಕೂರು-ಶೇ.75.07, ಬೆಳಗಾವಿ-ಶೇ.70.83, ಬಾಗಲಕೋಟೆ-ಶೇ.71.16, ಧಾರವಾಡ-ಶೇ.70.73, ಗದಗ-ಶೇ.67.28, ಹಾವೇರಿ-ಶೇ.72.37, ಉತ್ತರ ಕನ್ನಡ-ಶೇ.67.54ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಚಿಕ್ಕಮಗಳೂರು-ಶೇ.70.53, ದಕ್ಷಿಣ ಕನ್ನಡ-ಶೇ.69.16, ಉಡುಪಿ-ಶೇ.68.17, ಹಾಸನ-ಶೇ.74.49, ಕೊಡಗು-ಶೇ.65.29, ಮಂಡ್ಯ-ಶೇ.73.31, ಮೈಸೂರು- ಶೇ.74.65, ಚಾಮರಾಜನಗರ-ಶೇ.74.60, ವಿಜಯಪುರ-ಶೇ.64.39, ಬೀದರ್- ಶೇ.64.07, ಬಳ್ಳಾರಿ- ಶೇ.73.76, ರಾಯಚೂರು-ಶೇ.66.90, ಕಲಬುರಗಿ- ಶೇ.63.69, ಯಾದಗಿರಿ-62.21 ಹಾಗೂ ಕೊಪ್ಪಳ-ಶೇ.70.73ರಷ್ಟು ಮತದಾನ ವಾಗಿದೆ.
ಫೆ.23ಕ್ಕೆ ಫಲಿತಾಂಶ:  ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ಗಳಿಗೆ ಎರಡು ಹಂತಗಳಲ್ಲಿ ನಡೆದಿರುವ ಚುನಾವಣೆಗಳ ಮತಗಳ ಎಣಿಕೆ ಕಾರ್ಯವು ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಫೆ.23ರಂದು ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿದ್ದು, ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News