ಕತ್ತಲೆಯಲ್ಲಿ ಮುಳುಗಿದ ಮಿಂಟೋ ಕಣ್ಣಿನ ಆಸ್ಪತ್ರೆ

Update: 2016-02-22 17:14 GMT

ಬೆಂಗಳೂರು, ಫೆ.22: ಇಲ್ಲಿನ ಚಾಮರಾಜಪೇಟೆಯಲ್ಲಿರುವ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಕಳೆದ ಎರಡು ದಿನಗಳಿಂದ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡ ಕಾರಣದಿಂದಾಗಿ ಚಿಕಿತ್ಸೆ ಪಡೆಯುತ್ತಿರುವ ನೂರಾರು ಮಂದಿ ಕಣ್ಣು ರೋಗಿಗಳು ಪರದಾಡುವಂತಾಗಿದೆ.
ಟ್ರಾನ್ಸ್ ಫಾರ್ಮರ್‌ ಕೆಟ್ಟು ಹೋಗಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ  ಮಿಂಟೋ ಆಸ್ಪತ್ರೆಯಲ್ಲಿ ಕತ್ತಲು ಆವರಿಸಿದೆ. ಬೆಳಕು ನೀಡುವ ಆಸ್ಪತ್ರೆ ಗಾಢಾಂಧಕಾರದಲ್ಲಿ ಮುಳುಗಿದೆ.
 ಆಸ್ಪತ್ರೆಯ ಜನರೇಟರ್‌ ಕೆಟ್ಟು ಹೋಗಿದೆ.ಇದರಿಂದ ಸಮಸ್ಯೆ ಇನ್ನಷ್ಟು ಹದಗಟ್ಟಿದೆ.  ಆಸ್ಪತ್ರೆಯಲ್ಲಿ ಎಲ್ಲೆಲ್ಲೋ ಮೊಂಬತ್ತಿ ಉರಿಯುತ್ತಿದೆ. ರೋಗಿಗಳಿಗೆ ಮೊಂಬತ್ತಿ ಬೆಳಕಿನಲ್ಲೇ  ಕಾಲ ಕಳೆಯುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News