ಪಾಂಪೋರ್ ಉಗ್ರರ ಕಾರ್ಯಾಚರಣೆ ಅಂತ್ಯ
Update: 2016-02-22 23:56 IST
ಜಮ್ಮು-ಕಾಶ್ಮೀರದ ಪಾಂಪೋರ್‌ನಲ್ಲಿ ಕಳೆದ 48 ಗಂಟೆಗಳಿಂದ ನಡೆಯುತ್ತಿದ್ದ ಭದ್ರತಾ ಪಡೆಗಳು ಮತ್ತು ಉಗ್ರರ ನಡುವಿನ ಕಾಳಗ ಕೊನೆಗೂ ಸೋಮವಾರ ಅಂತ್ಯಗೊಂಡಿದೆ. ಕಟ್ಟಡದೊಳಗೆ ಅವಿತುಕೊಂಡಿದ್ದ ಎಲ್ಲ ಮೂವರು ಉಗ್ರರನ್ನು ಕೊಲ್ಲಲಾಗಿದೆ ಎಂದು ಭಾರತೀಯ ಸೇನೆ ಸೋಮವಾರ ಸಂಜೆ ಪ್ರಕಟಿಸಿದೆ. ಮೂರು ದಿನಗಳ ಕಾಲ ನಡೆದ ಈ ಗುಂಡಿನ ಘರ್ಷಣೆಯಲ್ಲಿ ಐವರು ಯೋಧರು, ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿ ಹಾಗೂ ಓರ್ವ ನಾಗರಿಕ ಸಾವನ್ನಪ್ಪಿದ್ದಾರೆ.