ಇಂದಿನಿಂದ ನಗರದಲ್ಲಿ ದ್ರಾಕ್ಷಿ-ಕಲ್ಲಂಗಡಿ ಮೇಳ
ಪ್ರಭಾಕರ ಚೀಮಸಂದ್ರ
ಬೆಂಗಳೂರು, ಫೆ. 23: ಬೇಸಿಗೆ ದಾಹ ನೀಗಿಸಲು ನಗರ ಮಾರುಕಟ್ಟೆಗೆ ಫೆಬ್ರವರಿ ತಿಂಗಳಲ್ಲೇ ಕಲ್ಲಂಗಡಿ ಮತ್ತು ದ್ರಾಕ್ಷಿ ಲಗ್ಗೆಯಿಟ್ಟಿವೆ. ಅಲ್ಲದೆ ಕಲ್ಲಂಗಡಿ ಮತ್ತು ದ್ರಾಕ್ಷಿ ಹಣ್ಣುಗಳ ಮೇಳವನ್ನು ೆ.24ರಿಂದ ಈ ಬಾರಿ ವಿಶೇಷ ರೀತಿಯಲ್ಲಿ ಆಯೋಜಿಸಲು ಹಾಪ್‌ಕಾಮ್ಸ್ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ.
ಈ ಮೊದಲು ಮಾರ್ಚ್ ತಿಂಗಳಿನಲ್ಲಿ ಮಾರುಕಟ್ಟೆಗೆ ಆಗಮಿಸುತ್ತಿದ್ದ ಬೇಸಿಗೆ ಹಣ್ಣುಗಳೆಂದೇ ಖ್ಯಾತಿ ಪಡೆದಿರುವ ಕಲ್ಲಂಗಡಿ ಮತ್ತು ದ್ರಾಕ್ಷಿ ಹಣ್ಣುಗಳು, ಈ ವರ್ಷ ಫೆಬ್ರವರಿಯಲ್ಲಿ ಮಾರುಕಟ್ಟೆಗೆ ಆಗಮಿಸಿವೆ. ರಾಜ್ಯದ ನಾನಾ ಭಾಗಗಳಿಂದ ಥಾಮ್ಸನ್ ಸೀಡ್‌ಲೆಸ್, ಶರದ್, ಕೃಷ್ಣ ಶರದ್, ಪ್ಲೇಂ, ಗ್ಲೋಬ್, ಸೋನಿಕಾ ಮತ್ತಿತರ ಬಗೆಯ ರುಚಿಕರ ದ್ರಾಕ್ಷಿ ಹಾಗೂ ಲಭರಿತ ಕಲ್ಲಂಗಡಿ ಹಣ್ಣುಗಳು ಈಗಾಗಲೇ ನಗರ ಪ್ರವೇಶಿಸಿವೆ.
ಈ ಬಾರಿ ಉತ್ತಮ ಬೆಳೆಯಾಗಿದ್ದು ಕಲ್ಲಂಗಡಿ ಮತ್ತು ದ್ರಾಕ್ಷಿ ಬೆಳೆ ಬಂಪರ್ ಬಂದಿದೆ. ಅಲ್ಲದೆ ಬಿರು ಬೇಸಿಗೆ ಬಿಸಿಲು ಫೆಬ್ರವರಿ ತಿಂಗಳ ಆರಂಭದಲ್ಲಿ ಸುಡುತ್ತಿರುವ ಹಿನ್ನೆಲೆಯಲ್ಲಿ ದ್ರಾಕ್ಷಿ ಮತ್ತು ಕಲ್ಲಂಗಡಿಗೆ ಭಾರಿ ಬೇಡಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಲ್ಲಂಗಡಿ ಮತ್ತು ದ್ರಾಕ್ಷಿ ಹಣ್ಣುಗಳನ್ನು ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಹಾಪ್‌ಕಾಮ್ಸ್ ಚಿಂತಿಸಿದೆ. ಮಧ್ಯವರ್ತಿಗಳ ಹಾವಳಿಯಿಲ್ಲದೆ ರೈತರಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಹಾಗೂ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಗುಣಮಟ್ಟದ ಹಣ್ಣುಗಳನ್ನು ಒದಗಿಸುವುದು ಮೇಳದ ಉದ್ದೇಶ. ಈ ವರ್ಷ ರಾಜ್ಯಾದ್ಯಂತ ಉತ್ತಮ ಬೆಳೆಯಾಗಿರುವುದರಿಂದ ದರಗಳಲ್ಲಿಯೂ ಹೆಚ್ಚಿನ ಏರಿಕೆಯಿರುವುದಿಲ್ಲ ಎನ್ನುತ್ತಾರೆ ಹಾಪ್‌ಕಾಮ್ಸ್ ಅಧ್ಯಕ್ಷ ಜಿ.ಆರ್.ಶ್ರೀನಿವಾಸನ್.
ಮೇಳದ ಪ್ರಯುಕ್ತ ಹಾಪ್‌ಕಾಮ್ಸ್‌ನ 280ಕ್ಕೂ ಹೆಚ್ಚು ಮಳಿಗೆಗಳಲ್ಲಿ ಶೇ.10ರ ರಿಯಾಯಿತಿ ದರದಲ್ಲಿ ದ್ರಾಕ್ಷಿ ಮತ್ತು ಕಲ್ಲಂಗಡಿ ಹಣ್ಣು ಮಾರಾಟವಾಗಲಿದೆ. ಜತೆಗೆ ಅಧಿಕ ಜನಸಂಚಾರ ಇರುವ ತಾಣಗಳಲ್ಲಿ 10-12 ಸಂಚಾರಿ ವಾಹನಗಳ ಮೂಲಕ ವಿಶೇಷ ಬ್ಯಾನರ್‌ಗಳಡಿ ಮಾರಾಟ ವ್ಯವಸ್ಥೆ ಕಲ್ಪಿಸಲಾಗುವುದು. ಮಳಿಗೆಗಳಿಲ್ಲದ ಬೃಹತ್ ಸ್‌ಟಾವೇರ್ ಕಂಪನಿಗಳು, ನಾನಾ ್ಯಾಕ್ಟರಿಗಳ ಮುಂಭಾಗದಲ್ಲಿ ಸಂಚಾರಿ ವಾಹನಗಳ ಮೂಲಕ ಹಣ್ಣಿನ ಮಾರಾಟ ವ್ಯವಸ್ಥೆ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹಾಪ್‌ಕಾಮ್ಸ್‌ನ ಎಲ್ಲ ಮಳಿಗೆಗಳಲ್ಲಿ ಪ್ರಸ್ತುತ ಬೆಂಗಳೂರು ಬ್ಲೂ ದ್ರಾಕ್ಷಿ- 28 ರೂ., ್ಲೇಂ ದ್ರಾಕ್ಷಿ- 94 ರೂ., ಕೃಷ್ಣ ಶರದ್- 110 ರೂ., ರೆಡ್ ಗ್ಲೋಬ್- 350 ರೂ., ಸೋನಿಕಾ- 80 ರೂ., ಟಿ.ಎಸ್. ಗ್ರೇಪ್ಸ್- 65 ರೂ., ಇಂಡಿಯನ್ ಬ್ಲಾಕ್ ಗ್ಲೋಬ್- 120 ರೂ., ಕಲ್ಲಂಗಡಿ ನಾಮಧಾರಿ 16ರೂ., ಕಲ್ಲಂಗಡಿ ಕಿರಣ್ 19 ರೂ. ನಂತೆ ಮಾರಾಟವಾಗುತ್ತಿವೆ. ಮಳೆ ಬಂದರೆ ಮೇಳಕ್ಕೆ ನಷ್ಟ
ಬೇಸಿಗೆಯಲ್ಲಿ ಅಕಾಲಿಕ ಮಳೆ ಸುರಿದರೆ ಕಲ್ಲಂಗಡಿ-ದ್ರಾಕ್ಷಿ ಮೇಳಕ್ಕೆ ನಷ್ಟವಾಗಲಿದೆ. ಒಂದು ವೇಳೆ ಮಳೆಯಾದರೆ ತೋಟದಲ್ಲಿರುವ ದ್ರಾಕ್ಷಿ ಮತ್ತು ಕಲ್ಲಂಗಡಿ ಬೆಳೆ ಕ್ಷೀಣಿಸುವುದಲ್ಲದೆ, ರೋಗ ಗಳಿಗೆ ತುತ್ತಾಗಲಿದೆ. ಅಲ್ಲದೆ ಕಲ್ಲಂಗಡಿ ಮತ್ತು ದ್ರಾಕ್ಷಿ ಹಣ್ಣುಗಳು ತನ್ನ ಸ್ವಾದವನ್ನು ಕಳೆದುಕೊಳ್ಳಲಿವೆ. ಈ ಪರಿಣಾಮ ಗ್ರಾಹಕರು ಕೊಳ್ಳಲು ಹಿಂದೆ ಸರಿದರೆ ನಷ್ಟವಾಗುವ ಭೀತಿಯಿದೆ.
ಲಾಲ್ ಬಾಗ್‌ನಲ್ಲಿ ಪ್ರದರ್ಶನ ಮತ್ತು ಮಾರಾಟ
ಪ್ರತಿವರ್ಷ ಹಣ್ಣಿನ ಮೇಳಗಳನ್ನು ಹಾಪ್‌ಕಾಮ್ಸ್ ತನ್ನ ಮಳಿಗೆಗಳಲ್ಲಿ ಆಯೋಜಿಸಲಾಗುತ್ತಿತ್ತು. ಆದರೆ ಈ ಭಾರಿ ಹಾಪ್‌ಕಾಮ್ಸ್ ಸಂಸ್ಥೆಯ ಸಂಸ್ಥಾಪಕ ಡಾ.ಎಂ.ಎಚ್.ಮರೀಗೌಡರವರ ಶತಮಾನೋತ್ಸವದ ಅಂಗವಾಗಿ ನಗರದ ಲಾಲ್‌ಬಾಗ್ ಉದ್ಯಾನದಲ್ಲಿ ಪ್ರಥಮ ಬಾರಿಗೆ ವಿಶೇಷ ಮತ್ತು ಅಪರೂಪದ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಈ ಪ್ರದರ್ಶನದಲ್ಲಿ ವಿವಿದ ತಳಿಯ ದ್ರಾಕ್ಷಿ, ಕಲ್ಲಂಗಡಿಗಳಲ್ಲದೆ ಈ ಬಾರಿ ಋತುಮಾನದ ಹಣ್ಣುಗಳ ಮಾರಾಟ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಇದಕ್ಕಾಗಿಯೇ ಮೂರು ದಿನಗಳ ಮಟ್ಟಿಗೆ 24 ಮಳಿಗೆಗಳನ್ನು ಲಾಲ್‌ಬಾಗ್ ಉದ್ಯಾನದಲ್ಲಿ ತೆರೆಯಲಾಗಿದೆ ಎಂದು ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಬೆಳ್ಳೂರು ಕೃಷ್ಣ ತಿಳಿಸಿದ್ದಾರೆ.
ಮೇಳದ ಅವಧಿಯಲ್ಲಿ ಮಳೆಯಿಲ್ಲದೆ ಉತ್ತಮ ವಾತಾವರಣವಿದ್ದರೆ ದ್ರಾಕ್ಷಿ ಸುಮಾರು 700-800 ಟನ್ ಹಣ್ಣು ಹಾಗೂ ಕಲ್ಲಂಗಡಿ ಹಣ್ಣು ಸುಮಾರು ಒಂದು ಸಾವಿರ ಟನ್‌ನಷ್ಟು ಮಾರಾಟ ಮಾಡುವ ಗುರಿ ಹೊಂದಿದ್ದೇವೆ. ಶೇ.10ರ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಮಾರಲಾಗುವುದು.
ಜಿ.ಆರ್. ಶ್ರೀನಿವಾಸನ್, ಅಧ್ಯಕ್ಷರು, ಹಾಪ್‌ಕಾಮ್ಸ್