ಜಾನ್ಸನ್&ಜಾನ್ಸನ್ ಪೌಡರ್‌ನಿಂದ ಅಂಡಾಶಯ ಕ್ಯಾನ್ಸರ್? 72ಮಿಲಿಯನ್ ಡಾಲರ್ ಪರಿಹಾರ ನೀಡುವಂತೆ ಕಂಪೆನಿಗೆ ಆದೇಶ

Update: 2016-02-24 05:58 GMT

ನ್ಯೂಯಾರ್ಕ್ :ಮಹಿಳೆಯೊಬ್ಬಳು ಅಂಡಾಶಯದ ಕ್ಯಾನ್ಸರಿನಿಂದ ಮೃತಪಟ್ಟ ಪ್ರಕರಣವೊಂದರ ವಿಚಾರಣೆ ನಡೆಸಿದ ಮಿಸ್ಸೋರಿ ರಾಜ್ಯದ ನ್ಯಾಯಾಲಯವೊಂದು ಆಕೆಯಕ್ಯಾನ್ಸರಿಗೆ ಆಕೆ ದಶಕಗಳ ಕಾಲ ಉಪಯೋಗಿಸಿದ್ದ ಜಾನ್ಸನ್&ಜಾನ್ಸನ್ ಕಂಪೆನಿಯ ಬೇಬಿ ಪೌಡರ್ ಹಾಗೂ ಶವರ್ ಟು ಶವರ್ ಟಾಲ್ಕಂ ಪೌಡರ್ ಕಾರಣವೆಂಬ ಮಹಿಳೆಯ ಕುಟುಂಬದ ವಾದವನ್ನು ಒಪ್ಪಿದ್ದು ಆಕೆಯಕುಟುಂಬಕ್ಕೆ 72ಮಿಲಿಯನ್ ಡಾಲರ್ ಪರಿಹಾರ ನೀಡುವಂತೆ ಕಂಪೆನಿಗೆ ಆದೇಶಿಸಿದೆ.

ತನ್ನ ತಾಯಿ ಅಂಡಾಶಯ ಕ್ಯಾನ್ಸರ್‌ನಿಂದ ಮೃತ ಪಟ್ಟ ನಂತರ ಮರ್ವಿನ್ ಸಾಲ್ಟರ್ ಎಂಬ ಮಹಿಳೆ ನ್ಯಾಯಾಲಯದ ಮೆಟ್ಟಿಲೇರಿದ್ದಳು. ‘‘ತನ್ನ ಕಂಪೆನಿಯ ಉತ್ಪನ್ನಗಳ ಮಾರಾಟ ಹೆಚ್ಚಿಸುವ ಭರದಲ್ಲಿ ದಶಕಗಳ ಕಾಲ ಕಂಪೆನಿಯು ತನ್ನ ಟಾಲ್ಕ್ ಉಪಯೋಗಿಸಿ ಮಾಡಲಾದ ಉತ್ಪನ್ನಗಳು ಕ್ಯಾನ್ಸರ್ಉಂಟು ಮಾಡಬಹುದೆಂದು ಗ್ರಾಹಕರಿಗೆ ಎಚ್ಚರಿಸಲು ವಿಫಲವಾಗಿದೆ,’’ ಎಂದು ದೂರುದಾರರು ಆಪಾದಿಸಿದ್ದಾರೆಂದು ದಿ ಡೈಲಿ ಮೇಲ್ ವರದಿ ಮಾಡಿದೆ. ಕಂಪೆನಿಯು ಈ ಕೋರ್ಟ್ ತೀರ್ಮಾನವನ್ನು ಪ್ರಶ್ನಿಸಬೇಕೇ ಅಥವಾ ಬೇಡವೇ ಎಂಬುದನ್ನು ಪರಾಮರ್ಶಿಸುತ್ತಿದೆಯೆಂದುನ್ಯೂಜೆರ್ಸಿಯಲ್ಲಿರುವ ಜಾನ್ಸನ್ ಎಂಡ್ ಜಾನ್ಸನ್ ಕಂಪೆನಿಯ ವಕ್ತಾರೆ ತಿಳಿಸಿದ್ದಾರೆಂದೂ ವರದಿ ಮಾಹಿತಿ ನೀಡಿದೆ.


ಈ ಖ್ಯಾತ ಕಂಪೆನಿ ತೊಂದರೆಗೆ ಸಿಕ್ಕಿ ಹಾಕಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಜಾನ್ಸನ್ ಎಂಡ್ ಜಾನ್ಸನ್ ಕಂಪೆನಿತನ್ನ ಬೇಬಿ ಕೇರ್ ಹಾಗೂ ವಯಸ್ಕರಿಗಾಗಿರುವ ಉತ್ಪನ್ನಗಳಿಂದ ಪ್ರಶ್ನಾರ್ಹ ಮಿಶ್ರಣಾಂಶಗಳನ್ನು ಹಿಂದಕ್ಕೆಪಡೆಯಬೇಕೆಂದುಕ್ಯಾಂಪೇನ್ ಫಾರ್ ಸೇಫ್ ಕಾಸ್ಮೆಟಿಕ್ಸ್ ಎಂಬ ಹಲವು ಸಂಘಟನೆಗಳ ಒಕ್ಕೂಟವುಮೇ 2009ರಲ್ಲಿ ಒತ್ತಾಯಿಸಿದ ಬಳಿಕ ಕಂಪೆನಿಈ ಬೇಡಿಕೆಗೆ 2012ರಲ್ಲಿ ಒಪ್ಪಿತ್ತೆಂದು ದಿ ಗಾರ್ಡಿಯನ್ ವರದಿಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News