ಸಂಸತ್ತಿನ ಘನತೆ ಎತ್ತಿ ಹಿಡಿಯುವ ಭಾಷಣ
Update: 2016-02-25 12:03 IST
ಸಂಸದ ಪ್ರೊ. ಸುಗತ ಬೋಸ್ ಅವರ ಬುಧವಾರದ ಭಾಷಣ ಕೇಳಿ.
ಪ್ರಜಾಪ್ರಭುತ್ವದ ಆತ್ಮವಾದ ಸಂಸತ್ತಿನಲ್ಲಿ ಮಾತನಾಡುವುದೆಂದರೆ ತನ್ನ ಪ್ರಮಾದಗಳನ್ನು ಸಮರ್ಥಿಸಿಕೊಂಡು ಅಬ್ಬರಿಸಿ ಮಾಡುವ ಭಾವನಾತ್ಮಕ ಬ್ಲ್ಯಾಕ್ ಮೇಲ್ ಅಲ್ಲ. ಸದನದಲ್ಲಿ ಹೇಗೆ ಮಾತನಾಡಬೇಕೆಂದು ಬುಧವಾರ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ, ಹಾರ್ವರ್ಡ್ ಸಹಿತ ಖ್ಯಾತನಾಮ ವಿವಿಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಇತಿಹಾಸಕಾರ ಪ್ರೊ. ಸುಗತ ಬೋಸ್ ತೋರಿಸಿಕೊಟ್ಟಿದ್ದಾರೆ. ರಾಷ್ಟ್ರೀಯತೆಯ "ಸಂಕುಚಿತ, ಸ್ವಾರ್ಥ ಹಾಗು ಅಹಂಕಾರಿ " ವ್ಯಾಖ್ಯೆಯನ್ನು ಬಿಟ್ಟು ಮಹಾತ್ಮ ಗಾಂಧೀಜಿ ಅವರು ಕಲಿಸಿದ ವಿಶಾಲ ಮನೋಭಾವದ ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿರುವ ಬೋಸ್ ಮಾಡಿರುವ ಭಾಷಣ ದೇಶದ ಎಲ್ಲ ಸಂಸದರು, ಯುವಜನತೆ ಹಾಗು ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ಇದು ನೀವು ಕೇಳಲೇಬೇಕಾದ ಭಾಷಣ. ಇಲ್ಲಿ ಗಲಾಟೆಯಿಲ್ಲ , ವಿಷಯವಿದೆ.